ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿ ನಾಯಕರ ಮನೆ ಗೇಟ್ ಮುಟ್ಟಿ ಫೋಟೋ ತೆಗಿಸಿಕೊಂಡು ಬರೋದು

|
Google Oneindia Kannada News

ದಾವಣಗೆರೆ, ಜೂನ್ 1: ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ದ ಬಂಡಾಯ ಎದ್ದಿರುವ ಸಿ.ಪಿ.ಯೋಗೇಶ್ವರ್ ವಿರುದ್ದ ಮತ್ತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಗುಡುಗಿದ್ದಾರೆ.

"ಕೆಲವರು ದೆಹಲಿಗೆ ಹೋಗಿ, ನಮ್ಮ ಕೇಂದ್ರ ನಾಯಕರ ಗೇಟ್ ಮುಟ್ಟಿ ಅದನ್ನು ಫೋಟೋ ತೆಗೆಸಿಕೊಂಡು, ಇಲ್ಲಿಗೆ ಬಂದು ಮುಖ್ಯಮಂತ್ರಿ ಬದಲಾವಣೆ ಎಂದು ಸುಳ್ಳು ಹೇಳುತ್ತಿದ್ದಾರೆ"ಎಂದು ಯೋಗೇಶ್ವರ್ ಹೆಸರು ಉಲ್ಲೇಖಿಸದೇ ರೇಣುಕಾಚಾರ್ಯ ಟೀಕಿಸಿದರು.

"ವಿಧಿಯೇ ನೀನೆಷ್ಟು ಕ್ರೂರಿ'': ಸೋಂಕಿತನ ಅಂತ್ಯಸಂಸ್ಕಾರ ಮಾಡಿ ಭಾವುಕರಾದ ರೇಣುಕಾಚಾರ್ಯ

"ಕೊರೊನಾ ಹಾವಳಿ ಮುಗಿಯಲಿ ನನ್ನ ಶಕ್ತಿ ಏನು ಎಂದು ತೋರಿಸುತ್ತೇನೆ. ಸಮಯ, ಸಂದರ್ಭ ಗೊತ್ತಿಲ್ಲದೇ ರಾಜಕೀಯ ಮಾಡುತ್ತಿರುವವರನ್ನು ರಾಜ್ಯದ ಜನತೆಯೇ ನೋಡುತ್ತಿದ್ದಾರೆ"ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

Honnali MLA Renukacharya once again fire on CP Yogeshwar

"ಮೆಗಾಸಿಟಿ ಹಗರಣದಲ್ಲಿ ಅವರನ್ನು ಬಂಧಿಸಬೇಕು. ನಾನು ಮತ್ತು 65 ಶಾಸಕರು ಈಗಾಗಲೇ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಆ ಮನುಷ್ಯ ಮೂಲತ: ನಮ್ಮವನಲ್ಲ, ಆತ ಬಹುದೊಡ್ಡ ಅವಕಾಶವಾದಿ"ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತ ಪಡಿಸಿದರು.

"ದೊಡ್ಡದೊಡ್ಡ ಖಾತೆ ಬೇಕೆಂದು ಹೇಳುವ ಆತನಿಗೆ ಒಂದು ಗ್ರಾಮ ಪಂಚಾಯತಿ ಚುನಾವಣೆಯನ್ನು ಗೆಲ್ಲೋಕೆ ಸಾಧ್ಯವಾಗುತ್ತಿಲ್ಲ. ಸಿಎಂಗೆ ಮೊದಲೇ ಹೇಳಿದ್ದೆ, ಅವರನ್ನು ಸಚಿವರನ್ನಾಗಿ ಮಾಡಬೇಡಿ"ಎಂದು ರೇಣುಕಾಚಾರ್ಯ ಬೇಸರ ವ್ಯಕ್ತ ಪಡಿಸಿದರು.

 ಲಾಕ್ ಡೌನ್ ಇದ್ದಷ್ಟು ದಿನ ಮಾತ್ರ ಯಡಿಯೂರಪ್ಪ ಮುಖ್ಯಮಂತ್ರಿ! ಲಾಕ್ ಡೌನ್ ಇದ್ದಷ್ಟು ದಿನ ಮಾತ್ರ ಯಡಿಯೂರಪ್ಪ ಮುಖ್ಯಮಂತ್ರಿ!

Recommended Video

lockdown ವಿಚಾರವಾಗಿ ಮಹತ್ವದ ಸಭೆ!! | Oneindia Kannada

"ಸಿ.ಪಿ.ಯೋಗೇಶ್ವರ್ ಗೆ ಏನೂ ಆಗುವುದಿಲ್ಲ, ಒಂದಾ ಅವರು ಡಿಸಿಎಂ, ಇಲ್ಲವೇ ಇಂಧನ ಸಚಿವರಾಗಬಹುದು, ಇಲ್ಲವೋ ಯಡಿಯೂರಪ್ಪ ರಾಜೀನಾಮೆ ನೀಡಬಹುದು"ಎನ್ನುವ ಅಭಿಪ್ರಾಯವನ್ನು ಯತ್ನಾಳ್ ವ್ಯಕ್ತ ಪಡಿಸಿದ್ದರು.

English summary
Speculations on Karnataka Leadership Change: Honnali MLA Renukacharya once again fire on CP Yogeshwar over his statement on BSY and BYV
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X