ಹಿರಿಯೂರು: ಮುಸ್ಲಿಂ ಯುವಕನಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೇಸ್ ದಾಖಲು
ಹಿರಿಯೂರು, ಮೇ, 04: ಮುಸ್ಲಿಂ ಯುವಕನೊಬ್ಬ 21 ವರ್ಷದ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿ ಮೇಲೆ 2015ರಿಂದ ನಿರಂತರವಾಗಿ ಬಲವಂತದ ಲೈಂಗಿಕ ಕ್ರಿಯೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಇನ್ನು ಈ ಬಗ್ಗೆ ಗ್ರಾಮಾಂತರ ಠಾಣೆಗೆ ಏಪ್ರಿಲ್ 28ರಂದು ದೂರು ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಹಳ್ಳಿಯೊಂದರಿಂದ ದೊಡ್ಡಮ್ಮನ ಮನೆಗೆ ಓದಲು ಬಂದಿದ್ದ ತನಗೆ ಸಹಪಾಠಿಯೊಬ್ಬಳ ಅಣ್ಣನ ಪರಿಚಯವಾಗಿದೆ. ಸಹಪಾಠಿಯ ಅಣ್ಣ ಇದನ್ನೇ ಬಂಡವಾಳ ಮಾಡಿಕೊಂಡು ವಿದ್ಯಾರ್ಥಿನಿಗೆ ಆಗಾಗ ಚಾಕೋಲೇಟ್, ಬಿಸ್ಕೆಟ್ ಕೊಡುವ ನೆಪದಲ್ಲಿ ಅಂಗಾಂಗಗಳನ್ನು ಸ್ಪರ್ಷಿಸುತ್ತಿದ್ದ ಎನ್ನುವ ಆರೋಪ ಎದುರಾಗಿದೆ.

16ನೇ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ ಓದುವಾಗ ಮನೆಯಲ್ಲಿ ಯಾರೂ ಇಲ್ಲದೇ ಇರುವಾಗ ಬೇಡವೆಂದರೂ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ. ಅದಾದ ನಂತರ ಮತ್ತೆ ವಿದ್ಯಾರ್ಥಿಯನ್ನು ಬೆದರಿಸಿ ಲೈಂಗಿಕತೆಗೆ ಬಳಸಿಕೊಂಡಿದ್ದ. ಅಲ್ಲದೆ ಪ್ರತಿದಿನ ಮೊಬೈಲ್‌ಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದ. ಯಾರಿಗಾದರೂ ಈ ವಿಚಾರ ತಿಳಿಸಿದರೆ ಜೀವ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದನಂತೆ.
ಏಪ್ರಿಲ್ 26ರಂದು ಮತ್ತೆ ಲೈಂಗಿಕ ಕ್ರಿಯೆಗೆ ಬರುವಂತೆ ಬಲವಂತ ಮಾಡಿದ್ದ. ನಾನು ಒಪ್ಪದೇ ಇದ್ದಾಗ ಗಲಾಟೆ ಮಾಡಿದ್ದ. ಗಲಾಟೆ ಕೇಳಿಸಿಕೊಂಡ ತಾಯಿ ನನ್ನ ನೆರವಿಗೆ ಬಂದರು. ಆಗ ತಾಯಿಗೆ ಮುಸ್ಲಿಂ ಯುವಕ ನಡೆಸಿದ ದೌರ್ಜನ್ಯದ ಬಗ್ಗೆ ವಿವರಿಸಿದೆ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾರೆ.
ತನಗೆ ಆಗಿರುವ ಅನ್ಯಾಯದ ಬಗ್ಗೆ ನ್ಯಾಯ ಕೇಳಲು ಹೋದಾಗ ಆರೋಪಿ ತಂದೆ-ತಾಯಿ ಜಾತಿ ನಿಂದನೆ ಮಾಡಿ, ಆಗಿರುವ ಕೃತ್ಯಕ್ಕೆ ಎಷ್ಟು ಹಣಬೇಕು ಕೊಡುತ್ತೇವೆ ಎಂದು ಬೆದರಿಸಿದರು. ಗ್ರಾಮಸ್ಥರು ಸದರಿ ವಿಚಾರದ ಬಗ್ಗೆ ಮಾತನಾಡೋಣ ಎಂದು ತಿಳಿಸಿದ್ದ ಕಾರಣಕ್ಕೆ ತಡವಾಗಿ ದೂರು ನೀಡುತ್ತಿದ್ದೇವೆ ಎಂದು ಯುವತಿ ಹೇಳಿದ್ದಾರೆ.
ಫೋಕ್ಸೋ ಹಾಗೂ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಗುರುವಾರ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications