Vani Vilasa Sagara Dam: ವಾಣಿ ವಿಲಾಸ ಸಾಗರ ಜಲಾಶಯಕ್ಕೆ 974 ಕ್ಯೂಸೆಕ್ ಒಳಹರಿವು.!-ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ.?-ಮಾಹಿತಿ

Vani Vilasa Sagara Dam: ಈಗಾಗಲೇ ಭಾರೀ ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ನದಿ, ಕೆರೆ-ಕಟ್ಟೆಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಕೆಲವು ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದರೆ, ಇನ್ನು ಕೆಲವು ಡ್ಯಾಂಗಳು ತುಂಬುವ ಹಂತವನ್ನು ತಲುಪಿವೆ. ಹಾಗೆಯೇ ಇದೀಗ ಮೊಟ್ಟ ಮೊದಲ ಬಾರಿಗೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರಕ್ಕೆ ಒಳಹರಿವು ಬರುತ್ತಿದೆ. ಹಾಗಾದರೆ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ 974 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದ್ದು, ಇದರಿಂದ 130 ಅಡಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ ಇರುವ ಈ ಜಲಾಶಯದ ಪ್ರಸ್ತುತ ನೀರಿನ ಮಟ್ಟ 113.50 ಅಡಿ ಇದೆ. ಕೆಲ್ಲೋಡ್ ಚೆಕ್ ಡ್ಯಾಂ ತುಂಬಿ ಮೈದುಂಬಿ ಹರಿಯುತ್ತಿದ್ದು, ಈ ನೀರು ವೇದಾವತಿ ನದಿ ಮೂಲಕ ವಾಣಿ ವಿಲಾಸ ಜಲಾಶಯ ಸೇರುತ್ತಿದೆ.

Vani Vilasa Sagara Dam 974 cusec inflow Know on july 29 water level Statistics

ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಸಹ ಜಲಾಶಯಕ್ಕೆ ನೀರು ಸಂಗ್ರಹವಾಗಿತ್ತು. ಇದೀಗ ಮತ್ತೆ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಶನಿವಾರ ಮದಗದಕೆರೆ ಉಕ್ಕಿ ಹರಿದಿತ್ತು, ಮತ್ತೊಂದು ಕಡೆ ಅಯ್ಯನಕೆರೆ ಉಕ್ಕಿ ಹರಿಯುತ್ತಿರುವುದು ವೇದಾವತಿ ನದಿಗೆ ಕಾಯಕಲ್ಪ ನೀಡಿದೆ.

ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಕೆರೆಗಳು, ವಿವಿ ಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಏರಿಕೆಯಾಗಿದೆ. ಇನನಿ ಪ್ರವಾಸಿ ತಾಣವೂ ಆಗಿರುವ ವಾಣಿ ವಿಲಾಸ ಸಾಗರ ಡ್ಯಾಂನಲ್ಲಿ ಸೋಮವಾರ 974 ಕ್ಯೂಸೆಕ್ ಒಳಹರಿವು ಕಂಡು ಬಂದಿದೆ.

ಚಿತ್ರದುರ್ಗ ಜಿಲ್ಲೆಯ ಭಾಗದಲ್ಲಿ ಅಷ್ಟಾಗಿ ಮಳೆ ಆಗಿರಲಿಲ್ಲ. ಆದರೆ ಚಿಕ್ಕಮಗಳೂರು, ಅರಣ್ಯ ಪ್ರದೇಶಗಳ ಮಳೆ ನಿರೇ ಆಸರೆಯಾಗಿತ್ತು. ಇದೀಗ ಅಲ್ಲೆಲ್ಲ ನದಿ, ಕೆರೆಗಳು ಭರ್ತಿಯಾಗಿ ವೇದಾವತಿ ನದಿಯತ್ತ ಹರಿಯುತ್ತಿವೆ. ಈ ನೀರು ಮುಂದಿನ ಬೇಸಿಗೆವರೆಗೂ ನೀರಾವರಿಗೆ, ಕುಡಿಯಲು ಅನುಕೂಲ ಆಗಲಿದೆ.

ಬರ ಪ್ರದೇಶ ಅಂತಲೇ ಕರೆಸಿಕೊಳ್ಳುವ ಈ ಭಾಗದಲ್ಲಿ ವಾಣಿ ವಿಲಾಸ ಸಾಗರ ನಿರೇ ಆಸರೆ. ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ವ್ಯಾಪ್ತಿಯ ಜನರಿಗೆ ನೀರು ನೀಡುವ ಡ್ಯಾಂಗೆ ಚಿಕ್ಕಮಗಳೂರು ಸಮೀಪದ ಅಯ್ಯನಕೆರೆಯಿಂದ ನೀರು ಬಂದಿದೆ. ಮಳೆಯಿಂದಾಗಿ ಅಯ್ಯನಕೆರೆ ನದಿಯ ಒಳಹರಿವು ಹೆಚ್ಚಾಗಿದ್ದು, ಅದು ವೇದಾವತಿ ನದಿಗೆ ಬಂದು ಸೇರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+