Get Updates
Get notified of breaking news, exclusive insights, and must-see stories!

ಚಿತ್ರದುರ್ಗ ಬಸವ ಪುತ್ಥಳಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿಲ್ಲ- ಬಸವಪ್ರಭು ಸ್ವಾಮೀಜಿ

ಚಿತ್ರದುರ್ಗ, ಡಿಸೆಂಬರ್‌, 15: ನಗರದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ‌ ಯೋಜನೆ ಕಾಮಗಾರಿಯಲ್ಲಿ ಯಾವುದೇ ಹಣದ ದುರುಪಯೋಗ ನಡೆದಿಲ್ಲ ಎಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮಿಜಿ ತಿಳಿಸಿದರು.

ಚಿತ್ರದುರ್ಗ ನಗರದ ಮುರುಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ‌ ಶ್ರೀಗಳು, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಯಿತು. ಯುವಕರಿಗೆ ಉದ್ಯೋಗ ಸೃಷ್ಟಿ ದೃಷ್ಟಿಯಿಂದ ಈ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅಭಿವೃದ್ಧಿ ಸಹಿಸದ ಮಾಜಿ ಸಚಿವ ಹೆಚ್.ಏಕಾಂತಯ್ಯ ಅವರು ಈ ವಿಚಾರವಾಗಿ ದ್ವೇಷದಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ಆರೋಪಿಸಿದರು.

There was no scam in Chitradurga Basava statue work says BasavaPrabhu Swamiji

ಮುರುಘಾ ಶರಣರು ಬಿಡುಗಡೆಯಾದ ಹಿನ್ನೆಲೆ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಹಣದ ದುರುಪಯೋಗ ಆಗಿಲ್ಲ. ಉದ್ದೇಶ ಪೂರ್ವಕವಾಗಿ ತೊಂದರೆ ಕೊಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ತೊಂದರೆ ನೀಡಿದ್ದಾರೆ. ಎಲ್ಲದಕ್ಕೂ ಕಾನೂನಿನಿಂದ ಸಮರ್ಥವಾಗಿ ಎದುರಿಸುತ್ತಿದ್ದೇವೆ. ಇಂತಹ ಅಪಪ್ರಚಾರದ ಸುದ್ದಿಗೆ ಮಠದ ಭಕ್ತರು ಕಿವಿ ಕೊಡಬಾರದು ಎಂದರು.

ಶಿವಮೂರ್ತಿ ಮುರುಘಾ ಶರಣರಿಗೆ ದೊಡ್ಡ ಉದ್ದೇಶವಿತ್ತು. ಜಗತ್ತಿನಲ್ಲೇ ಅತೀ ಎತ್ತರದ ಬಸವ ಪುತ್ಥಳಿ ನಿರ್ಮಾಣ ಯೋಜನೆಯಿತ್ತು. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಆಗಿರುತ್ತದೆ. ಆದರೆ ಜಿಲ್ಲೆಯ ಅಭಿವೃದ್ಧಿ ಸಹಿಸದೇ ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಗುರುಗಳು 275 ಅಡಿ ಎತ್ತರದ ಬಸವ ಪುತ್ತಳಿ ನಿರ್ಮಾಣಕ್ಕೆ ಮುರುಘಾ ಶರಣರು ಇಲ್ಲಿನ ಪ್ರವಾಸೋದ್ಯಮ ಹಾಗೂ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ. ಆಗಾಗಿ ಒಂದು ವರ್ಷದಿಂದ ಕೆಲಸ ನಿಂತಿದೆ ಈಗ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

280 ಕೋಟಿ 20 ಲಕ್ಷ ರೂಪಾಯಿ ಬಸವ ಪುತ್ಥಳಿ ಯೋಜನೆಯಾಗಿದೆ. ಈಗಾಗಲೇ ಪುತ್ಥಳಿ ನಿರ್ಮಾಣಕ್ಕೆ‌ 25 ಕೋಟಿ ಖರ್ಚು ಮಾಡಿ, ಉಳಿದ 10 ಕೋಟಿ ಹಣ ಖಾತೆಯಲ್ಲಿದೆ. ಯಾವುದೇ ಅನುದಾನ ಅಪವ್ಯಯ ಆಗಿಲ್ಲ ಎಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮಿಜಿ ಮಾಜಿ ಸಚಿವ ಹೆಚ್.ಏಕಾಂತಯ್ಯ ಆರೋಪಕ್ಕೆ ಸ್ಪಷ್ಟನೆ ನೀಡಿದರು.

ಮುರುಘಾ ಶ್ರೀ ವಿರುದ್ಧ ಗಂಭೀರ ಆರೋಪ

ನಗರದ ಹೊರವಲಯದಲ್ಲಿ ಬಸವೇಶ್ವರ ಕಂಚಿನ ಪುತ್ಥಳಿ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿಯಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಬಾರೀ ಅವ್ಯವಹಾರ ನಡೆಸಿದ್ದಾರೆ ಎಂದು ಮಾಜಿ ಸಚಿವ ಹೆಚ್.ಏಕಾಂತಯ್ಯ ಗಂಭೀರವಾಗಿ ಆರೋಪಿಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ನಗರದ ಮುರುಘಾ ಮಠದ ಹಿಂಭಾಗದ ಬೆಟ್ಟದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣ ಮಾಡಲು ಕಾಮಗಾರಿ ನಡೆಯುತ್ತಿದೆ. ಕಂಚಿನ ಪುತ್ಥಳಿ ನಿರ್ಮಾಣಕ್ಕೆ 280.20 ಕೋಟಿ ರೂಪಾಯಿ ವೆಚ್ಚದಲ್ಲಿ ಆಡಳಿತಾತ್ಮಕ ಮಂಜೂರಾತಿಯನ್ನು ಸರ್ಕಾರ ನೀಡಿದೆ. ಆದರೆ ಇದರಲ್ಲಿ ಅನುದಾನ ದುರ್ಬಳಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಬಸವ ಪುತ್ಥಳಿ ನಿರ್ಮಾಣಕ್ಕೆ ನಿಯಮ ಬಾಹಿರ ಕೋಟಿಗಟ್ಟಲೇ ಹಣ ಖರ್ಚು ಮಾಡಿರುವುದು ದುರಾದೃಷ್ಟಕರ. ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 35 ಕೋಟಿ ಹಣ ಮಂಜೂರು ಮಾಡಿದೆ ಎಂದಿದ್ದಾರೆ. ಅದರಲ್ಲಿ ಈಗಾಗಲೇ 24.50 ಕೋಟಿ ಹಣ ವೆಚ್ಚ ಮಾಡಿರೋದು ಗಮನಕ್ಕೆ ಬಂದಿದೆ. ಟೆಂಡರ್ ಕರೆಯದೇ 4 ಕೋಟಿಗೂ ಅಧಿಕ ಮೌಲ್ಯದ ಸಾಮಗ್ರಿಗಳನ್ನು ಖರೀದಿ ಮಾಡಲಾಗಿದೆ. ಮತ್ತೊಂದು ಕಡೆ ಗುತ್ತಿಗೆದಾರರಿಗೆ ನಿಮಯಬಾಗಿರವಾಗಿ 6 ಕೋಟಿಗೂ ಅಧಿಕ ಹಣ ಪಾವತಿ ಮಾಡಿದ್ದರು.

66.7 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನು ಜಂಪನ್ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಟ್ ಕಂಪನಿಯೊಂದಿಗೆ ಮುರುಘಾ ಶರಣರು ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಬ್ಯಾಂಕ್ ಅನುಮೋದನೆ ಪಡೆಯದೇ ಇರುವುದು ಮಠದ ಹಿತಾಸಕ್ತಿಗೆ ಧಕ್ಕೆ ಎಂದಿದ್ದರು.

ಟೆಂಟರ್ ಪ್ರಕಾರ 24 ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗಬೇಕಿತ್ತು. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಬ್ಯಾಂಕಿ‌ನ ಅನುಮೋದನೆ ಇಲ್ಲದೇ 6 ಕೋಟಿ ರೂಪಾಯಿ ಹಣ ಗುತ್ತಿಗೆದಾರರಿಗೆ ನೀಡಿದ್ದು, ಕಾನೂನು ಬಾಹಿರವಾಗಿದ್ದು, ಬೆಕ್ಕಿನ ಆಹಾರ, ಕಾರು ಟೈರ್, ವಿಮಾನ ಟಿಕೆಟ್, ಹೋಟಲ್ ಉದ್ದೇಶಕ್ಕೆ 22,58, 595 ರೂಪಾಯಿ ಹಣ ನೀಡಿದ್ದಾರೆ ಎಂದು ಆರೋಪಿಸಿದ್ದರು.

ಬಸವ ಪುತ್ಥಳಿ ನಿರ್ಮಾಣ ಎಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಮುರುಘಾ ಶ್ರೀಗಳು ನಂಬಿಕೆ ದ್ರೋಹ, ಅನುದಾನ ದುರ್ಬಳಕೆ, ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ ಎಂದಿದ್ದಾರೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಮಾಜಿ ಸಚಿವ ಎಚ್. ಏಕಾಂತಯ್ಯ ದೂರು ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+