ಶೀಘ್ರದಲ್ಲೇ ದಾವಣಗೆರೆಯಲ್ಲಿ ಬೈಸಿಕಲ್ ಶೇರಿಂಗ್ ಸೇವೆ ಆರಂಭ

ದಾವಣಗೆರೆ, ಮೇ 03 : ಮೈಸೂರಿನ ಬಳಿಕ ದಾವಣಗೆರೆ ನಗರದಲ್ಲಿ ಬೈಸಿಕಲ್ ಶೇರಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಆಗಸ್ಟ್‌ ತಿಂಗಳಿನಲ್ಲಿ ದಾವಣಗೆರೆಯಲ್ಲಿ ಈ ಸೇವೆಯನ್ನು ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಸೈನ್ ಪೋಸ್ಟ್ ಇಂಡಿಯಾ ಕಂಪನಿ ದಾವಣಗೆರೆ ನಗರದಲ್ಲಿ ಬೈಸಿಕಲ್ ಶೇರಿಂಗ್ (ಪಿಬಿಎಸ್) ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ.

ದಾವಣಗೆರೆ ಈಗ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿದೆ. 10 ವರ್ಷಗಳ ತನಕ ನಗರದಲ್ಲಿ ಬೈಸಿಕಲ್ ಶೇರಿಂಗ್ ವ್ಯವಸ್ಥೆ ಒದಗಿಸಲು ಕಂಪನಿ ಮುಂದಾಗಿದೆ. ಜನರು ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಾಡಿಗೆ ಪಡೆಯಬಹುದಾಗಿದೆ.

Bicycle rental service in Davanagere soon

ಸೈನ್ ಪೋಸ್ಟ್ ಇಂಡಿಯಾ ಕಂಪನಿ ಮಹಾರಾಷ್ಟ್ರದ ಧಾಣೆ ಹಾಗೂ ಛತ್ತೀಸ್‌ಗಢದ ನಯಾ ರಾಯ್‌ಪುರ್‌ ನಗರಗಳಲ್ಲಿ ಈಗಾಗಲೇ ಬೈಸಿಕಲ್ ಶೇರಿಂಗ್ ವ್ಯಸ್ಥೆಯನ್ನು ಆರಂಭಿಸಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ದಾವಣಗೆರೆಯಲ್ಲಿ ಇದನ್ನು ಜಾರಿಗೆ ತರಲಾಗುತ್ತಿದೆ.

'ಮುಂದಿನ ಆಗಸ್ಟ್‌ನಿಂದ ದಾವಣಗೆರೆಯಲ್ಲಿ ಬೈಸಿಕಲ್ ಶೇರಿಂಗ್ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಅಗತ್ಯವಿರುವ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗುತ್ತಿದೆ. 200 ಸೈಕಲ್ ಅನ್ನು ಪ್ರಾಯೋಗಿಕವಾಗಿ ಜನರಿಗೆ ನೀಡಲಾಗುತ್ತಿದೆ. ಸುಮಾರು 10 ಸಾವಿರ ಜನರು ಈ ಸೇವೆಯ ಸೌಲಭ್ಯ ಪಡೆಯಬಹುದು ಎಂದು ಅಂದಾಜಿಸಲಾಗಿದೆ' ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀಪಾದ ಅಶ್ತೇಕರ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಟ್ರಿಣ್ ಟ್ರಿಣ್ ಸೈಕಲ್ ಯೋಜನೆ ಮೈಸೂರು ನಗರದಲ್ಲಿ ಜಾರಿಯಲ್ಲಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರು ನಗರದಲ್ಲಿಯೂ ಯೋಜನೆ ಆರಂಭಿಸಲು ಪ್ರಯತ್ನ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+