Vani Vilasa Sagara Dam: ಇದೇ ಮೊಟ್ಟ ಮೊದಲ ಬಾರಿ ಹೊಸ ಇತಿಹಾಸ ಸೃಷ್ಟಿಸಲು ವಾಣಿ ವಿಲಾಸ ಡ್ಯಾಂ ಸಜ್ಜು
Vani Vilasa Sagara Dam: ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆದಿದೆ. ಪರಿಣಾಮ ಈಗಾಗಲೇ ಹಲವು ಜಲಾಶಯಗಳು ಭರ್ತಿಯಾಗಿದೆ. ಹಾಗೆಯೇ ರಾಜ್ಯದ ಹಳೇ ಅಣೆಕಟ್ಟುಗಳಲ್ಲಿ ಒಂದಾದ ಹಿರಿಯೂರಿನ ತಾಲೂಕಿನ ವಾಣಿ ವಿಲಾಸ ಇದೇ ಮೊಟ್ಟ ಮೊಟ್ಟ ಮೊದಲ ಬಾರಿ ಇತಿಹಾಸವೊಂದನ್ನು ಸೃಷ್ಟಿಸಲು ಸಜ್ಜಾಗಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ಕಣ್ಣಾಡಿಸಿ.
ಚಿತ್ತದುರ್ಗ ಜಿಲ್ಲೆಯ, ಹಿರಿಯೂ ತಾಲ್ಲೂಕಿನಲ್ಲಿರುವ ಮಾರಿಕಣಿವೆ ಅಥವಾ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗುವ ಸನಿಹದಲ್ಲಿದೆ. ಇದು ನೆರವೇರಿದರೆ, ಹೊಸ ಇತಿಹಾಸ ಸೃಷ್ಟಿಸಿದಂತಾಗಲಿದೆ. ವರ್ಷದಲ್ಲಿ ಎರಡನೇ ಭಾರೀ ಭರ್ತಿಯಾದ್ರೆ, ಮತ್ತೊಂದೆಡೆ ಇದುವರೆಗೂ ನಾಲ್ಕನೇ ಬಾರಿಗೆ ಕೋಡಿ ಬೀಳಲು ಸಜ್ಜಾಗಿದೆ. ಹಾಗಾದ್ರೆ, ಇದೀಗ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ತಿಳಿಯಿರಿ.

ವಾಣಿ ವಿಲಾಸ ಸಾಗರವನ್ನ ಮಾರಿಕಣಿವೆ ಅಂತಲೂ ಕರೆಯುತ್ತಾರೆ. ಇದು ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿದ್ದು, ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ. ಇದೀಗ ಈ ಜಲಾಶಯ ಇದುವರೆಗೂ ನಾಲ್ಕನೇ ಬಾರಿಗೆ ಭರ್ತಿಯಾಗಿ ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ಮತ್ತೊಂದೆಡೆ ಈಗಾಗಲೇ ಇದೇ ವರ್ಷದ ಜನವರಿಯಲ್ಲಿ ಕೋಡಿ ಬಿದ್ದಿದ್ದು, ಮತ್ತೊಮ್ಮೆ ಇದೀಗ ಕೋಡಿ ಬೀಳುವ ಸಹಿಹದಲ್ಲಿದೆ. ಇದು, ನೆರವೇರಿದರೆ ವರ್ಷದಲ್ಲಿ ಎರಡು ಬಾರಿ ಕೋಡಿ ಬಿದ್ದ ಹೊಸ ಇತಿಹಾಸವನ್ನು ನಿರ್ಮಿಸಲಿದೆ.
ಈ ವರ್ಷದ ಆರಂಭದಲ್ಲಿ ವಾಣಿ ವಿಲಾದ ಜಲಾಶಯದ ಕೋಡಿ ಬಿದ್ದಿತ್ತು. ಅದು ಮಳೆ ನೀರಿನಿಂದಲ್ಲ, ಬದಲಾಗಿ ಭದ್ರ ಜಲಾಶಯದಿಂದ ಬಂದ ನೀರಿನಿಂದ. ಇನ್ನೂ ಇದೀಗ ಮುಂಗಾರು ಮಳೆ ಆರ್ಭಟ ಮುಂದುವರೆದಿದ್ದು, ಪ್ರಸ್ತುತ ಇದೀಗ ನೀರಿನ ಮಟ್ಟ 124.80 ಅಡಿ ತಲುಪಿದ್ದು, ಭರ್ತಿಯಾಗಲು ಕೇವಲ 6 ಅಡಿಯಷ್ಟೇ ಬಾಕಿಯಿದೆ. ಭಾರೀ ಮಳೆ ಮುಂದುವರೆದರೆ, ಆಗಸ್ಟ್‌ನಲ್ಲೇ ಭರ್ತಿಯಾಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
ವಾಣಿ ವಿಲಾಸ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ 130 ಅಡಿ (30 ಟಿಎಂಸಿ) ಆಗಿದ್ದು, ಇದೀಗ ನೀರಿನ ಮಟ್ಟ 124.80 ಇದ್ದರೆ, 600 ಕ್ಯುಸೆಕ್ ಒಳಹರಿವಿದೆ. ಆದರೆ, ಹೊರಹರಿವಿಲ್ಲ. ಇನ್ನೂ ಕೇವಲ 6 ಅಡಿ ನೀರು ಬಂದ್ರೆ ಮತ್ತೆ ಭರ್ತಿಯಾಗಲಿದೆ. ಈ ಮೂಲಕ ಇದುವರೆಗೂ ನಾಲ್ಕೂ ಬಾರಿ ಕೋಡಿ ಬಿದ್ದ ಇತಿಹಾಸ ನಿರ್ಮಾಣ ಆದಂತಾಗಲಿದೆ.
ಯಾವ್ಯಾವಾಗ ಭರ್ತಿ?: 1933ರಲ್ಲಿ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹವಾಗುವ ಮೂಲಕ ಮೊದಲ ಬಾರಿಗೆ ಡ್ಯಾಂ ಕೋಡಿ ಬಿದ್ದು, ಇತಿಹಾಸ ಸೃಷ್ಟಿಸಿತ್ತು. ಬಳಿಕ 2022 135, 2025ರ ಜನವರಿ ತಿಂಗಳಲ್ಲಿ 130 ಅಡಿ ನೀರು ಬಂದಿದ್ದು, ಈ ವೇಳೆ ಕೋಡಿ ಬಿದ್ದು ಮೂರನೇ ಬಾರಿ ದಾಖಲೆ ಸೃಷ್ಟಿಸಿತ್ತು. ಇದೀಗ ಮತ್ತೆ ಭರ್ತಿಯಾದ್ರೆ, ಇದು ನಾಲ್ಕನೇ ಬಾರಿಯಾಗಲಿದೆ.
ಯಾವ ವರ್ಷ ಎಷ್ಟು ನೀರು ಸಂಗ್ರಹ?: 1917ರಲ್ಲಿ 120.60 ಅಡಿ, 1918 - 121.30, 1919 - 128.30, 1920 - 125.50, 1932 - 125.50, ಅಡಿ, 1933 - 135.25 ಅಡಿ, 1934 - 130.24 ಅಡಿ, 1935 - 123.22 ಅಡಿ, 1956 - 125 ಅಡಿ, 1957 - 125.05 ಅಡಿ, 1958 - 124.50 ಅಡಿ, 2000 - 122.50 ಅಡಿ, 2021 - 125.50 ಅಡಿ, 2022 - 135 ಅಡಿ, 2024ರಲ್ಲಿ 128.40 ಅಡಿ, 2025 ಜನವರಿಯಲ್ಲಿ 130 ಅಡಿ ನೀರು ಸಂಗ್ರವಾಗಿತ್ತು.
ಡ್ಯಾಂ ನಿರ್ಮಾಣ ಇತಿಹಾಸ: 1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಕಾಲ ಇತಿಹಾಸವಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ.












Click it and Unblock the Notifications