ಕೇಸರಿ ಬದಲು ಭಾರತ ಬಾವುಟ ಹಾರಿಸಿ: ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ?-ಇಲ್ಲಿದೆ ಮಾಹಿತಿ
ಚಿತ್ರದುರ್ಗ, ಜನವರಿ, 28: ಕೇಸರಿ ಧ್ವಜದ ಬದಲು ದೇಶದ ಬಾವುಟವನ್ನು ಹಾರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಕೇಸರಿ ಹನುಮನ ಧ್ವಜವನ್ನು ಅಧಿಕಾರಿಗಳು ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಘಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಆ ಧ್ವಜ, ಈ ಧ್ವಜ ಬೇಡ. ಭಾರತದ ಬಾವುಟ ಹಾರಿಸಬೇಕು ಎಂದರು.

ನಾನು ಮಂತ್ರಿಯಾಗಿದ್ದಾಗ ಕಾಂತರಾಜ್ ವರದಿ ತಯಾರಾಗಿರಲಿಲ್ಲ. ಇದಾದ ಮೇಲೆ ಸಮ್ಮಿಶ್ರ ಸರ್ಕಾರ ಜಾರಿಗೆ ಬಂತು. ಆಗ ಕುಮಾರಸ್ವಾಮಿ ಸಿಎಂ ಆಗಿದ್ದರು. ಇದಾದ ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು ಈಗ ಕೊಟ್ಟರೆ ತಗೋಳ್ತೀವಿ. ವರದಿ ಏನಿದೆ ಎಂಬುದು ಗೊತ್ತಿಲ್ಲ. ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಕಾಂತರಾಜು ವರದಿ ಕೊಟ್ಟ ಮೇಲೆ ಚರ್ಚೆ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ. ನಾವು ಬಿಜೆಪಿ ನಾಯಕರ ರೀತಿ ಸುಳ್ಳು ಹೇಳುವುದಿಲ್ಲ. 28ಕ್ಕೆ 28 ಕ್ಷೇತ್ರದಲ್ಲೂ ಗೆಲಿಯುತ್ತೆವೆ ಎಂದು ಸುಳ್ಳು ಹೇಳುವುದಿಲ್ಲ ಎಂದು ಹೇಳಿದರು. ಇನ್ನು ಇಂಡಿಯಾ ಮೈತ್ರಿ ಕೂಟದಿಂದ ಕೆಲವರು ಹೊರ ಹೋಗುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸದೇ ತೆರಳಿದರು. ಇನ್ನು ಒಪಿಎಸ್ ನಿರ್ಧಾರ ಬಗ್ಗೆ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸಂವಿಧಾನ ಇಲ್ಲ ಅಂದಿದ್ರೆ ಈಶ್ವರಪ್ಪ ಕುರಿ ಕಾಯಬೇಕಾಗಿತ್ತು
ಸಮಾಜದಲ್ಲಿ ಶೋಷಿತ ವರ್ಗಗಳು ಶೋಷಿತ ಸಮುದಾಯ ಇಡೀ ಸಮಾಜದ ಜನಸಂಖ್ಯೆಯಲ್ಲಿ ಸಿಂಹ ಪಾಲು ಇರುವವರು ಶತ, ಶತಮಾನಗಳಿಂದ ಶೋಷಣೆಗೆ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ತಾವು ತಿಳಿದುಕೊಳ್ಳಬೇಕಾಗುತ್ತದೆ. ಈ ಶೋಷಣೆ ಮತ್ತು ದೌರ್ಜನ್ಯ ಈ ಸಮುದಾಯದವರ ಮೇಲೆ ಅದಕ್ಕೆ ಕಾರಣ ಜಾತಿ ವ್ಯವಸ್ಥೆ ಎಂಬುದು ಮರಿಯುವುದಕ್ಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಿತ್ರದುರ್ಗ ನಗರದ ಹೊರವಲಯದಲ್ಲಿ ನಡೆದ ಶೋಷಿತ ಸಮುದಾಯಗಳ ಬೃಹತ್ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾತಿ ವ್ಯವಸ್ಥೆಯ ಪರಿಣಾಮವಾಗಿ ಜನ ಶೋಷಿತ ಸಮುದಾಯಗಳ ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಜಾತಿ ವ್ಯವಸ್ಥೆಯ ಕಾರಣಕ್ಕಾಗಿ ಬಹುಸಂಖ್ಯಾತ ಜನರು ಅಕ್ಷರ ಸಂಸ್ಕೃತಿಕ ವಂಚಿತರಾದ ಕಾರಣ ಸಮಾಜದಲ್ಲಿ ಅಸಮಾನತೆಯನ್ನು ನೋಡಲು ಸಾಧ್ಯವಾಗುತ್ತಿದೆ ಎಂದರು.
ಸಮಾಜದಲ್ಲಿ ರಾಜಕೀಯ, ಶೈಕ್ಷಣಿಕತೆಯ ಅಸಮಾನತೆ ಇದೆ. ಈ ಅಸಮಾನತೆಯ ಕಾರಣಕ್ಕೋಸ್ಕರ ನಿರಂತರವಾಗಿ ಶೋಷಿತ ಸಮುದಾಯಗಳ ಮೇಲೆ ಶೋಷಣೆ ಮತ್ತು ದೌರ್ಜನ್ಯ ನಡೆಯುತ್ತಾ ಬಂದಿದ್ದು, ಈಗಲೂ ಕೂಡ ನಡೆಯುತ್ತಾ ಇದೆ. ನಾವು ಮರೆಯಲು ಸಾಧ್ಯವಿಲ್ಲ ಎಂದರು.
ಬುದ್ಧ, ಬಸವ, ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ನಾರಾಯಣ ಗುರು, ಕನಕದಾಸರು, ಜ್ಯೋತಿಬಾಪುಲೆ ಇವರೆಲ್ಲರೂ ಕೂಡ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಪಟ್ಟಿದ್ದರು. ಜಾತಿ ವ್ಯವಸ್ಥೆ ಹೋಗಬೇಕು, ಜಾತಿ ವ್ಯವಸ್ಥೆ ಇರುವುದರಿಂದ ಶೋಷಣೆ ದೌರ್ಜನಗಳಿಗೆ ಅವಕಾಶ ಆಗುತ್ತಾ ಬಂದಿದೆ. ಎಲ್ಲರಿಗೂ ಕೂಡ ಗೌರವದಿಂದ ಬದುಕುವ ವ್ಯವಸ್ಥೆಯನ್ನು ಸಂವಿಧಾನ ತಿಳಿಸಿದೆ. ಸಂವಿಧಾನದ ಇರುವುದರಿಂದ ಸ್ವಲ್ಪ ಮಟ್ಟಿಗೆ ದೌರ್ಜನ್ಯ, ದಬ್ಬಾಳಿಕೆ ಕಡಿಮೆ ಆಗಿದೆ ಎಂದರು.
ಸಮಾನತೆ ನಿರ್ಮಾಣವಾದರೆ ಶೋಷಣೆಗೆ, ದೌರ್ಜನಕ್ಕೆ ಅವಕಾಶ ಇಲ್ಲ ಎಂಬುದು ಮೇಲ್ವರ್ಗದ ಜನತೆಯ ಅಭಿಪ್ರಾಯವಾಗಿದೆ. ಸಮಾಜದಲ್ಲಿ ಬದಲಾವಣೆ ತರಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿ ಜಾರಿಗೆ ತಂದರು. ಸಮಾಜದಲ್ಲಿ ಸಮಾನತೆ ಬರಬೇಕಾದರೆ ಮೇಲು, ಕೀಳು ಎಂಬ ತಾರತಮ್ಯ ಹೋಗಲಾಡಿಸಬೇಕು ಎಂದರು.
ಈ ದೇಶದ ಸಂಪತ್ತು, ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು. ಹಂಚಿಕೆ ಆಗದೆ ಇರುವುದರಿಂದ ನಾವು ಸಮಾಜದಲ್ಲಿ ದೌರ್ಜನ್ಯ ಮತ್ತು ದಬ್ಬಾಳಿಕೆ ಶೋಷಣೆ ಕಾಣುತ್ತಿದ್ದೇವೆ. ಇದಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧವಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಇಂದು ಬಿಜೆಪಿಯವರು ಶ್ರೀರಾಮನನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ. ಬಿಪಿ ಮಂಡಲ್ ಕಮಿಷನ್ ವರದಿಗೆ ವಿರುದ್ಧವಾಗಿದ್ದೇವೆ ಎಂದು ಆರ್‌ಎಸ್ಎಸ್ ಅವರು ಹೇಳಿದರು. ಬಿಜೆಪಿಯವರು ಮೀಸಲಾತಿ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತಾ ಬಂದಿದ್ದಾರೆ. ಬಲಾಡ್ಯರ ಕೈಯಲ್ಲಿ ಅಧಿಕಾರ ಇದ್ದರೆ, ಅದು ಮಾರಕ ಎಂಬ ಮಾತನ್ನು ಅಂಬೇಡ್ಕರ್ ಹೇಳಿದ್ದರು. ಈಗ ನನ್ನನ್ನ ವಿರೋಧ ಮಾಡುತ್ತಿದ್ದಾರೆ. ಕಾರಣ ಕುರಿ ಕಾಯುವವನ ಮಗ ಮುಖ್ಯಮಂತ್ರಿ ಆಗಿದ್ದಾರಲ್ಲ ಎಂದು ವಿರೋಧ ಮಾಡುತ್ತಿದ್ದಾರೆ ಎಂದರು.
ನಾನೇನ್ ತಪ್ಪು ಮಾಡಿದೀನಿ, ನನ್ನನ್ನ ವಿರೋಧಿಸಲು ಕಾರಣವೇನು? ಎಲ್ಲ ಜಾತಿಯ ಬಡವರಿಗೆ ಸಮಾನತೆ ಮಾಡಿದ್ದು ತಪ್ಪಾ? ಅನ್ನ ಭಾಗ್ಯ, ಕೃಷಿ ಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಇವೆಲ್ಲ ಕಾರ್ಯಕ್ರಮಗಳನ್ನು ಮಾಡಿದ್ದು ಸಿದ್ದರಾಮಯ್ಯ ಅಲ್ಲವೇ ಮತ್ತು 5 ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಜಾರಿಗೆ ಕೊಟ್ಟವರು ಕಾಂಗ್ರೆಸ್ ಸರ್ಕಾರ ಅಲ್ವಾ. ಇದಕ್ಕೆ ನನ್ನನ್ನ ಕೆಲವರು ವಿರೋಧ ಮಾಡುತ್ತಿದ್ದಾರೆ ಎಂದರು.
ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ಇರಬಹುದು ನಾವೆಲ್ಲರೂ ಅಣ್ಣತಮ್ಮಂದಿರು. ನಾವೆಲ್ಲರೂ ಕೂಡ ಸಮಾನ ದುಃಖಿಗಳು, ಯಾರು ಸುಖವನ್ನು ಅನುಭವಿಸಿದ್ದಾರೆ ಅವರು ಸುಖಿಗಳು ಎಂದರು. ಸಮಾನತೆಯನ್ನು ಹೋಗಲಾಡಿಸಲು ಇಂತಹ ಸಮಾವೇಶಗಳು ಅತ್ಯಗತ್ಯ. ಇನ್ನು ಹೆಚ್ಚು ಹೆಚ್ಚಿನದಾಗಿ ಸಮಾವೇಶಗಳು ನಡೆಯಬೇಕು ಎಂದರು.
ಯಾವ ದೇವಸ್ಥಾನಗಳ ಒಳಗೆ ಬಿಡುವುದಿಲ್ಲ ಅಂತಹ ದೇವಸ್ಥಾನಗಳಿಗೆ ಹೋಗಬೇಡಿ. ನೀವೇ ದೇವಸ್ಥಾನವನ್ನು ಕಟ್ಟಿಕೊಳ್ಳಿ, ನೀವೇ ಪೂಜೆ ಮಾಡಿ, ನೀವೇ ದೇವರ ಮೂರ್ತಿಗಳಾಗಿ ಎಂದರು. ದೇವನೊಬ್ಬ ನಾಮ ಹಲವು ಎಂಬಂತೆ ದೇವನು ಸರ್ವಾತ್ರಯಮಿ. ಆದರೆ ಈ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಇದರಲ್ವಾ ಜಾತಿ, ದೇವರು, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಚಿದ್ರಾ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ದೇವಸ್ಥಾನಕ್ಕೆ ದಲಿತರನ್ನು ಬರಬೇಡಿ ಎಂದು ಹೇಳಿದವರು ಯಾರು?. ಕನಕದಾಸರು ಉಡುಪಿಯ ಶ್ರೀ ಕೃಷ್ಣನ ದೇವಸ್ಥಾನಕ್ಕೆ ಹೋದವರು ಒಳಗಡೆ ಬಿಡದವರು ಯಾರು ಎಂದು ಪ್ರಶ್ನಿಸಿದರು. ಯಾರಿಗೆ ಇತಿಹಾಸ ಗೊತ್ತಿದೆ ಅವರು ಭವಿಷ್ಯವನ್ನು ನಿರ್ಮಾಣ ಮಾಡುತ್ತಾರೆ. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟ, ಮೂರು ಮಂತ್ರಗಳನ್ನು ಈ ಶೋಷಿತ ಸಮುದಾಯಗಳಿಗೆ ಹೇಳಿದ್ದಾರೆ. ನಿಮಗೆ ನ್ಯಾಯ ಸಿಗಬೇಕಾದರೆ ತಾವೆಲ್ಲರೂ ಶಿಕ್ಷಿತರಾಗಬೇಕು ಎಂದರು.
78% ಶಿಕ್ಷಿತರಾಗಿದ್ದಾರೆ. 22% ಶಿಕ್ಷಿತರಾಗುವ ಮೂಲಕ 100ಕ್ಕೆ 100% ಶಿಕ್ಷಿತರಾಗಬೇಕು ಎಂದರು. ಸಂವಿಧಾನವನ್ನು ರಚನೆ ಮಾಡಿಕೊಳ್ಳಿ. ಇನ್ನು ಈಶ್ವರಪ್ಪ, ಸಿಟಿ ರವಿ, ಅಶೋಕ ನೀವೆಲ್ಲರೂ ವಿಧಾನಸಭೆಗೆ ಬರಲು ಕಾರಣ ಈ ಸಂವಿಧಾನದಿಂದ ಮಾತ್ರ ಅನ್ನೋದನ್ನು ಮರೆಯಬೇಡಿ ಎಂದರು.
ಸಂವಿಧಾನ ಇಲ್ಲ ಅಂದಿದ್ದರೆ ಈಶ್ವರಪ್ಪ ನೀನು ಕುರಿ ಕಾಯಬೇಕಾಗಿತ್ತು. ಸಿಟಿ ರವಿ ಮತ್ತು ಅಶೋಕ ಹೊಲ ಉಳಿಮೆ ಮಾಡಬೇಕಾಗಿತ್ತು. ನಾನು ಕೂಡ ಸಂವಿಧಾನದ ಮೂಲಕ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದೇನೆ. ಕಾರಣ ಎಲ್ಲಾ ವರ್ಗದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ಕಾಂತರಾಜ್ ವರದಿಯನ್ನು ಸ್ವೀಕಾರ ಮಾಡುತ್ತೇನೆ. ಅದರಲ್ಲಿ ವ್ಯತ್ಯಾಸಗಳಿದ್ದರೆ ತಜ್ಞರ ಅಭಿಪ್ರಾಯ ಪಡೆದು ಅದನ್ನು ಜಾರಿ ಮಾಡುತ್ತೇನೆ ಎಂಬ ಮಾತನ್ನು ಹೇಳಲು ಇಷ್ಟಪಡುತ್ತೇನೆ. ರಾಹುಲ್ ಗಾಂಧಿ ಹೇಳಿದ್ದಾರೆ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ರಾಜ್ಯಗಳಲ್ಲಿ ಕೂಡ ಜಾತಿ ಗಣತಿಯನ್ನು ಮಾಡುತ್ತೇವೆ ಎಂಬ ಮಾತನ್ನು ಹೇಳಿದ್ದಾರೆ. ಆದ್ದರಿಂದ ತೀರ್ಮಾನ ಆಗಿದೆ ಎಂದರು.
ನೀವು ಇಟ್ಟಿರುವ ಬೇಡಿಕೆಗಳಿಗೆ ನನ್ನ ಸಹಮತ ಇದೆ. ರಾಜಕೀಯ ಅಧಿಕಾರ ಇರಲಿ, ಇಲ್ಲದೆ ಇರಲಿ ನಾನು ಶೋಷಿತ ಸಮುದಾಯಗಳ ಪರವಾಗಿ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಘಂಟಾಗೋಷವಾಗಿ ಭರವಸೆ ನೀಡಿದರು. ನಾನು ಯಾವ ವಿರೋಧಿಯಲ್ಲ. ಎಲ್ಲ ಮನುಷ್ಯತ್ವದ ಮನುಷ್ಯರ ಪರವಾಗಿ, ಎಲ್ಲ ದೇವರ ಪರವಾಗಿ ಇರುವವನು ಎಂದರು.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications