ಚಿತ್ರದುರ್ಗದ ನೀಲಕಂಠೇಶ್ವರನ ದರ್ಶನ ಪಡೆದ ಪ್ರಧಾನಿ ಮೋದಿ ಪತ್ನಿ
ಚಿತ್ರದುರ್ಗ, ಮಾರ್ಚ್ 04: ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಅವರು ಬುಧವಾರ ಬೆಳಿಗ್ಗೆ ನಗರದ ನೀಲಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಶಿವಮೊಗ್ಗ ಜಿಲ್ಲೆಯ ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಆಯೋಜಿಸಿರುವ 'ಶ್ರೀ ಕೃಷ್ಣಾರ್ಪಣಂ' ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುವ ಮಾರ್ಗ ಮಧ್ಯೆ ಚಿತ್ರದುರ್ಗ ನಗರಕ್ಕೆ ಅವರು ಆಗಮಿಸಿದರು. ರಾಜ್ಯ ಸರ್ಕಾರದ ಅತಿಥಿಯಾಗಿ ಆಗಮಿಸಿದ ಅವರನ್ನು ಜಿಲ್ಲಾಡಳಿತ ಅಧಿಕಾರಿಗಳು ಹಾಗೂ ದೇವಾಲಯ ಆಡಳಿತ ಮಂಡಳಿ ಪ್ರಮುಖರು ಸ್ವಾಗತಿಸಿದರು.
ನೀಲಕಂಠೇಶ್ವರ ದೇವರ ಅಭಿಷೇಕ, ಅಷ್ಟೋತ್ತರ, ಮಹಾ ಮಂಗಳಾರತಿಯ ದರ್ಶನ ಪಡೆದರು. ಈ ವೇಳೆ ಮೋದಿ ಸೇರಿದಂತೆ ಇಡೀ ಪರಿವಾರಕ್ಕೆ ದೇವರ ಅನುಗ್ರಹ ಬೇಡಿದರು. ನೀಲಕಂಠೇಶ್ವರ ದೇವರ ದರ್ಶನದ ನಂತರ ನಗರದ ಪ್ರವಾಸಿ ಮಂದಿರಕ್ಕೆ ತೆರಳಿ ಉಪಾಹಾರ ಸೇವಿಸಿದರು.

ಜಶೋದಾ ಅವರು ಶಿವನ ದರ್ಶನ ಮಾಡದೇ ಏನನ್ನೂ ಸೇವಿಸುವುದಿಲ್ಲ. ನೀರನ್ನೂ ಕುಡಿಯುವುದಿಲ್ಲ ಎಂದು ಅವರೊಂದಿಗೆ ಬಂದಿದ್ದ ಪರಿವಾರ ಸದಸ್ಯರು ತಿಳಿಸಿದರು.












Click it and Unblock the Notifications