ಬ್ರಿಟನ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕನ್ನಡಿಗರಿಗೆ ಜಯ
ಚಿತ್ರದುರ್ಗ, ಮೇ.05:ಬ್ರಿಟನ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೆಂಚಾಪುರ ಗ್ರಾಮದವರಾದ ಡಾ. ಕುಮಾರ್ ನಾಯ್ಕ್ ಸೇರಿದಂತೆ ಮತ್ತೊಬ್ಬ ಕನ್ನಡಿಗ ಜಯಗಳಿಸಿದ್ದಾರೆ.
ಚಿತ್ರದುರ್ಗದ ಡಾ. ಕುಮಾರ್ ನಾಯ್ಕ್ ಮೊದಲ ಬಾರಿಗೆ ಜಯ ಗಳಿಸಿದ್ದು, ಪ್ರಸ್ತುತ ಇವರು ಮೂಳೆವೈದ್ಯರಾಗಿ ಲಂಡನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಿಂಡನ್ ಹೇಡನ್ ವಿಕ್ ಕ್ಷೇತ್ರದಲ್ಲಿ ಕನ್ಸರ್ವೇಟಿವ್ ಪಕ್ಷದಿಂದ ಸ್ಪರ್ಧಿಸಿದ್ದ ಕುಮಾರ್ ನಾಯ್ಕ್ ಲೇಬರ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಜಯಭೇರಿ ಬಾರಿಸಿದ್ದಾರೆ.

ಮತ್ತೊಬ್ಬ ಕನ್ನಡಿಗರಾದ ಸುರೇಶ್ ಗಟ್ಟಾಪುರ ಅವರು ಸ್ವಿಂಡನ್ ವೆಸ್ಟಿಯಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದರು. ಇವರು ಕೂಡ ಮತ್ತೊಮ್ಮೆ ಗೆದ್ದು, ಸ್ಥಳೀಯ ಆಡಳಿತ ಸಂಸ್ಥೆಯನ್ನು ಪ್ರವೇಶಿಸಿದ್ದಾರೆ.ಒಟ್ಟಾರೆಯಾಗಿ ಲಂಡನ್ ಚುನಾವಣೆಯಲ್ಲಿ ಕನ್ನಡಿಗರು ಆಯ್ಕೆ ಆಗಿರುವುದು ಸಂತಸದ ವಿಷಯವಾಗಿದೆ.












Click it and Unblock the Notifications