• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್ಥಿಕ ನೆರವಿಗಾಗಿ ಬ್ಯಾಂಡ್ಸೆಟ್, ಷಹನಾಯ್ ವಾದಕರ ಮನವಿ

|

ದಾವಣಗೆರೆ, ಮೇ 24: ರಾಜ್ಯ ಸರ್ಕಾರ ವಿವಿಧ ವಲಯಗಳ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ 1610 ಕೋಟಿ ರು ಗೂ ಅಧಿಕ ಆರ್ಥಿಕ ಪ್ಯಾಕೇಜ್ ಘೋಷಿಸಲಾಗಿದೆ. ಆದರೆ, ಶುಭ ಸಮಾರಂಭಗಳಿಗೆ ಬ್ಯಾಂಡ್ಸೆಟ್, ಷಹನಾಯ್ ವಾದಕರಿಗೆ ಸರಿಯಾದ ಆರ್ಥಿಕ ನೆರವು ಸಿಕ್ಕಿಲ್ಲ ಎಂಬ ಕೂಗೆದ್ದಿದೆ.

   ಈತ ವೈದ್ಯನಂತೆ ಆದ್ರೆ ಮಾದ್ಯಮದ ಮೇಲೆ,ಪೊಲೀಸರ ಜೊತೆ ಕಿರಿಕ್ ಮಾಡಿದ್ಯಾಕೆ? | Mysore

   ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್ ನಿಂದಾಗಿ ಪ್ರತಿ ಕುಟುಂಬಗಳಿಗೆ 5,000 ರೂಪಾಯಿ ಅವರ ಖಾತೆಗೆ ಜಮೆಯಾಗುತ್ತಿದೆ. ಸವಿತಾ ಸಮಾಜದ 2,0, 000 ಕ್ಷೌರಿಕರಿಗೆ, 7,75,000 ಚಾಲಕ ವೃತ್ತಿಯಲ್ಲಿರುವವರಿಗೆ ಈ ಸೌಲಭ್ಯ ಸಿಗುತ್ತಿದೆ. ಇದೇ ರೀತಿ ಛಲವಾದಿ ಸಮಾಜದವರಿಗೆ ಪ್ಯಾಕೇಜ್ ಘೋಷಿಸುವಂತೆ ಸಮಾಜದ ಅಧ್ಯಕ್ಷ ಎಸ್. ಶೇಖರಪ್ಪ ಮನವಿ ಮಾಡಿದ್ದಾರೆ.

   ಷಹನಾಯ್ ವಾದನ ವೃತ್ತಿ ಬಿಟ್ಟು ಬೇರೆ ಯಾವುದೇ ವೃತ್ತಿ ಮಾಡಲು ಬರುವುದಿಲ್ಲ. ಇದನ್ನೇ ನಂಬಿ ಜೀವನ ಮಾಡುವವರಾಗಿದ್ದು, ಇತರರಿಗೆ ಮುಖ್ಯಮಂತ್ರಿಗಳು ಘೋಷಿಸಿರುವಂತೆ ಸುಮಾರು 1,50,000 ಸಂಘಟಿತ ಜನಸಂಖ್ಯೆ ಇರುವ ಕುಟುಂಬವೊಂದಕ್ಕೆ 5 ಸಾವಿರ ರೂ.ಗಳಂತೆ ಘೋಷಿಸಿ ಜೀವನ ನಡೆಸಲು ಅನುಕೂಲ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

   ಸ್ಥಳೀಯ ಎಂ.ಪಿ.ಗಳು, ಎಂಎಲ್ಎಗಳು ಹಾಗೂ ಎಂಎಲ್ಸಿಗಳು ಮುಖ್ಯಮಂತ್ರಿಯವರಿಗೆ ನೇರ ಸಂಪರ್ಕ ಮಾಡಿ ಪ್ಯಾಕೇಜ್ ಘೋಷಿಸುವಂತೆ ತಾವುಗಳು ಸಮಾಜದ ಏಳಿಗೆಗೆ ಶ್ರಮ ವಹಿಸಬೇಕಾಗಿ ಕೋರಿದ್ದಾರೆ.

   English summary
   Bandset, Shehnai players and others under Chalavadi community urged Karnataka government to provide Financial Package during the Covid 19 pandemic.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X