ಇವರಿಗೆ ಇನ್ನೆಷ್ಟು ಹೇಳ್ಬೇಕು? ಕ್ವಾರಂಟೈನಲ್ಲಿದ್ದರೂ ಚಿತ್ರದುರ್ಗದಲ್ಲಿ ಇಬ್ಬರ ಸುತ್ತಾಟ

ಚಿತ್ರದುರ್ಗ, ಮಾರ್ಚ್ 28: ಚಿತ್ರದುರ್ಗದಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗಳು ಮನೆಯಿಂದ ಹೊರಬಂದು ಓಡಾಡುವ ಮೂಲಕ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದಾರೆ.

Recommended Video

      2 people disobeying home quarentine in Chitradurga | Oneindia Kannada

      ನಗರದ ಗಾರೆಹಟ್ಟಿ ಬಡಾವಣೆಯಲ್ಲಿ ಮೀರಜ್ ನಿಂದ ಬಂದಿರುವ ಯುವಕರು ಕಳೆದೆರಡು ದಿನಗಳಿಂದ ಮನೆಯಿಂದ ಹೊರಗೆ ಸುತ್ತಾಡುತ್ತಿದ್ದಾರೆ. ಅವರ ಕೈಯಲ್ಲಿ ಹೋಂ ಕ್ವಾರಂಟೈನ್ ಸೀಲು ಇರುವುದು ಪತ್ತೆಯಾಗಿದೆ. ಇದನ್ನು ಕಂಡು ಆತಂಕಕ್ಕೊಳಗಾದ ಸ್ಥಳೀಯರು ತಕ್ಷಣ ಆರೋಗ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

      ಎರಡು ತಾಸಿನ ನಂತರ ಸ್ಥಳಕ್ಕಾಗಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಯುವಕರನ್ನು ವಿಚಾರಣೆ ಮಾಡಿದ್ದಾರೆ. ಈ ಯುವಕರು ಮೀರಜ್ ನಿಂದ ಬೆಳಗಾವಿ ಮೂಲಕ ಬರುವಾಗ ಕಾಗವಾಡದಲ್ಲಿ ಅನುಮಾನದ ಮೇಲೆ ಅವರನ್ನು ತಪಾಸಣೆ ನಡೆಸಿ ಹೋಂ ಕ್ವಾರಂಟೈನ್ ಸೀಲು ಹಾಕಿರುವುದಾಗಿ ತಿಳಿದುಬಂದಿದೆ. ಆದರೆ ಆ ಯುವಕರು ಚಿತ್ರದುರ್ಗದ ಗಾರೆಹಟ್ಟಿಗೆ ಬಂದಿದ್ದು, ಹೋಂ ಕ್ವಾರಂಟೈನ್ ನಲ್ಲಿ ಇರಬೇಕಾದವರು ಯಾವುದೇ ಸುರಕ್ಷತೆ ಇಲ್ಲದೆ ಮನೆಯಿಂದ ಹೊರಗೆ ಬಂದು ಬಡಾವಣೆಯಲ್ಲೆಲ್ಲಾ ಸುತ್ತಾಡಿದ್ದಾರೆ.

      Two Home Quarantine Refered Persons Roaming In Chitradurga

      ಇದನ್ನು ಕಂಡು ಆತಂಕಗೊಂಡಿರುವ ಬಡಾವಣೆ ನಿವಾಸಿಗಳು ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಆ ಯುವಕರನ್ನ ಗೃಹಬಂಧನದಲ್ಲಿ ಇರಿಸಬೇಕು, ಅವರಿಗೆ ಸೋಂಕು ಇದ್ದರೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+