ಚಿತ್ರದುರ್ಗ: ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ದಿನದಂದೇ 5 ತಿಂಗಳ ಮಗುವಿಗೆ ನಾಮಕರಣ
ಚಿತ್ರದುರ್ಗ, ಜನವರಿ, 22: ಸೋಮವಾರವಾದ ಇಂದು (ಜನವರಿ 22) ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಇಡೀ ದೇಶಾದ್ಯಂತ ಸಂಭ್ರಮಾಚರಣೆಯ ಮುಗಿಲು ಮುಟ್ಟಿದೆ. ವಿಶೇಷ ಪೂಜೆ, ಭಜನೆ, ಮಂತ್ರ ಪಠಣ, ಪ್ರಸಾದ ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳು ನಡೆಯುತ್ತಿವೆ. ಅದರಂತೆಯೇ ಕೋಟೆ ನಾಡು ಚಿತ್ರದುರ್ಗದಲ್ಲಿಲೂ ವಿಶೇಷ ಕಾರ್ಯಕ್ರಮವೊಂದು ನಡೆಯಿತು. ಶ್ರೀ ರಾಮಮಂದಿರ ಉದ್ಘಾಟನೆ ಅಂಗವಾಗಿ ಮಗುವಿಗೆ ಇಂದೇ ನಾಮಕರಣ ಮಾಡಲಾಗಿದೆ.
ಹೌದು ಚಿತ್ರದುರ್ಗ ಗಾಂಧಿನಗರದ ಸಾಗರ್ ಅವರು ಭಾವನಾ ಎಂಬುವರೊಂದಿಗೆ ಮದುವೆಯಾಗಿದೆ. ಮದುವೆಯ ನಂತರ ಭಾವನಾ ಅವರು 2023, ಸೆಪ್ಟೆಂಬರ್ 22ರಂದು ಗುಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಂದಿಗೆ ಮಗುವಿಗೆ 5 ತಿಂಗಳು ತುಂಬಿದ್ದು, ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಮಗುವಿಗೆ "ಶ್ರೀರಾಮ್" ಎಂದು ನಾಮಕರಣ ಮಾಡಿದ್ದಾರೆ.

ತಂದೆ ಸಾಗರ್ ಮೆಡಿಕಲ್ ರೆಪ್ರೆಸೆಂಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪತ್ನಿ ಭಾವನಾ ಗೃಹಿಣಿಯಾಗಿದ್ದಾರೆ ಎನ್ನಲಾಗಿದೆ. ಇವರಿಬ್ಬರೂ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತನ್ನ ಪುತ್ರನಿಗೆ ಅಯೋಧ್ಯೆ ರಾಮಮಂದಿರ ಪೂಜೆ ಸಮಯದಲ್ಲಿ ಮಗುವಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇನ್ನು ಈ ಬಗ್ಗೆ ಒನ್ ಇಂಡಿಯಾ ನ್ಯೂಸ್ ಜೊತೆ ಮಾತನಾಡಿ ಖುಷಿ ಹಂಚಿಕೊಂಡಿರುವ ತಾಯಿ ಭವನಾ "ಇಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇದು ಒಳ್ಳೆಯ ದಿನ ಆಗಿರುವುದರಿಂದ ಕುಟುಂಬದ ಸದಸ್ಯರು ಸೇರೀ ಮಗುವಿನ ಹೆಸರಿನ ಬಗ್ಗೆ ತಿರ್ಮಾನ ಮಾಡಲಾಯಿತು", ಎಂದರು.
ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಜರುಗಿದ ಸಮಯದಲ್ಲಿ ಮಗನಿಗೆ ಶ್ರೀರಾಮ್ ಎಂದು ನಾಮಕರಣ ಮಾಡಲಾಯಿತು. ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆಸಿ ನಾಮಕರಣ ಮಾಡಲಾಯಿತು. ಇದರಿಂದ ಮನೆಯಲ್ಲಿ ಎಲ್ಲರೂ ಖುಷಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.












Click it and Unblock the Notifications