ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುರುಘಾ ಶ್ರೀಗೆ ರಾಜಾಥಿತ್ಯ? ಪೊಲೀಸರ ವೈಫಲ್ಯವೇನು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 03: ಮುರುಘಾ ಮಠದ ಶಿವಮೂರ್ತಿ ಮುರುಘಾ ಶ್ರೀಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಕೂಡಲೇ ಮೈಸೂರಿನ ಒಡನಾಡಿ ಸಂಸ್ಥೆಯು ನಜರಾಬಾದ್‌ ಪೊಲೀಸರಿಗೆ ದೂರನ್ನು ದಾಖಲಿಸಿದ್ದರು. ಮುರುಘಾ ಶ್ರೀಗಳು ಪ್ರಭಾವಿಗಳಾಗಿದ್ದರಿಂದ ತನಿಖೆಯ ದಿಕ್ಕು ಬದಲಾಗುವ ಎಲ್ಲಾ ವ್ಯವಸ್ಥೆಗಳುಗುತ್ತಿವೆ ಎನ್ನುವ ಅನುಮಾನ ಮೂಡಿತ್ತು. ಇದರ ನಡುವೆ ನ್ಯಾಯಾಧೀಶರ ಮುಂದೆ ಸಂತ್ರಸ್ತರು ಹೇಳಿಕೆಯನ್ನು ದಾಖಲಿಸಿದರು. ಆದರೆ ಈ ಪ್ರಕರಣ ಶೀಘ್ರದಲ್ಲೇ ನಡೆಯಬೇಕಿದ್ದ ತನಿಖೆ ತಡವಾಗುತ್ತಿತ್ತು. ಇದರ ವೈಫಲ್ಯಗಳೇನು ಅನ್ನೋದರ ವರದಿ ಇಲ್ಲಿದೆ.

ಮುರುಘಾ ಶ್ರೀಗಳ ಬಂಧನದ ಬಳಿಕ ಹೈಡ್ರಾಮ ನಡೆದಿರುವ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಮುರುಘಾ ಶ್ರೀಯನ್ನು ರಾತ್ರೋರಾತ್ರಿ ಬಂಧಿಸಿದ ಚಿತ್ರದುರ್ಗ ಪೊಲೀಸರು ನ್ಯಾಯಾಧೀಶರ ಮನೆಗೆ ಕರೆದುಕೊಂಡು ಹೋಗಿದ್ದರು. ಯಾವುದೇ ಸಣ್ಣ ಕಳ್ಳತನ ಪ್ರಕರಣವಾದರೂ ಆರೋಪಿಯನ್ನು ತಮ್ಮ ಕಸ್ಟಡಿಗೆ ಕೊಡುವಂತೆ ಕೇಳುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿ ಎಂದು ಸುಮ್ಮನಾಗಿದ್ದರು.

ಸಂತ್ರಸ್ತ ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶ್ರೀಗಳನ್ನು ತೀವ್ರ ತನಿಖೆಗೆ ಒಳಪಡಿಸಬೇಕಿದ್ದ ಪೊಲೀಸರು ನ್ಯಾಯಾಂಗದ ಮುಂದೆ ಸುಮ್ಮನಿದ್ದರು. ಇದರಿಂದ ಜೈಲಿಗೆ ಹೋಗಬೇಕಿದ್ದ ಸ್ವಾಮೀಜಿ ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆಗೆ ದಾಖಲಾದರು.

POCSO case against Murugha Shri:Police Investigation Failure points here

ಮುರುಘಾ ಶರಣರ ಕೇಸ್ ತನಿಖೆಯಲ್ಲಿ ಸಾಲು ಸಾಲು ವೈಫಲ್ಯಗಳು..!
*ಮುರುಘಾ ಶರಣರ ಬಂಧಿಸಿದ ನಂತರ 24 ಗಂಟೆ ಅವಕಾಶ ಇದ್ದರೂ 2 ಗಂಟೆ ರಾತ್ರಿಯಲ್ಲಿ ಜಡ್ಜ್ ಮುಂದೆ ಹಾಜರುಪಡಿಸಿದ್ದೇಕೆ..?
*ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಪೊಲೀಸ್ ಕಸ್ಟಡಿ ಕೇಳಿಲ್ಲ ಯಾಕೆ..?
*ನ್ಯಾಯಾಧೀಶರ ಮುಂದೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕೇಳಿದ್ಯಾಕೆ..?
*ಜೈಲಿಗೆ ಕಳುಹಿಸಿದ ನಂತರ ಅನಾರೋಗ್ಯ ನೆಪದಲ್ಲಿ ಆಸ್ಪತ್ರೆ ಸೇರಿಸೋ ಫ್ಲ್ಯಾನ್ ಆಗಿತ್ತಾ..?
*ನ್ಯಾಯಾಧೀಶರ ಅನುಮತಿ ಕೇಳದೆ ತರಾತುರಿಯಲ್ಲಿ ಆಸ್ಪತ್ರೆಗೆ ಸೇರಿಸಿದ್ಯಾಕೆ..?
*ಆರೋಪಿ ಆಸ್ಪತ್ರೆಗೆ ಸೇರಿದ ಮೇಲೂ ಕೋರ್ಟ್ ಗಮನಕ್ಕೆ ಯಾಕೆ ಕೊಟ್ಟಿಲ್ಲ..?
*ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಕಸ್ಟಡಿಗೆ ಕೇಳದ ಪೊಲೀಸರು ಬೆಳಗ್ಗೆ ಕಸ್ಟಡಿಗೆ ಕೇಳಿದ್ಯಾಕೆ..?
* ಆರೋಪಿಯನ್ನು ಕೋರ್ಟ್ ಅನುಮತಿ ಇಲ್ಲದೆ ಬೆಂಗಳೂರಿಗೆ ಶಿಫ್ಟ್ ಮಾಡಲು ಪ್ರಯತ್ನ ಯಾಕೆ ನಡೀತು‌..?
* ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಅಂತ ಜಿಲ್ಲಾ ವೈದ್ಯರು ಹೇಳಿದ್ಯಾಕೆ‌..?
* ಎದೆನೋವು ಅಂತ ವೀಲ್ ಚೇರ್ ನಲ್ಲಿ ಇದ್ದವರು ಕೋರ್ಟ್ ಗೆ ನಡ್ಕೊಂಡು ಹೋಗಿದ್ಯಾಕೆ...?
* ನಡ್ಕೊಂಡು ಹೋಗಿದ್ದು ಅಷ್ಟೇ ಅಲ್ಲ ಮೊದಲ ಮಹಡಿಗೆ ಮೆಟ್ಟಿಲು ಹತ್ತಿ ಹೋದರು‌, ಇಲ್ಲಿ ಎದೆನೋವು ಇರಲಿಲ್ಲವೇ..?
* ವೀಲ್ ಚೇರ್ ನಲ್ಲಿ ಆಸ್ಪತ್ರೆಗೆ ಬಂದು ಐಸಿಯುಗೆ ದಾಖಲಾಗಿದ್ದವರು ಅಷ್ಟು ಬೇಗ ಚೇತರಿಸಿಕೊಂಡ್ರಾ..?
* ಕೋರ್ಟ್‌ಗೆ ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದ ಪೊಲೀಸರು ಮೆಡಿಕಲ್ ಟೆಸ್ಟ್ ಬಳಿಕ ಆಂಬುಲೆನ್ಸ್ ನಲ್ಲಿ ಕರೆದೊಯ್ದಿದ್ದು ಯಾಕೆ..?
* ಇಷ್ಟೆಲ್ಲಾ ಮಾಡಿರೋ ಪೊಲೀಸರು‌ ಆರೋಪಿಯನ್ನು ಡಿವೈಎಸ್ಪಿ ಕಚೇರಿಯ ಸೆಲ್‌ನಲ್ಲಿ ಇಟ್ಟಿರ್ತಾರ..?
* ಒಂದೇ ದಿನದಲ್ಲಿ ಇಷ್ಟು ವೈಫಲ್ಯ ಆದರೆ ಇನ್ನು ಕಸ್ಟಡಿಯಲ್ಲಿ ಇರೋ ಮೂರು ದಿನದಲ್ಲಿ ಇನ್ನೆಷ್ಟು ವೈಫಲ್ಯ ಆಗಬಹುದು..?
* ನಿಷ್ಪಕ್ಷಪಾತ ತನಿಖೆ ಅಂದರೆ ಇದೇನಾ..?
* ಪೊಲೀಸರಿಗೆ ಹಾಗೂ ಕಾನೂನಿಗೆ ತಲೆಬಾಗ್ತೀನಿ ಅಂದ್ರು ಸ್ವಾಮೀಜಿ ಆದರೇ ಇದೆಲ್ಲಾ ಹೈಡ್ರಾಮಾಗೆ ಏನ್ ಹೇಳಬೇಕು..?

ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ಹೇಳುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ಜಾತಿ, ಮಠ, ಉಳ್ಳವರ ಲೆಕ್ಕಾಚಾರದಂತೆ ತನಿಖೆಯನ್ನು ಮಂದಗತಿಯಲ್ಲಿ ಮಾಡುತ್ತಿದ್ದಾರೆ. ಶ್ರೀಗಳ ಗೌರವಕ್ಕೆ ಚ್ಯುತಿಯಾಗದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸಂತ್ರಸ್ತ ಅಪ್ರಾಪ್ತೆಯರ ಹೀಗೆ ಅಗುತ್ತೆ ಅಂತಲೇ ಸಾಕಷ್ಟು ಮನನೊಂದಿದ್ದರು ಎಂಬುದು ಉಲ್ಲೇಖನೀಯವಾದರು. ಪೊಲೀಸರು ಪ್ರಕರಣದ ತನಿಖೆಯನ್ನು ನಿಸ್ಪಕ್ಷಪಾತವಾಗಿ ಮಾಡಬೇಕಿದೆ.

English summary
POCSO case against Chitradurga Murugha seer, Here is the details of how the police are treating the accused and what are the failures of the police in the case of sexual assault. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X