Vani Vilasa Sagara Dam: ನಾಲ್ಕನೇ ಬಾರಿ ದಾಖಲೆಗೆ ಸಜ್ಜಾದ ವಾಣಿ ವಿಲಾಸ ಸಾಗರ ಜಲಾಶಯ
Vani Vilasa Sagara Dam: ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆದ ಪರಿಣಾಮ ಕೆಆರ್‌ಎಸ್ ಭರ್ತಿಯಾಗಿದೆ. ಹಾಗೆಯೇ ರಾಜ್ಯದ ಹಳೇ ಅಣೆಕಟ್ಟುಗಳಲ್ಲಿ ಒಂದಾಗಿರುವ ಹಿರಿಯೂರಿನ ತಾಲೂಕಿನ ವಾಣಿ ವಿಲಾಸ ನಾಲ್ಕನೇ ಬಾರಿ ಭರ್ತಿಯಾಗುವತ್ತ ಸಾಗಿದೆ. ಹಾಗಾದ್ರೆ ಇದೀಗ ಪ್ರಸ್ತುತ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ವಾಣಿ ವಿಲಾಸ ಸಾಗರವವನ್ನು ಮಾರಿಕಣಿವೆ ಅಂತಲೂ ಕರೆಯುತ್ತಾರೆ. ಇದು ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿದ್ದು, ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯ ನಾಲ್ಕನೇ ಬಾರಿಗೆ ಭರ್ತಿಯಾಗುವ ಮೂಲಕ ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ಈ ಹಂತ ತಲುಪಬೇಕೆಂದರೆ ಇನ್ನೂ ಎಷ್ಟು ಅಡಿ ನೀರು ಬರಬೇಕಾಗಿದೆ.

ಈ ವರ್ಷದ ಆರಂಭದಲ್ಲಿ ವಾಣಿ ವಿಲಾದ ಜಲಾಶಯದ ಕೋಡಿ ಬಿದ್ದಿತ್ತು. ಅದು ಮಳೆ ನೀರಿನಿಂದಲ್ಲ, ಭದ್ರ ಜಲಾಶಯದಿಂದ ಬಂದ ನೀರಿನಿಂದ. ಇನ್ನೂ ಇದೀಗ ಮುಂಗಾರು ಮಳೆ ಆರ್ಭಟದಿಂದ ನೀರಿನ ಮಟ್ಟ 126 ಅಡಿ ತಲುಪಿದ್ದು, ಭರ್ತಿಯಾಗಲು ಕೇವಲ ನಾಲ್ಕು ಅಡಿಯಷ್ಟೇ ಬಾಕಿಯಿದೆ. ಮಳೆ ಮತ್ತಷ್ಟು ಚುರುಕು ಪಡೆದರೆ ಜುಲೈ ತಿಂಗಳಲ್ಲಿ ತುಂಬಿ ಕೋಡಿ ಬೀಳುವ ಸಾಧ್ಯತೆಯಿದೆ.
ವಾಣಿ ವಿಲಾಸ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ 130 ಅಡಿ (30 ಟಿಎಂಸಿ) ಆಗಿದ್ದು, ಇದೀಗ 126 ಅಡಿವರೆಗೂ ನೀರು ಬಂದಿದೆ. ಒಳಹರಿವು ಇಲ್ಲ. ಆದರೆ, ಹೊರಹರಿವು ಮಾತ್ರ 500-600 ಕ್ಯೂಸೆಕ್ ಇದೆ. ಭದ್ರಾ ಜಲಾಶಯದಿಂದ ನೀರು ಹರಿಸಿದರೆ, ಮತ್ತೆ ತುಂಬಿ ನಾಲ್ಕನೇ ಬಾರಿ ದಾಖಲೆ ಬರೆಯಬಹುದು. ಈಗಾಗಲೇ ಮೂರು ಬಾರಿ ಕೋಡಿ ಬಿದ್ದು ಇತಿಹಾಸ ನಿರ್ಮಿಸಿದೆ.
1935ರಲ್ಲಿ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹವಾಗುವ ಮೂಲಕ ಮೊದಲ ಬಾರಿಗೆ ಡ್ಯಾಂ ಕೋಡಿ ಬಿದ್ದು, ಇತಿಹಾಸ ಸೃಷ್ಟಿಸಿತ್ತು. ಬಳಿಕ 2020 135, 2025ರ ಜನವರಿ ತಿಂಗಳಲ್ಲಿ 130 ಅಡಿ ನೀರು ಬಂದಿದ್ದು, ಈ ವೇಳೆ ಕೋಡಿ ಬಿದ್ದು ಮೂರನೇ ಬಾರಿ ದಾಖಲೆ ಸೃಷ್ಟಿಸಿತ್ತು.
907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಕಾಲ ಇತಿಹಾಸವಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ.
ಯಾವ್ಯಾವ ವರ್ಷ ಎಷ್ಟು ನೀರು ಸಂಗ್ರಹ?: 1917ರಲ್ಲಿ 120.60 ಅಡಿ, 1918 - 121.30, 1919 - 128.30, 1920 - 125.50, 1932 - 125.50, ಅಡಿ, 1933 - 135.25 ಅಡಿ, 1934 - 130.24 ಅಡಿ, 1935 - 123,22 ಅಡಿ, 1956 - 125 ಅಡಿ, 1957 - 125.05 ಅಡಿ, 1958 - 124.50 ಅಡಿ, 2000 - 122.50 ಅಡಿ, 2021 - 125.50 ಅಡಿ, 2022 - 135 ಅಡಿ, 2024ರಲ್ಲಿ 128.40 ಅಡಿ, 2025 ಜನವರಿಯಲ್ಲಿ 130 ಅಡಿ ನೀರು ಸಂಗ್ರವಾಗಿತ್ತು.












Click it and Unblock the Notifications