ಚಿತ್ರದುರ್ಗದ ರಾಯರ ಮಠದಲ್ಲೊಂದು ಆಶ್ಚರ್ಯಕರ ಪವಾಡ, ಏನದು?-ಇಲ್ಲಿದೆ ಮಾಹಿತಿ
ಚಿತ್ರದುರ್ಗ, ಡಿಸೆಂಬರ್, 29: ಗುರು ರಾಯರ ಪವಾಡ ಬಹಳ ದೊಡ್ಡದು, ಅಂದುಕೊಂಡಿದ್ದು ನೇರವೇರುತ್ತದೆ ಎಂಬ ಭಕ್ತ ಸಮೂಹದಲ್ಲಿ ನಂಬಿಕೆ ಬೇರೂರಿಬಿಟ್ಟಿದೆ. ಅದರಂತೆಯೇ ರಾಯರ ಆರಾಧಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಇದೇ ಕಾರಣಕ್ಕೆ. ರಾಯರನ್ನು ನಂಬಿದರೆ ಎಲ್ಲವೂ ಒಳಿತಾಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯೂ ಸಿಕ್ಕಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ನಗರದ ರಾಯರ ಮಠದಲ್ಲಿ ಪವಾಡವೊಂದು ನಡೆದಿರುವುದು ಬೆಳಕಿಗೆ ಬಂದಿದೆ.
ಕೋಟೆ ನಾಡು ಚಿತ್ರದುರ್ಗದ ರಾಯರ ಮಠಕ್ಕೆ ರಾಜ್ಯದ ಮೂಲೆ ಮೂಲೆಯಿಂದಾನೂ ಭಕ್ತರು ಬರುತ್ತಾರೆ. ಅದರಂತೆಯೇ ಇಲ್ಲೊಂದು ವಿಶೇಷವಾದ ಪವಾಡವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿಗಳಾದ ಶ್ರೀಕಾಂತಾಚಾರ್ಯ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಮಠಕ್ಕೆ ಬಂದಿದ್ದರು. ಇಬ್ಬರು ಮಕ್ಕಳಿಗೆ ಅಂಗ ವೈಕಲ್ಯ ಕಾಡುತ್ತಿತ್ತು. ಹೀಗಾಗಿ ವೀಲ್ ಚೇರ್‌ನಲ್ಲಿಯೇ ಮಠಕ್ಕೆ ಬಂದಿದ್ದರು. ಶ್ರೀರಾಯರು ವೆಂಕಣ್ಣಗೆ ಮೋಕ್ಷ ಕೊಟ್ಟ ಸ್ಥಳ ಹಾಗೂ ಶ್ರೀರಾಯರ ಚಲ ಬೃಂದಾವನ ದರ್ಶನವನ್ನು ಮಾಡಿದರು.

ರಾಯರ ದರ್ಶನ ನಂತರ ಮಗಳಿಗೆ ಒಂದು ಪ್ರದಕ್ಷಿಣೆ ಹಾಕಬೇಕೆಂದು ಆಸೆಯಾಗಿದೆ. ಅಮ್ಮನನ್ನು ಕೇಳಿದಳು, ಅಮ್ಮ ಅನುಮತಿ ನೀಡಿ ರಾಯರಲ್ಲಿ ಪ್ರಾರ್ಥಿಸಿದರು. ಅಲ್ಲಿ ಪವಾಡವೆ ನಡೆಯಿತು. ಆ ಹೆಣ್ಣು ಮಗು wheel chair ಸಹಾಯವಿಲ್ಲದೆ ನಡೆದುಕೊಂಡು ಪ್ರದಕ್ಷಿಣೆ ಹಾಕಿದಳು. ತಂದೆ ತಾಯಿ ಇಬ್ಬರೂ ಈ ದೃಶ್ಯ ಕಂಡು ಆಶ್ಚರ್ಯಕ್ಕೊಳಗಾದರೂ, ಅಲ್ಲದೆ ಬಹಳ ಸಂತೋಷಪಟ್ಟರು.
ನಂತರ ಆ ಹೆಣ್ಣು ಮಗುವಿನ ಪೋಷಕರು ರಾಯರಿಗೆ ಮನಸ್ಪೂರ್ತಿಯಾಗಿ ನಮಸ್ಕರಿಸಿದರು. ಈವರೆಗೂ ಅವಳು ನಡೆದಿದ್ದೇ ನೋಡಿಲ್ಲ ಅಂತಾ ಆ ಪೋಷಕರು ಸಂತಸ ಪಟ್ಟರು. ಹೀಗೆ ಅವರ ರಾಯರ ಪವಾಡಕ್ಕೆ ಮನಸೋತರು. ಕೃತಜ್ಞತಾ ಭಾವದಿಂದ ನಮಸ್ಕರಿಸಿದರು. ಈ ಪವಾಡ ನಿಜಕ್ಕೂ ಅಲ್ಲಿ ನೆರೆದಿದ್ದವರೆಲ್ಲರನ್ನು ಆಶ್ಚರ್ಯಕ್ಕೊಳಗಾಗುವಂತೆ ಮಾಡಿದೆ.
ಚಿತ್ರದುರ್ಗದಲ್ಲಿ 5 ಅಸ್ಥಿಪಂಜರ ಕೇಸ್‌ಗೆ ಬಿಗ್ ಟ್ವಿಸ್ಟ್.!
ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್ ಗೇಟ್ ಬಳಿಯ ಹಳೇ ಬೆಂಗಳೂರು ರಸ್ತೆಯ ಕಾರಾಗೃಹ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಬರೊಬ್ಬರಿ 5 ಅಸ್ಥಿಪಂಜರಗಳ ಪತ್ತೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಪಾಳು ಬಿದ್ದ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಐದು ಮಾನವ ಅಸ್ಥಿಪಂಜರಗಳ ಪತ್ತೆಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಡೆತ್ ನೋಟ್ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ಜಗನ್ನಾಥ ರೆಡ್ಡಿಯ ಪುತ್ರ ನರೇಂದ್ರರೆಡ್ಡಿ ಅವರು 2013ರಲ್ಲಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರಂತೆ. ಆರೋಪಿಯ ವಿರುದ್ಧ ಬೆಂಗಳೂರಿನ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿರುತ್ತಂತೆ. ಈ ಹಿನ್ನೆಲೆಯಲ್ಲಿ ಮನನೊಂದು ಅವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.












Click it and Unblock the Notifications