ಶಿರಾ-ಬುಕ್ಕಾಪಟ್ಟಣ-ಹುಳಿಯಾರು ರಸ್ತೆ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ವಿ.ಸೋಮಣ್ಣ
ಚಿತ್ರದುರ್ಗ, ನವೆಂಬರ್, 16: ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಚಿತ್ರದುರ್ಗ ಮತ್ತು ತುಮಕೂರು ನಡುವಿನ ನಳಹಾಳ್ ಮತ್ತು ಹೊನ್ನೇನಹಳ್ಳಿ ಪ್ರದೇಶಗಳಲ್ಲಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಪರಿಶೀಲಿಸಿದರು. ಹಾಗಾದರೆ ಅವರು ಈ ವೇಳೆ ಅಧಿಕಾರಿಗಳಿಗೆ ಹೇಳಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಸಿರಾ-ಬುಕ್ಕಾಪಟ್ಟಣ-ಹುಳಿಯಾರು ರಸ್ತೆ ಕಾಮಗಾರಿ ವಿಚಾರವಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶುಕ್ರವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು ಕಾಮಗಾರಿ ವಿಳಂಬದ ಕಾರಣ ತಿಳಿದು ಅಧಿಕಾರಿಗಳ ಮೇಲೆ ಗರಂ ಆದರು.

ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನ ಸಿರಾ-ಬುಕ್ಕಾಪಟ್ಟಣದ ರಸ್ತೆ ಕಾಮಗಾರಿಯಲ್ಲಿ ಸಾರ್ವಜನಿಕರಿಂದ ದೂರು ಕೇಳಿ ಬಂದಿರುವ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಕೂಡಲೇ ಎಲ್ಲವನ್ನೂ ಸರಿಪಡಿಸುವಂತೆ ಆಗ್ರಹಿಸಿದರು. ರಸ್ತೆಗೆ ಜಾಗ ಬಿಡುತ್ತಾರೆ, ನಾಲ್ಕಾರು ಜನ ಓಡಾಡುವ ಹಾಗೆ ಮಾಡುತ್ತಾರೆ. ಆಸ್ತಿ ಕಳೆದುಕೊಳ್ಳುವವನು ಯಾರೋ, ಅನ್ಯಾಯ ಆಗುವುದು ಯಾರಿಗೋ. ಒಳ್ಳೆಯವರ ಹತ್ತಿರ ಹಣ ತಗೆದುಕೊಳ್ಳುತ್ತೀಯಲ್ಲ. ಇನ್ನು ಎರಡರಿಂದ ಮೂರು ಕಿ.ಮೀ ಇದೆ, ಕಾಮಗಾರಿ ಮುಗಿಸಬೇಕು ಎಂದು ಖಡಕ್ ಸೂಚನೆ ನೀಡಿದರು.
ಮೊದಲು ಪರಿಹಾರ ಕೊಡಿ, ಅವರು ಜಾಗ ಬಿಟ್ಟು ಕೊಡುವುದಕ್ಕೆ ಸಿದ್ಧರಿದ್ದಾರೆ. ಜಮೀನಿನ ಮಾಲೀಕರಿಗೆ ಹೆದರಿಸುವುದು-ಬೆದರಿಸುವುದು ಮಾಡಿದರೆ, ಸರಿ ಇರುವುದಿಲ್ಲ. ಬಾಬಣ್ಣ ನಿನ್ನ ಜವಾಬ್ದಾರಿ ಎಂದು ಖಡಕ್ ಎಚ್ಚರಿಕೆ ನೀಡಿದರು. ಇನ್ನು ಈ ಸಂದರ್ಭದಲ್ಲಿ, ಶಾಸಕರಾದ ಶ್ರೀ ಸುರೇಶ್ ಬಾಬು ಅವರು, ಶ್ರೀ ಜ್ಯೋತಿ ಗಣೇಶ್ ಅವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಚಿದಾನಂದ ಗೌಡ ಅವರು, ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಮಗಾರಿ ಆರಂಭ ಯಾವಾಗ?: ಈಗಾಗಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣವಾಗಿದ್ದು, ವಾಹಗಳು ಕೂಡ ಸಂಚರಿಸುತ್ತಿವೆ. ಇದೀಗ ಇದೇ ರೀತಿಯಲ್ಲಿ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡಲು ಕಂದ್ರ ಸರ್ಕಾರ ನಿರ್ಧಾರ ಮಾಡಿದೆ. ಹಾಗಾದರೆ ಇದಕ್ಕೆ ತಗಲುವ ವೆಚ್ಚ ಹಾಗೂ ಇದರಿಂದ ಆಗುವ ಉಪಯೋಗಗಳೇನು ಎಂದು ಇಲ್ಲಿ ತಿಳಿಯಿರಿ.
ಬೆಂಗಳೂರಿನಿಂದ ಮಂಗಳೂರಿಗೆ ಅಥವಾ ಮಂಗಳೂರಿನಿಂದ ಬೆಂಗಳೂರಿಗೆ ಹೋಗಬೇಕೆಂದರೆ ಸುಮಾರು 350 ಕಿಲೋ ಮೀಟರ್ ಆಗುತ್ತದೆ. ಇಲ್ಲಿಗೆ ತಲುಪು ಸರಿಸುಮಾರು ಅಂದರೆ 6-7 ಗಂಟೆಗಳ ಕಾಲ ಸಮಯ ಬೇಕಾಗುತ್ತದೆ. ಆದರೆ, ಈ ಸಮಯವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಈ ಎರಡು ಮಾರ್ಗಗಳ ನಡುವೆ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡಲು ನಿರ್ಧರಿಸಿದೆ. ಹಾಗಾದರೆ ಇದರಿಂದ ಎಷ್ಟು ಸಮಯ ಕಡಿತವಾಗಲಿದೆ ಗೊತ್ತಾ? ಇಲ್ಲಿದೆ ಮಾಹಿತಿ.
ಎಕ್ಸ್‌ಪ್ರೆಸ್ ವೇ ನಿರ್ಮಾಣ ಆದರೆ, ಬೆಂಗಳೂರಿನಿಂದ-ಮಂಗಳೂರಿಗೆ ಕೇವಲ 4-5 ಗಂಟೆಯೊಳಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ ಡಿಪಿಆರ್ ತಯಾರಿಸಲು ಟೆಂಡರ್ ಕರೆಯಲಾಗಿತ್ತು. 9 ಕಂಪನಿಗಳು ಟೆಂಡತರ್ನಲ್ಲಿ ಭಾಗಿಯಾಗಿವೆ. 2025ರ ಜನವರಿ ವೇಳೆಗೆ ಟೆಂಡರ್ ಬಹುತೇಕ ಫೈನಲ್ ಆಗುವ ಸಾಧ್ಯತೆಯಿದ ಎಂದು ಹೇಳಲಾಗುತ್ತಿದೆ.












Click it and Unblock the Notifications