ಹರಿಹರದಲ್ಲಿ ಹೈಟೆಕ್ ಪ್ರೀ ಕಾಸ್ಟ್ ಸಾಮೂಹಿಕ ಶೌಚಾಲಯ ಉದ್ಘಾಟನೆ
ಹರಿಹರ, ಜನವರಿ 28: ಹರಿಹರ ನಗರದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಸೌಕರ್ಯಗಳುಳ್ಳ ಹೈಟೆಕ್ ಪ್ರೀ ಕಾಸ್ಟ್ ಸಾಮೂಹಿಕ ಶೌಚಾಲಯವನ್ನು ಹರಿಹರದ ಶಾಸಕ ಎಸ್.ರಾಮಪ್ಪ ಉದ್ಘಾಟಿಸಿದರು.
"ಸ್ವಚ್ಛತೆ ಎಂಬುದು ಗಾಂಧೀಜಿಯವರ ಕನಸಾಗಿದ್ದು, ಅದನ್ನು ನನಸು ಮಾಡಲು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಪ್ರಯತ್ನಿಸುತ್ತಿದ್ದು, ಹರಿಹರದಲ್ಲಿ ಹೈಟೆಕ್ ಸಾಮೂಹಿಕ ಶೌಚಾಲಯವನ್ನು ನಿರ್ಮಿಸುವುದರ ಮೂಲಕ ಈ ಪ್ರಯತ್ನಕ್ಕೆ ಸಹಕಾರ ದೊರೆತಿದೆ" ಎಂದು ಶಾಸಕ ರಾಮಪ್ಪ ಹೇಳಿದರು.
ಈ ವೇಳೆ ವಾರ್ಡಿನ ಸದಸ್ಯರಾದ ಎಂ.ಡಿ ಮುಜಾಮಿಲ್ಲಾ (ಬಿಲ್ಲು), ಆಯುಕ್ತರಾದ ಎಸ್.ಲಕ್ಷ್ಮೀ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಎಸ್.ಎಸ್. ಬಿರಾದಾರ, ಸಹಾಯಕ ಇಂಜಿನಿಯರ್ ಅಬ್ದುಲ್ ಹಮೀದ್ ಇದ್ದರು.

ದಾವಣಗೆರೆ ಜಿಲ್ಲೆಯ ಹರಿಹರ ನಗರಸಭೆಯು ಒಂದು ಹೆಜ್ಜೆ ಮುಂದೆ ಸಾಗಿ pre Cast (ಮುಂಚೆಯೇ ಸಿದ್ದಪಡಿಸಿದ) ಸಾಮಗ್ರಿಗಳೊಂದಿಗೆ ಹರಿಹರ ಬಸ್ ನಿಲ್ದಾಣ ಬಳಿ 30 X 10 ಅಳತೆಯ ಜಾಗದಲ್ಲಿ ಅತ್ಯಾಧುನಿಕ ಸೌಕರ್ಯಗಳುಳ್ಳ ಹೈಟೆಕ್ ಸಾಮೂಹಿಕ ಶೌಚಾಲಯವನ್ನು ನಿರ್ಮಿಸಿ ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳಿಗೆ ಮಾದರಿಯಾಗಿದೆ.

ಹರಿಹರ ಬಸ್ ನಿಲ್ದಾಣ ಪಕ್ಕದಲ್ಲಿ, ರೇಲ್ವೆ ಸ್ಟೇಷನ್‍ಗೆ ಹೋಗುವ ರಸ್ತೆಯಲ್ಲಿರುವ ಜಾಗ ಬಯಲು ಬಹಿರ್ದೆಸೆ ತಾಣವಾಗಿತ್ತು. ನಗರ ಪ್ರವೇಶಿಸುತ್ತಿದ್ದಂತೆ ದುರ್ನಾತದಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರೂ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇತ್ತು. ಇದನ್ನು ಕಂಡು ಇದಕ್ಕೊಂದು ತಾರ್ಕಿಕ ಪರಿಹಾರ ಒದಗಿಸಲು ಸ್ಥಳೀಯ ಶಾಸಕರಾದ ಎಸ್.ರಾಮಪ್ಪ ಸೇರಿದಂತೆ ಇತರರ ಪರಿಶ್ರಮ ಮತ್ತು ಕಾಳಜಿಯ ಪರಿಣಾಮವಾಗಿ ಈಗ ಇಲ್ಲೊಂದು ಹೈಟೆಕ್ ಶೌಚಾಲಯ ನಿರ್ಮಾಣಗೊಂಡಿದೆ. ಶೌಚಾಲಯವು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ನಗರ ಸಭೆ ಮನವಿ ಮಾಡಿದೆ.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications