ಐಟಿ ದಾಳಿ ಅನುಮಾನ ಹುಟ್ಟಿಸಿದೆ : ನ್ಯಾ. ಸಂತೋಷ್ ಹೆಗ್ಡೆ

Subscribe to Oneindia Kannada

ಚಿತ್ರದುರ್ಗ, ಆಗಸ್ಟ್ 3: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ "ಮಾಹಿತಿ ಇದ್ದಿದ್ದರೆ ಈ ಹಿಂದೆಯೇ ದಾಳಿ ಮಾಡಬೇಕಾಗಿತ್ತು. ಆದರೆ, ಈ ಸಂದರ್ಭದಲ್ಲಿ ದಾಳಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದು ಬೇರೆಯದೇ ರೀತಿಯ ಚರ್ಚೆಗೆ ಗ್ರಾಸವಾಗಿದೆ," ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಐಟಿ ದಾಳಿಯನ್ನು ವಿಶ್ಲೇಷಿಸಿದ್ದಾರೆ.

ಗೋವಿಂದರಾಜ್ ಡೈರಿ ಆಯ್ತು, ಈಗ ಡಿಕೆಶಿ ಲಾಕರ್ ಸರದಿǃ

ಒಂದೊಮ್ಮೆಐ.ಟಿ ಅಧಿಕಾರಿಗಳು ಮಾಹಿತಿ ಇದ್ದು ದಾಳಿ ನಡೆಸಿದರೆ ಅದರಲ್ಲಿ ತಪ್ಪಿಲ್ಲ. ದಾಳಿ ವೇಳೆ ಕೋಟ್ಯಂತರ ರೂಪಾಯಿ ಹಣ ಸಿಕ್ಕಿದೆ. ಇದನ್ನು ನೋಡಿದರೆ ಅಧಿಕಾರಿಗಳು ಅಧಿಕೃತ ಮಾಹಿತಿಯೊಂದಿಗೇ ದಾಳಿ ನಡೆಸಿರಬಹುದು ಎಂದೂ ಸಂತೋಷ್ ಹೆಗ್ಡೆ ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

 There is nothing wrong if IT attacked with information: Santosh Hegde

ಚಿತ್ರದುರ್ಗದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ರಾಜಕೀಯ ಸಂಸ್ಕೃತಿ ವಿರುದ್ಧವೂ ಕಿಡಿಕಾರಿದರು. ಇವತ್ತುಶಾಸಕರ ಖರೀದಿ ಟ್ರೆಂಡ್ ಆಗಿದೆ. ಈ ರೀತಿಯ ಸಂಸ್ಕೃತಿ ಹುಟ್ಟುಹಾಕಿದವರು ಬಿಜೆಪಿಯವರು. ಇದನ್ನು ಕಾಂಗ್ರೆಸ್ ನವರು ಮುಂದುವರಿಸಿದ್ದಾರೆ ಎಂದು ಹೇಳಿದ್ದಾರೆ.

ಡಿಕೆ ಶಿವಕುಮಾರ್ ಪ್ರಕರಣ ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರ?

Ahmed Patel Reacts About Karnataka IT Raid Unprecedented Witch-Hunt Just To Win One Rajya Sabha Seat

"ನಾನು ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದಾಗ ಹಗರಣಗಳ ವರದಿ ಸಿದ್ಧಪಡಿಸಿದ್ದೆ. ಇದರಲ್ಲಿ ಮೂವರು ಮುಖ್ಯಮಂತ್ರಿಗಳು ಹಾಗೂ ಒಂಬತ್ತು ಸಚಿವರ ಹೆಸರುಗಳಿತ್ತು. ಆದರೆ, ಇದರ ಬಗ್ಗೆ ಸೂಕ್ತ ತನಿಖೆ ನಡೆಯಲೇ ಇಲ್ಲ' ಎಂದು ಅವರಯ ಇದೇ ಸಂದರ್ಭದಲ್ಲಿ ವಿಷಾದ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
“If the IT department officials had information, they would have to be attacked earlier. However, the attack has led to many doubts,” said former Lokayukta Justice Santosh Hegde about IT attack on Congress minister DK Shivakumar.
Please Wait while comments are loading...