ದಾವಣಗೆರೆ-ಹರಿಹರ ಜೋಡಿ ಮಾರ್ಗ ರೈಲು ಸಂಚಾರಕ್ಕೆ ಮುಕ್ತ

ದಾವಣಗೆರೆ, ನವೆಂಬರ್ 28 : ದಾವಣಗೆರೆ-ಹರಿಹರ ನಡುವಿನ ಜೋಡಿ ಹಳಿ ಸಂಚಾರಕ್ಕೆ ಮುಕ್ತವಾಗಿದೆ. ಹುಬ್ಬಳ್ಳಿ-ಚಿಕ್ಕಜಾಜೂರು ನಡುವಿನ ಜೋಡಿ ಹಳಿ ಯೋಜನೆಯಡಿ ಅವಳಿನಗರಗಳ 13 ಕಿ. ಮೀ. ಮಾರ್ಗದಲ್ಲಿ ಜೋಡಿ ಹಳಿ ನಿರ್ಮಾಣ ಮಾಡಲಾಗಿದೆ.

ಬುಧವಾರ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 12080 ಜೋಡಿ ಹಳಿಯ ಮೂಲಕ ದಾವಣಗೆರೆಯಿಂದ ಹರಿಹರಕ್ಕೆ ಸಂಚಾರ ನಡೆಸಿದೆ. ಕೆಲವು ದಿನಗಳ ಹಿಂದೆ ರೈಲ್ವೆ ಸುರಕ್ಷತಾ ಆಯುಕ್ತರು ಜೋಡಿ ಹಳಿ ಪರಿಶೀಲನೆ ನಡೆಸಿ, ಸಂಚಾರಕ್ಕೆ ಒಪ್ಪಿಗೆ ಕೊಟ್ಟಿದ್ದರು.

ಸುಮಾರು 120 ಕೋಟಿ ಹೆಚ್ಚದಲ್ಲಿ 13 ಕಿ. ಮೀ. ಮಾರ್ಗದಲ್ಲಿ ಜೋಡಿ ಹಳಿ ನಿರ್ಮಾಣ ಮಾಡಲಾಗಿದೆ. ಈ ಮಾರ್ಗದಲ್ಲಿ ದಾವಣಗೆರೆ, ಅಮರಾವತಿ ಕಾಲೋನಿ ಮತ್ತು ಹರಿಹರ ಸೇರಿ ಮೂರು ನಿಲ್ದಾಣಗಳಿವೆ. ರೈಲ್ವೆ ನಿಲ್ದಾಣ ಮತ್ತು ನಗರ ಪ್ರದೇಶವಾದ ಕಾರಣ ದಾವಣಗೆರೆಯಲ್ಲಿ ಕಾಮಗಾರಿ ಸ್ವಲ್ಪ ತಡವಾಗಿತ್ತು.

Davanagere Harihar Railway Line Doubled

ಹುಬ್ಬಳ್ಳಿ-ಚಿಕ್ಕಜಾಜೂರು ನಡುವಿನ 190 ಕಿ. ಮೀ. ಮಾರ್ಗದ ಜೋಡಿ ಹಳಿ ಯೋಜನೆ ಭಾಗವಾಗಿ ದಾವಣಗೆರೆ-ಹರಿಹರ ನಡುವೆ ಜೋಡಿಹಳಿ ನಿರ್ಮಾಣ ಮಾಡಲಾಗಿದೆ. ಹುಬ್ಬಳ್ಳ-ಚಿಕ್ಕಜಾಜೂರು ಜೋಡಿ ಹಳಿ ಯೋಜನೆ 2022ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

2015ರಲ್ಲಿ ಹುಬ್ಬಳ್ಳಿ-ಚಿಕ್ಕಜಾಜೂರು ನಡುವೆ ಜೋಡಿ ಹಳಿ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿತ್ತು. 1,141 ಕೋಟಿ ರೂ.ಗಳ ಯೋಜನೆ ಇದಾಗಿದೆ. 2018ರ ಡಿಸೆಂಬರ್‌ನಲ್ಲಿ ಚಿಕ್ಕಜಾಜೂರು-ತೋಳಹುಣಸೆ ನಡುವಿನ 37 ಕಿ. ಮೀ. ಮಾರ್ಗ ಸಂಚಾರಕ್ಕೆ ಮುಕ್ತವಾಗಿತ್ತು.

ಚಿಕ್ಕಜಾಜೂರು-ಹರಿಹರ ನಡುವಿನ 50 ಕಿ. ಮೀ. ಮಾರ್ಗ (ತೋಳಹುಣಸೆ-ದಾವಣಗೆರೆ 10 ಕಿ. ಮೀ) ಹೊರತುಪಡಿಸಿ ಉಳಿದ ಕಡೆ ಜೋಡಿ ಹಳಿ ಕಾಮಗಾರಿ ಮುಕ್ತಾಯವಾಗಿದೆ. ತೋಳಹುಣಸೆ-ದಾವಣಗೆರೆ, ಹರಿಹರ-ದೇವರಗುಡ್ಡ ಮಾರ್ಗ 2020ರ ಮಾರ್ಚ್ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+