Get Updates
Get notified of breaking news, exclusive insights, and must-see stories!

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 76.98% ಮತದಾನ, ಯಾವ್ಯಾವ ಮತಗಟ್ಟೆಗಳಲ್ಲಿ ಎಷ್ಟು?-ಅಂಕಿಅಂಶಗಳ ವಿವರ ಇಲ್ಲಿದೆ

ದಾವಣಗೆರೆ, ಮೇ, 08: ರಾಜ್ಯದಲ್ಲಿ ನಿನ್ನೆಯಷ್ಟೇ (ಮೇ 07) ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆದಿದೆ. ಈ ಪೈಕಿ ದಾವಣಗೆರೆ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಾದರೆ ಯಾವ್ಯಾವ ಮತಗಟ್ಟೆಗಳಲ್ಲಿ ಎಷ್ಟು ಮತದಾನ ಆಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ ಶೇಕಡಾ 76.98 ರಷ್ಟು ಹಕ್ಕು ಚಲಾವಣೆ ಆಗಿದೆ. ಇದುವರೆಗೂ ನಡೆದ ಚುನಾವಣೆಗಳಲ್ಲಿ ಗರಿಷ್ಠ ಮತದಾನ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.

76 98 polling in Davanagere Lok Sabha constituency-know polling station wise Statistics details

ದಾವಣಗೆರೆ ಲೋಕಸಭಾ ಕ್ಷೇತ್ರ ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಕ್ಷೇತ್ರದಲ್ಲಿ ಒಟ್ಟು 1,946 ಮತಗಟ್ಟೆಗಳಿಂದ 8,51,990 ಪುರುಷ, 8,57,117 ಮಹಿಳಾ, 137 ಇತರೆ ಸೇರಿ 17,09,244 ಮತದಾರರಿದ್ದಾರೆ. ಈ ಪೈಕಿ 6,67,742 ಪುರುಷ, 6,47,964 ಮಹಿಳೆಯರು ಹಾಗೂ 40 ಇತರೆ ಸೇರಿ 13,15,746 ಮತದಾನವಾಗಿ ಶೇಕಡಾ 76.98ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಕ್ಷೇತ್ರವಾರು ವಿವರ: ಜಗಳೂರು 1,00,046 ಪುರುಷ, 98,759 ಮಹಿಳೆ, 10 ಇತರೆ ಸೇರಿ 1,98,815 ಮತದಾರರಲ್ಲಿ 78,865 ಪುರುಷ, 74,956 ಮಹಿಳೆ, 3 ಇತರೆ ಸೇರಿ 1,53,824 ಮತದಾನ ಮಾಡಿ ಶೇಕಡಾ 77.37, ಹರಪನಹಳ್ಳಿ 1,12,969 ಪುರುಷ, 1,10,985 ಮಹಿಳೆ, 19 ಇತರೆ ಸೇರಿ 2,23,973 ಮತದಾರರಲ್ಲಿ 88,443 ಪುರುಷ, 84,101 ಮಹಿಳೆ, 3 ಇತರೆ ಸೇರಿ 1,72,547 ಮತದಾನವಾಗಿ ಶೇಕಡಾ 77.04ರಷ್ಟು ಮತದಾನ ಆಗಿದೆ.

ಹರಿಹರ 1,05,510 ಪುರುಷ, 1,06,870 ಮಹಿಳೆ, 17 ಇತರೆ ಸೇರಿ 2,12,397 ಮತದಾರರಲ್ಲಿ 85,515 ಪುರುಷ, 83,116 ಮಹಿಳೆ, 7 ಇತರೆ ಸೇರಿ 1,68,638 ಮತದಾನ ಮಾಡಿ ಶೇಕಡಾ 79.40ರಷ್ಟು ಮತದಾನವಾಗಿದೆ.

ದಾವಣಗೆರೆ ಉತ್ತರ 1,24,485 ಪುರುಷ, 1,28,635 ಮಹಿಳೆ, 36 ಇತರೆ ಸೇರಿ 2,53,156ರಲ್ಲಿ 88,445 ಪುರುಷ, 89,773 ಮಹಿಳಾ, 12 ಇತರೆ ಸೇರಿ 1,78,230 ಮತದಾನವಾಗಿ ಶೇಕಡಾ 70.40ರಷ್ಟು ಮತದಾನವಾಗಿದೆ. ದಾವಣಗೆರೆ ದಕ್ಷಿಣ 1,09,184 ಪುರುಷ, 1,11,774 ಮಹಿಳಾ, 39 ಇತರೆ ಸೇರಿ 2,20,997 ಮತದಾರರಲ್ಲಿ 77,854 ಪುರುಷ, 77,105 ಮಹಿಳಾ ಹಾಗೂ 8 ಇತರೆ ಸೇರಿ 1,54,967 ಮತದಾನವಾಗಿ ಶೇಕಡಾ 70.12ರಷ್ಟು ಮತದಾನವಾಗಿದೆ.

ಮಾಯಕೊಂಡ 97,759 ಪುರುಷ, 97,326 ಮಹಿಳೆ, 4 ಇತರೆ ಸೇರಿ 1,95,089 ಮತದಾರರಲ್ಲಿ 82,568 ಪುರುಷ, 79,276 ಮಹಿಳಾ, 2 ಇತರೆ ಸೇರಿ 1,61,846 ಮತದಾನವಾಗಿ ಶೇಕಡ 82.96ರಷ್ಟು ಮತದಾನವಾಗಿದೆ. ಚನ್ನಗಿರಿ 1,01,653 ಪುರುಷ, 1,02,208 ಮಹಿಳೆ, 9 ಇತರೆ ಸೇರಿ 2,03,870 ಮತದಾರರಲ್ಲಿ 82,491 ಪುರುಷ, 78,670 ಮಹಿಳಾ, 4 ಇತರೆ ಸೇರಿ 1,61,165 ಮತದಾನವಾಗಿ ಶೇಕಡ 79.05ರಷ್ಟು ಮತದಾನವಾಗಿದೆ.

ಹೊನ್ನಾಳಿ ಕ್ಷೇತ್ರದಲ್ಲಿ 1,00,384 ಪುರುಷ, 1,00,560 ಮಹಿಳೆ, 3 ಇತರೆ ಸೇರಿ 2,00,947 ಮತದಾರರಲ್ಲಿ 83,561 ಪುರುಷ, 80,967 ಮಹಿಳಾ, 1 ಇತರೆ ಸೇರಿ 1,64,529 ಮತದಾನವಾಗಿ ಶೇಕಡಾ 81.88ರಷ್ಟು ಮತದಾನವಾಗಿದೆ. 2019ರ ಚುನಾವಣೆಯಲ್ಲಿ ಶೇಕಡ 72.96ರಷ್ಟು ಮತದಾನವಾಗಿತ್ತು.

ಇನ್ನು ಲೋಕಸಭಾ ಚುನಾವಣಾ ಮತದಾನ ಎಣಿಕೆಯು ಜೂನ್ 4ರಂದು ಬೆಳಗ್ಗೆ 8 ರಿಂದ ತೋಳಹುಣಸೆಯಲ್ಲಿನ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿಯಲ್ಲಿ ನಡೆಯಲಿದ್ದು, ಅಲ್ಲಿಯವರೆಗೆ ಲೋಕಸಭಾ ಕ್ಷೇತ್ರದ 30 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಕೇಂದ್ರ ಹಾಗೂ ರಾಜ್ಯ ಸಶಸ್ತ್ರ ಮೀಸಲು ಪಡೆ ಭದ್ರತೆಯೊಂದಿಗೆ ಭದ್ರವಾಗಿರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+