Vani Vilasa Sagara Dam: ಕೇವಲ 1.75 ಅಡಿ ನೀರು ಬಂದ್ರೆ ತುಂಬಲಿದೆ ವಾಣಿ ವಿಲಾಸ ಸಾಗರ ಡ್ಯಾಂ

Vani Vilasa Sagara Dam: ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಬಳಿಯಿರುವ ವಾಣಿ ವಿಲಾಸ ಜಲಾಶಯ ಇತಿಹಾಸದಲ್ಲಿಯೇ ಮೂರನೇ ಬಾರಿಗೆ ಭರ್ತಿಯಾಗಿ ಕೋಡಿ ಬೀಳಲು ಸಜ್ಜಾಗಿ ನಿಂತಿದೆ. ಇಂದಿನ (ನವೆಂಬರ್ 21) ವರದಿಯಲ್ಲಿ ಜಲಾಶಯಕ್ಕೆ 577 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. ಹಾಗಾದರೆ ಪ್ರಸ್ತುತ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

ಈಗಾಗಲೇ ಮುಂಗಾರು ಮಳೆ ಆರ್ಭಟದಿಂದ ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಇನ್ನು ಇದೀಗ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯ ತುಂಬುವ ಹಂತದಲ್ಲಿದೆ. ಈ ಭಾಗದಲ್ಲಿ ಮಳೆ ಇಲ್ಲದಿದ್ದರೂ ಕೂಡ ಜಲಾಶಯ ತುಂಬುವ ಹಂತ ತಲುಪಿದ್ದೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

Vani Vilasa Sagara Only 1 75 Feet Water Needed to Dam fill Know Statistics details

ನೀರಿನ ಮಟ್ಟ: ಪ್ರಸ್ತುತ ಜಲಾಶಯದ ನೀರಿನ ಮಟ್ಟ 128.25 ಅಡಿ ತಲುಪಿದ್ದು, ಕೋಡಿ ಬೀಳಲು ಕೇವಲ 1.75 ಅಡಿಯಷ್ಟು ನೀರು ಬರಬೇಕಿದೆ. ಈ ಜಲಾಶಯ 30 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ರಾಜ್ಯದ ಹಳೆಯ ಅಣೆಕಟ್ಟುಗಳಲ್ಲಿ ವಾಣಿ ವಿಲಾಸ ಜಲಾಶಯವೂ ಒಂದಾಗಿದ್ದು, ಹಿರಿಯೂರಿನಿಂದ ಹೊಸದುರ್ಗ ಮಾರ್ಗವಾಗಿ 18 ಕಿಲೋ ಮೀಟರ್ ಎಡಭಾಗಕ್ಕೆ ಚಲಿಸಿದರೆ ಜಲಾಶಯವನ್ನು ಕಾಣಬಹುದಾಗಿದೆ.

ವಾಣಿ ವಿಲಾಸ ಸಾಗರ ರಾಜ್ಯದ ವಿಶಿಷ್ಟ ಜಲಾಶಯವಾಗಿದೆ. ಇದಕ್ಕೆ ಕ್ರಸ್ಟ್‌ ಗೇಟ್‌ಗಳನ್ನು ಅಳವಡಿಸಿಲ್ಲ. ಇದೀಗ ಕ್ರಸ್ಟ್ ಗೇಟ್ ಅಳವಡಿಸಬೇಕು ಅಥವಾ ಕೋಡಿ ತಗ್ಗಿಸಬೇಕು ಎಂದು ಪರ-ವಿರೋಧ ಹಿರಿಯೂರು ಮತ್ತು ಹೊಸದುರ್ಗ ಮಧ್ಯೆ ಜಟಾಪಟಿ ನಡೆಯುತ್ತಿದೆ. ಜಲಾಶಯ ಭರ್ತಿಯಾದರೆ ಮಾತ್ರ ನೀರು ಕೋಡಿ ಬಿದ್ದು ಮುಂದೆ ಸಾಗುತ್ತದೆ. ಈ ನೀರು ಹಿರಿಯೂರಿನ ವೇದಾವತಿ ನದಿ ಮೂಲಕ ಚಳ್ಳಕೆರೆ, ಮೊಳಕಾಲ್ಮೂರು ಪ್ರವೇಶಿಸಿ ಮುಂದೆ ಬಳ್ಳಾರಿ ಜಿಲ್ಲೆ ಪ್ರವೇಶಿಸಿ ತುಂಗಭದ್ರಾ ಜಲಾಶಯ ಸೇರುತ್ತದೆ.

ಇದೀಗ ಮಾರಿಕಣಿವೆ ಡ್ಯಾಂ ಎರಡು ವರ್ಷಗಳ ನಂತರ ಮತ್ತೆ ಭರ್ತಿಯಾಗಿ ಕೋಡಿ ಬೀಳುವ ಹಂತದಲ್ಲಿದೆ. ಹಿರಿಯೂರು ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವುದೇ ನೀರಿನ ಮೂಲ ಇಲ್ಲದನ್ನು ಕಂಡು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹಿರಿಯೂರು ಭಾಗದ ರೈತರಿಗೆ ನೀರಿನ ಅನುಕೂಲವಾಗುವ ನಿಟ್ಟಿನಲ್ಲಿ 1907ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ವಿವಿ ಸಾಗರ ಡ್ಯಾಂ ಕಟ್ಟಿಸಿದರು.

ಜಲಾಶಯದ ನಿರ್ಮಾಣ ಇತಿಹಾದ ವಿವರ: 1897ರಲ್ಲಿ ಕಾಮಗಾರಿ ಪ್ರಾರಂಭಿಸಿ 1907ರಲ್ಲಿ ಪೂರ್ಣಗೊಳಿಸಿದರು. ಇದೀಗ ಜಲಾಶಯಕ್ಕೆ 117ವರ್ಷ ಇತಿಹಾಸವಿದೆ. ಜಲಾಶಯ ಒಟ್ಟು 135 ಅಡಿ ಎತ್ತರದ ಹೊಂದಿದ್ದು, 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ. 1935ರಲ್ಲಿ ಮೊದಲ ಬಾರಿಗೆ 135 ಅಡಿ ನೀರು ತುಂಬಿ ಡ್ಯಾಂ ಮೈದುಂಬಿ ಹರಿದಿತ್ತು.

ಇದಾದ ನಂತರ 2022ರಲ್ಲಿ ಎರಡನೇ ಬಾರಿಗೆ ಡ್ಯಾಂ ಕೋಡಿ ಬಿದ್ದಿತ್ತು. ಸುಮಾರು ಎರಡು ತಿಂಗಳ ಕಾಲ ವೇದಾವತಿ ನದಿಯಲ್ಲಿ ನೀರು ನಿರಾತಂಕವಾಗಿ ಹರಿದಿತ್ತು. ಇದೀಗ ಮೂರನೇ ಬಾರಿಗೆ ಕೋಡಿ ಬೀಳಲು ಕ್ಷಣಗಣನೆ ಆರಂಭವಾಗಿದೆ. ಇನ್ನು ಈ ವರ್ಷದಲ್ಲಿ ಡ್ಯಾಂಗೆ ಇಷ್ಟೊಂದು ನೀರು ಬರಲು ಪ್ರಮುಖ ಕಾರಣ ಅಂದ್ರೆ ಭದ್ರಾ ಜಲಾಶಯದಿಂದ ನೀರು ಹರಿಸಿದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+