ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊದಲ ಬಾರಿಗೆ ಚಿತ್ರದುರ್ಗದಿಂದ ಕೋಲ್ಕತ್ತಾಗೆ ರೈಲಲ್ಲಿ ಈರುಳ್ಳಿ ಸಾಗಟ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 30: ಚಿತ್ರದುರ್ಗ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದರು. ಈಗ ರೈತರಿಗೆ ನೆಮ್ಮದಿ ನೀಡುವ ಸುದ್ದಿಯೊಂದಿದೆ. ಮೊದಲ ಬಾರಿಗೆ ಚಿತ್ರದುರ್ಗದಿಂದ ಕೋಲ್ಕತ್ತಾಗೆ ಈರುಳ್ಳಿ ಸಾಗಣೆ ಮಾಡಲಾಗಿದೆ.

ಮೊದಲು ದುಬಾರಿ ಬಾಡಿಗೆ ನೀಡಿ ಲಾರಿಗಳ ಮೂಲಕ ಈರುಳ್ಳಿಯನ್ನು ಕೋಲ್ಕತ್ತಾದ ಮಾರುಕಟ್ಟೆಗೆ ಸಾಗಾರ ಮಾಡುವ ಸ್ಥಿತಿ ಇತ್ತು. ಆದರೆ ರೈತರು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮಾಡಿದ ಮನವಿಗೆ ಸ್ಪಂದನೆ ಸಿಕ್ಕಿದೆ. ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲೆಯ ರೈತರು 20 ಟನ್‌ ಗೂ ಹೆಚ್ಚು ಈರುಳ್ಳಿಯನ್ನು ರೈಲಿನ ಮೂಲಕ ಕೋಲ್ಕತ್ತಾಗೆ ಸಾಗಿಸಿದ್ದಾರೆ.

 ಹೊಸದುರ್ಗದಲ್ಲಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ವಿಭಿನ್ನ ಪ್ರತಿಭಟನೆ ಹೊಸದುರ್ಗದಲ್ಲಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ವಿಭಿನ್ನ ಪ್ರತಿಭಟನೆ

ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು 1 ಕೆ. ಜಿ. ಈರುಳ್ಳಿಗೆ 1.60 ಪೈಸೆಯಂತೆ ಬಾಡಿಗೆ ನೀಡಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದ ರೈಲ್ವೆ ನಿಲ್ದಾಣದಿಂದ ಕೋಲ್ಕತ್ತಾ ಮಾರುಕಟ್ಟೆಗೆ ಕಡಿಮೆ ವೆಚ್ಚದಲ್ಲಿ ಸುಮಾರು 20 ಬೋಗಿಗಳಲ್ಲಿ ಈರುಳ್ಳಿ ಸಾಗಣೆ ಮಾಡಿದ್ದಾರೆ.

 ಪಾತಾಳಕ್ಕೆ ಕುಸಿದ ಈರುಳ್ಳಿ ದರ: ರೈತರ ಕಣ್ಣಲ್ಲಿ ನೀರು ಪಾತಾಳಕ್ಕೆ ಕುಸಿದ ಈರುಳ್ಳಿ ದರ: ರೈತರ ಕಣ್ಣಲ್ಲಿ ನೀರು

Onion Transporting To Kolkata By Train From Chitradurga

ಮನವಿಗೆ ಸ್ಪಂದಿಸಿದ ಇಲಾಖೆ: "ಪ್ರತಿ ಬಾರಿ ರೈತರಿಂದ ಖರೀದಿ ಮಾಡಿದ ಈರುಳ್ಳಿಯನ್ನು ಲಾರಿಗಳ ಮೂಲಕ ಸಾಗಿಸಲಾಗುತ್ತಿತ್ತು. ಲಾರಿಗಳ ಬಾಡಿಗೆ ದುಬಾರಿ ಆಗುತ್ತಿತ್ತು. ಹಾಗಾಗಿ ರೈಲ್ವೆ ಇಲಾಖೆಗೆ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿ ರೈಲು ಬಿಟ್ಟಿರುವುದು ನಮಗೆ ಅನುಕೂಲವಾಗಿದೆ. ರೈಲಿನಲ್ಲಿ ಒಮ್ಮೆ 20 ಟನ್​​ಗೂ ​ಅಧಿಕ ತೂಕದ ಈರುಳ್ಳಿ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ಅಷ್ಟೇ ಅಲ್ಲದೆ ನಮಗೆ ಹಮಾಲಿ ಹಣ ಕೂಡ ಕಡಿಮೆ ವೆಚ್ಚದಲ್ಲಿ ಆಗುತ್ತಿದೆ" ಎಂದು ಬಂಜಗೆರೆಯ ರೈತ ಚಂದ್ರಣ್ಣ ಹೇಳಿದರು.

ಚಾಮರಾಜನಗರ: ಸಾಂಬಾರ್ ಈರುಳ್ಳಿ ಬೆಳೆದ ರೈತನಿಗೆ ಸಂಕಷ್ಟ!ಚಾಮರಾಜನಗರ: ಸಾಂಬಾರ್ ಈರುಳ್ಳಿ ಬೆಳೆದ ರೈತನಿಗೆ ಸಂಕಷ್ಟ!

ಈರುಳ್ಳಿ ದರ ಕುಸಿತ; ರಾಜ್ಯದಲ್ಲಿ ಈರುಳ್ಳಿ ದರ ಕುಸಿತ ಕಂಡಿತ್ತು. ಇದೀಗ ಕಳೆದ ಒಂದು ವಾರದಿಂದ ಪ್ರತಿ ಕ್ವಿಂಟಲ್‌ಗೆ ದರ 600 ರಿಂದ 1200 ರೂಪಾಯಿಗಳು ಸಿಗಬಹುದು ಎನ್ನಲಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಹಿರಿಯೂರು ಭಾಗದಲ್ಲಿ ಸಾಕಷ್ಟು ರೈತರು ಈರುಳ್ಳಿ ಬೆಳೆದಿದ್ದಾರೆ.

ಬೆಲೆ ಇಲ್ಲದ ಕಾರಣ ಟ್ರ್ಯಾಕ್ಟರ್ ಮೂಲಕ ಬೆಳೆಗಳನ್ನು ನಾಶಪಡಿಸಿದ್ದಾರೆ. ಇನ್ನೂ ಕೆಲ ರೈತರು ತಿಪ್ಪೆ ಗುಂಡಿಗೆ ಸುರಿದಿದ್ದಾರೆ. ಈರುಳ್ಳಿ ಬೆಳೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ನಷ್ಟ ಅನುಭವಿಸಿದ್ದಾರೆ. ಕೊಳೆ ರೋಗ ಬಂದ ಕಾರಣ ಈರುಳ್ಳಿ ಫಸಲು ಸರಿಯಾಗಿ ರೈತರ ಕೈ ಸೇರಲಿಲ್ಲ.

ಸಾಲ ಮಾಡಿಕೊಂಡು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆ ಬೆಳೆದಿದ್ದರು. ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಈರುಳ್ಳಿ ತೆಗೆದುಕೊಂಡು ಹೋದರೆ ಲಾರಿ ಬಾಡಿಗೆ ಸಹ ಸಿಗದೇ ಎಷ್ಟೋ ರೈತರು ಕಣ್ಣೀರು ಹಾಕಿಕೊಂಡು ವಾಪಸ್ ಬಂದಿರುವ ಉದಾಹರಣೆಗಳಿವೆ.

ಹಿರಿಯೂರು ತಾಲ್ಲೂಕಿನ ಈಶ್ವರಗೆರೆ ಗ್ರಾಮದ ರೈತರೊಬ್ಬರು 5 ಎಕರೆಯಲ್ಲಿ ಈರುಳ್ಳಿ ಬೆಳೆ ಬೆಳೆದು ಕೆರೆಗೆ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಚಳ್ಳಕೆರೆ ತಾಲೂಕಿನ ಕ್ಯಾತಗೊಂಡನಹಳ್ಳಿ ಗ್ರಾಮದ ರೈತ ಶ್ರೀನಿವಾಸ್ 6 ಎಕರೆಯಲ್ಲಿ ನಾಲ್ಕು ಲಕ್ಷ ಖರ್ಚು ಮಾಡಿ 882 ಚೀಲ ಈರುಳ್ಳಿ ಬೆಳೆದಿದ್ದರು. ಇದನ್ನು ಬೆಂಗಳೂರು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಪ್ರತಿ ಕ್ವಿಂಟಲ್‌ಗೆ 230 ರೂಪಾಯಿ ಬೆಲೆ ಪಡೆದಿದ್ದರು. ಬೆಂಗಳೂರಿಗೆ ಸಾಗಾಟ ಮಾಡಿದ ಲಾರಿ ಬಾಡಿಗೆಯು ಸಹ ಕೈಗೆ ಬಂದಿರಲಿಲ್ಲ.

Recommended Video

ಆ ದಿನಗಳನ್ನ ಮೆಲುಕು ಹಾಕಿದ ಬೆಂಗಳೂರು ನಾಗೇಶ್ | Oneindia Kannada

ಇದೇ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದ ರೈಲ್ವೆ ನಿಲ್ದಾಣದಿಂದ ಕೋಲ್ಕತ್ತಾದ ಮಾರುಕಟ್ಟೆಗೆ ಕಡಿಮೆ ವೆಚ್ಚದಲ್ಲಿ ರೈತರು ಸುಮಾರು 20 ಬೋಗಿಗಳ ಮೂಲಕ ಈರುಳ್ಳಿ ಸಾಗಣೆ ಮಾಡುತ್ತಿದ್ದಾರೆ.

English summary
Farmers of Chitradurga district Challakere transporting onion to Kolkata by train. This is first time Onion transporting from district to Kolkata by train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X