ಆಟೋದಲ್ಲೇ ಲಕ್ಷಾಂತರ ರೂಪಾಯಿ ಕಳೆದುಕೊಂಡ ವೃದ್ಧ ದಂಪತಿ
ದಾವಣಗೆರೆ, ಜನವರಿ 10: ಜಮೀನು ಮಾರಿದ ಹಣವನ್ನು ಬ್ಯಾಂಕ್ ನಲ್ಲಿಡಲು ಬಂದ ದಂಪತಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮಾಣಿಕ್ಯಾ ವಾಸಗರ್ ಹಾಗೂ ತಿಲಕವತಿ ಹಣ ಕಳೆದುಕೊಂಡ ದಂಪತಿ. ದಂಪತಿ, ತಮ್ಮ ಜಮೀನನ್ನು 40 ಲಕ್ಷಕ್ಕೆ ಮಾರಾಟ ಮಾಡಿ ಒಂದು ಲಕ್ಷವನ್ನು ಮನೆಯಲ್ಲಿಟ್ಟು ಬ್ಯಾಂಕ್ ನಲ್ಲಿಡಲು ಆಟೋದಲ್ಲಿ ನಗರದ ಕೆಆರ್ ಮಾರ್ಕೆಟ್ ಸಮೀಪದ ವೈಶ್ಯಾ ಬ್ಯಾಂಕ್ ಬಳಿ ಬಂದಿದ್ದಾರೆ. ಆದರೆ ಇಳಿಯುವಾಗ ಆ ಆಟೋದಲ್ಲೆ ಬ್ಯಾಗ್ ಬಿಟ್ಟಿದ್ದಾರೆ.

ಆಟೋ ಹೋದ ನಂತರ ಬ್ಯಾಗ್ ಹುಡುಕಾಡಿದ್ದು, ಅದನ್ನು ಆಟೋದಲ್ಲಿ ಬಿಟ್ಟಿರುವುದು ನೆನಪಿಗೆ ಬಂದಿದೆ. ಹಣವನ್ನು ಕಳೆದುಕೊಂಡ ಮಾಣಿಕ್ಯ ವಾಸಗರ್ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಷ್ಟು ಹಣವನ್ನು ಕಳೆದುಕೊಂಡ ಈ ದಂಪತಿ, ಆಟೋ ಚಾಲಕ ತಮ್ಮ ಬ್ಯಾಗನ್ನು ಮರಳಿ ನೀಡಿದರೆ ಸೂಕ್ತ ಬಹುಮಾನ ನೀಡುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications