ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಣೇಹಳ್ಳಿ ನಾಟಕೋತ್ಸವ ಆನ್‌ಲೈನ್‌ನಲ್ಲಿ ನೋಡಿ

|
Google Oneindia Kannada News

ಚಿತ್ರದುರ್ಗ, ನ.5 : ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾಸಂಘದ ವತಿಯಿಂದ ಡಾ.ಶ್ರೀ ಪಂಡಿತಾರಾಧ್ಯ ಸ್ವಾಮಿಗಳ ಸಾನಿಧ್ಯದಲ್ಲಿ ರಾಷ್ಟ್ರೀಯ ನಾಟಕೋತ್ಸವ ಆರಂಭವಾಗಿದೆ. ಈ ಬಾರಿ ನಾಟಕೋತ್ಸವವನ್ನು ಆನ್‌ಲೈನ್ ಮೂಲಕವೂ ನೋಡುವ ವ್ಯವಸ್ಥೆ ಮಾಡಲಾಗಿದೆ.

ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ನ.2ರಂದು ರಾಷ್ಟ್ರೀಯ ನಾಟಕೋತ್ಸವ ಆರಂಭವಾಗಿದ್ದು ನ.8ರವರೆಗೆ ನಡೆಯಲಿದೆ. ಸಾಣೇಹಳ್ಳಿಗೆ ಬಂದು ನಾಟಕ ವೀಕ್ಷಿಸಲು ಸಾಧ್ಯವಾಗದ ರಂಗಾಸಕ್ತರಿಗೆ ಅನುಕೂಲವಾಗಲಿ ಎಂದು ಆನ್‌ಲೈನ್ ಮೂಲಕ ವೀಕ್ಷಿಸುವ ವ್ಯವಸ್ಥೆಯನ್ನು ಈ ಬಾರಿ ಪರಿಚಯಿಸಲಾಗಿದೆ. [ನಾಟಕೋತ್ಸವದ ಮಾಹಿತಿ ಇಲ್ಲಿದೆ ನೋಡಿ]

Sanehalli

ನಾಟಕದ ಜೊತೆ ಪ್ರತಿದಿನ ಸಾಮೂಹಿಕ ಪ್ರಾರ್ಥನೆ, ಚಿಂತನ, ವಚನ ಗೀತೆ, ಉಪನ್ಯಾಸ ಕಾರ್ಯಕ್ರಮಗಳಿದ್ದು ಅವುಗಳನ್ನು ವೀಕ್ಷಿಸಬಹುದಾಗಿದೆ. ಹಿಂದಿನ ದಿನ ನಡೆದ ಕಾರ್ಯಕ್ರಮಗಳ ವಿಡಿಯೋವನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗಿದ್ದು, ಅದನ್ನು ವೀಕ್ಷಿಸಬಹುದು. [ನ.2ರಿಂದ ರಾಷ್ಟ್ರೀಯ ನಾಟಕೋತ್ಸವ]

http://srishivakumara.ivb7webcaster.com.ವೆಬ್‌ಸೈಟ್‌ಗೆ ಭೇಟಿ ನೀಡಿ ನಾಟಕಗಳನ್ನು ನೋಡಬಹುದಾಗಿದೆ. ಪ್ರತಿದಿನ ಸಂಜೆ ನಾಟಕ ನಡೆಯಲಿದ್ದು, ಬೆಳಗ್ಗೆಯಿಂದ ವಿವಿಧ ಕಾರ್ಯಕ್ರಮಗಳನ್ನುನಡೆಯುತ್ತವೆ.

ಯಾವ ನಾಟಕಗಳಿವೆ : ನ.5ರಂದು ಲಿಂಗದೇವರು ಹಳೇಮನೆ ಅವರ 'ಚಿಕ್ಕದೇವಭೂಪ' ನಾಟಕವನ್ನು ಶಿವಸಂಚಾರ-14ರ ತಂಡ ಗಂಗಾಧರಸ್ವಾಮಿ ನಿರ್ದೇಶನದಲ್ಲಿ ಅಭಿನಯಿಸಲಿದೆ. ನ.6ರಂದು ದೆಹಲಿ ಕೇಂದ್ರ ಸಂಗೀತ ನಾಟಕ ಅಕಾಡಮೆ ಸಹಕಾರದಲ್ಲಿ 'ಸಂಗೀತ ಸೌಭದ್ರ' ನಾಟಕವನ್ನು ಕೀರ್ತಿ ಶಿಲೇದಾರ್ ನಿರ್ದೇಶನದಲ್ಲಿ ಪುಣೆಯ ಜೆ.ಜೆ.ಎಸ್.ಸಂಗೀತ ನಾಟ್ಯ ಸೇವಾ ಟ್ರಸ್ಟ್ ನವರು ಅಭಿನಯಿಸಲಿದ್ದಾರೆ. [ನಾಟಕಗಳನ್ನುನೋಡಲು ಇಲ್ಲಿ ಕ್ಲಿಕ್ ಮಾಡಿ]

ನ.7ರಂದು 'ಕೈಲಾಸಂ ಕೀಚಕ' ನಾಟಕವನ್ನು ಬೆಂಗಳೂರು ಸಂಚಾರಿ ಥಿಯೇಟರ್ ಅಭಿನಯಿಸಲಿದೆ. ನ.8ರಂದು ಡಾ.ಕೆ.ವೈ.ನಾರಾಯಣಸ್ವಾಮಿ ಅವರ 'ವಿನುರ ವೇಮ' ನಾಟಕವನ್ನು ಸಿ.ಬಸವಲಿಂಗಯ್ಯ ನಿರ್ದೇಶನದಲ್ಲಿ ಶಿವಸಂಚಾರ ತಂಡ ಅಭಿನಯಿಸಲಿದೆ.

English summary
The ongoing annual national theater festival at Sanehalli in Hosadurga taluk of the district is being webcast live. The plays are being staged at the open air Greek-style theater in the village. The plays are scheduled for the evening. All the proceedings are available on the http://srishivakumara.ivb7webcaster.com
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X