ತಪ್ಪು ಮಾಡಿದರೆ ದಂಡ ತಪ್ಪಲ್ಲ; ಸರ್ಕಾರಿ ವಾಹನಕ್ಕೆ ದಂಡ ಹಾಕಿದ ಪೊಲೀಸರು

ದಾವಣಗೆರೆ, ಸೆಪ್ಟೆಂಬರ್ 10: ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ದೇಶಾದ್ಯಂತ ಜಾರಿಗೆ ಬಂದಿದ್ದು, ಎಲ್ಲೆಲ್ಲೂ ಈ ಕುರಿತು ಚರ್ಚೆ ನಡೆಯುತ್ತಿದೆ. ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ದುಬಾರಿ ದಂಡವನ್ನು ವಿಧಿಸಲಾಗುತ್ತಿದೆ. ಜನರು ಸಾವಿರಾರು ರೂಪಾಯಿ ದಂಡ ತೆರುತ್ತಿರುವ ಉದಾಹರಣೆಗಳೂ ಸಿಗುತ್ತಲೇ ಇವೆ.

ಸಂಚಾರಿ ಪೊಲೀಸರೂ ಅಷ್ಟೆ. ಈ ವಿಷಯದಲ್ಲಿ ಕಟ್ಟುನಿಟ್ಟಾಗಿದ್ದಾರೆ. ಸಾರ್ವಜನಿಕರಷ್ಟೇ ಅಲ್ಲ, ಸರ್ಕಾರಿ ವಾಹನಗಳಿಗೂ ಈ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಉದಾಹರಣೆಯೊಂದು ದಾವಣಗೆರೆಯಲ್ಲಿ ದೊರೆತಿದೆ.

ದಾವಣಗೆರೆಯಲ್ಲಿ ಸರ್ಕಾರಿ ವಾಹನಕ್ಕೂ ಸಂಚಾರಿ ಪೊಲೀಸರು ದಂಡ ಹಾಕಿದ್ದಾರೆ. ದಾವಣಗೆರೆಯ ಪಿಬಿ ರಸ್ತೆಯಲ್ಲಿ ತಪಾಸಣೆಯಲ್ಲಿ ತೊಡಗಿದ್ದ ಸಂಚಾರಿ ಪೊಲೀಸರು ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆಯ ವಾಹನ ಸೇರಿದಂತೆ ಹಲವು ಸರ್ಕಾರಿ ವಾಹನಗಳಿಗೆ ದಂಡ ವಿಧಿಸಿದ್ದಾರೆ.

Department Of Women And Child Welfare Fined In PB Road

ಈ ವಾಹನದ ಚಾಲಕರು ಸೀಟ್ ಬೆಲ್ಟ್‌ ಧರಿಸದೇ ವಾಹನ ಚಲಾಯಿಸುತ್ತಿದ್ದರು. ಆಗ ಸಂಚಾರಿ ಪೊಲೀಸರು ಕಾರನ್ನು ತಡೆದು, ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+