ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುರುಘಾ ಶ್ರೀ ಪ್ರಕರಣ: ಎಡಿಜಿಪಿಗೆ ಪತ್ರ ಬರೆದ ಮಠದ ವಕ್ತಾರ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ನವೆಂಬರ್ 25 : ಮುರುಘಾ ಮಠದ ಅಪ್ರಾಪ್ತ ಬಾಲಕಿಯರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಒಡನಾಡಿ ಸಂಸ್ಥೆ ಮುಖ್ಯಸ್ಥರಾದ ಸ್ಟ್ಯಾನ್ಲಿ ಮತ್ತು ಪರುಶುರನ್ನು ತನಿಖೆಗೆ ಒಳಪಡಿಸಿ, ಕಾನೂನು ಕ್ರಮ ಜರುಗಿಸಬೇಕು ಹಾಗೂ ಒಡನಾಡಿ ಸಂಸ್ಥೆಯಲ್ಲಿರುವ ಅಪ್ರಾಪ್ತ ಬಾಲಕಿಯರನ್ನು ಬಿಡುಗಡೆಗೊಳಿಸುವಂತೆ ಶ್ರೀಮಠದ ವಕ್ತಾರ ಜೀತೇಂದ್ರ ಅವರು ಎಡಿಜಿಪಿಗೆ ಪತ್ರ ಬರೆದಿದ್ದಾರೆ.

ಡಾ. ಮುರುಘಾ ಶರಣರು ಜೈಲಿಗೆ ಹೋಗಲು ಒಡನಾಡಿ ಸಂಸ್ಥೆ ಪಿತೂರಿಯಿದ್ದು, ಸ್ಟ್ಯಾನ್ಲಿ ಮತ್ತು ಪರುಶು ಇವರಿಬ್ಬರ ಷಡ್ಯಂತ್ರ ಇದೆ ಎಂದು ಮೇಲುನೋಟಕ್ಕೆ ಕಂಡು ಬರುತ್ತಿದೆ ಎಂದಿದ್ದಾರೆ.

ನ್ಯಾಯಾಂಗ ಬಂಧನದಲ್ಲಿರುವ ಬಸವರಾಜನ್ ಹೆಸರಿನಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆನ್ಯಾಯಾಂಗ ಬಂಧನದಲ್ಲಿರುವ ಬಸವರಾಜನ್ ಹೆಸರಿನಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ

ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಮುರುಘಾ ಶರಣರ ವಿರುದ್ಧ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡನಾಡಿ ಸಂಸ್ಥೆ ಹಾಗೂ ಮುಖ್ಯಸ್ಥರು ಎ3 ಆರೋಪಿಗಳಾಗಿದ್ದಾರೆ. ಸಂತ್ರಸ್ತ ಬಾಲಕಿಯರ ತಾಯಿ ಎ2 ಆರೋಪಿಯಾಗಿದ್ದಾರೆ ಎಂದಿದ್ದಾರೆ.

Murugha Mutt Spokesperson Letter to ADGP to Demand a Probe on Odanadi chief

ಪಿತೂರಿ ಆರೋಪ ಇರುವ ಒಡನಾಡಿ ಸಂಸ್ಥೆಯಲ್ಲಿ ಸಂತ್ರಸ್ತ ಬಾಲಕಿಯರು ಮತ್ತು ತಾಯಿ ಇರುವುದು ಅನುಮಾನಕ್ಕೆ ಆಸ್ಪದವಾಗಿದ್ದು, ಸಂತ್ರಸ್ತ ಬಾಲಕಿಯರಿಗೆ ಒಡನಾಡಿ ಸಂಸ್ಥೆಯವರು ಪ್ರಚೋದಿಸುತ್ತಿದ್ದಾರೆ ಎನ್ನಿಸುತ್ತಿದೆ. ಹಾಗಾಗಿ ತಕ್ಷಣ ಸಂತ್ರಸ್ತ ಬಾಲಕಿಯರನ್ನು ಸರ್ಕಾರದ ಯಾವುದಾದರೂ ಇಲಾಖೆ ಆಶ್ರಯದಲ್ಲಿ ಇಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ

ಮೈಸೂರಿನ ಸಿಡ್ಲ್ಯುಯುಸಿ ನಡೆಯೂ ಕೂಡ ಅನುಮಾನ ಆಸ್ಪದವಾಗಿದೆ ಇವರನ್ನು ತನಿಖೆಗೆ ಒಳಪಡಿಸಿ, ಜೊತೆಗೆ ಒಡನಾಡಿ ಸಂಸ್ಥೆಯವರು ಬಾಲಕಿಯರಿಗೆ ನ್ಯಾಯಾ ಕೊಡಿಸುವ ನೆಪದಲ್ಲಿ ಮುರುಘಾ ಶ್ರೀಗಳ ವಿರುದ್ಧ ಮಾದಕ ವಸ್ತುಗಳ ಬಳಕೆ, ಇಂಜೆಕ್ಷನ್‌ಗಳ ಬಳಕೆ, ಕುಡಿತ ಆರೋಪ ಸೇರಿದಂತೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇದರಿಂದ ಭವ್ಯಪರಂಪರೆವುಳ್ಳ ಮಠಕ್ಕೆ ಕಳಂಕ ತರುವ ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Murugha Mutt Spokesperson Letter to ADGP to Demand a Probe on Odanadi chief

ಇನ್ನು ಮುರುಘಾ ಮಠದಲ್ಲಿನ ಮಕ್ಕಳ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅದರೆ ಮಠದಲ್ಲಿದ್ದ ಮಕ್ಕಳನ್ನು ಸರ್ಕಾರವು ಕಾನೂನು ಬದ್ಧವಾಗಿ ಕ್ರಮ ಜರುಗಿಸಿ ಸ್ಥಳಾಂತರ ಮಾಡಿರುವುದು ದಾಖಲೆಯಲ್ಲಿದೆ. ಆದರೆ ಇವರು ಮಕ್ಕಳು ನಾಪತ್ತೆಯಾಗಿದ್ದಾರೆಂದು ಹೇಳುವ ಮೂಲಕ ಪೊಲೀಸ್, ಜಿಲ್ಲಾಡಳಿತಕ್ಕೆ ಅವಮಾನ ಮಾಡಿದಂತಾಗಿದೆ.

English summary
Murugha Mutt spokesperson Jeetendra has written a letter to the ADGP asking Investigate and prosecute on Stanley and Parushu,the heads of the companion organization of Mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X