ISRO: ಇಸ್ರೋದ ಆರ್‌ಎಲ್‌ವಿ ಎಲ್‌ಇಎಕ್ಸ್ ಲ್ಯಾಂಡಿಂಗ್ ಯಶಸ್ವಿ
ಚಿತ್ರದುರ್ಗ ಜೂನ್ 23: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಇಸ್ರೋದ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಸ್ವಯಂಚಾಲಿತ ಲ್ಯಾಂಡಿಂಗ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಚಿತ್ರದುರ್ಗದಲ್ಲಿರುವ ಇಸ್ರೋದ ಏರೋನಾಟಿಕಲ್ ಪರೀಕ್ಷಾ ವಲಯದಲ್ಲಿ ಈ ಕಾರ್ಯಾಚರಣೆ ಭಾನುವಾರ ಯಶಸ್ವಿಯಾಗಿ ನಡೆದಿದ್ದು, ಈ ಕುರಿತು ಇಸ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಚಳ್ಳಕೆರೆ ಬಳಿಯ ಎಟಿಆರ್ನಲ್ಲಿ (ಏರೋನಾಟಿಕಲ್ ಟೆಸ್ಟ್ ರೇಂಜ್) ಇಸ್ರೋದ 'ಪುಷ್ಪಕ' ಆರ್‌ಎಲ್‌ವಿ-ಎಲ್‌ಇಎಕ್ಸ್-3 (ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ)ದ ಲ್ಯಾಂಡಿಂಗ್ ಪ್ರಯೋಗ ಯಶಸ್ವಿಗೊಂಡಿದೆ.

ಉಪಗ್ರಹವನ್ನು ಕಕ್ಷೆಗೆ ಸೇರಿಸಿ ಮತ್ತೆ ಭೂಮಿಗೆ ಲ್ಯಾಂಡ್ ಆಗುವ ರಾಕೆಟ್ಅನ್ನು ಇಸ್ರೋ ಅಭಿವೃದ್ಧಿಪಡಿಸಿ, ಯಶಸ್ವಿಯಾಗಿ ಅದರ ಪ್ರಯೋಗವನ್ನು ಮಾಡಿದೆ. ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ATR)ನಲ್ಲಿ ಭಾನುವಾರ ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ ಅಟಾನಮಸ್ ಲ್ಯಾಂಡಿಂಗ್ ಮಿಷನ್ (RLV LEX) ಪರೀಕ್ಷೆಯನ್ನು ನಡೆಸಿತು.
ISRO achieved its third and final consecutive success in the Reusable Launch Vehicle (RLV) Landing EXperiment (LEX) today. "Pushpak" executed a precise horizontal landing, showcasing advanced autonomous capabilities under challenging conditions. With the objectives of RLV LEX… pic.twitter.com/3QIR9rsEkx
— ANI (@ANI) June 23, 2024
ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ಲ್ಯಾಂಡಿಂಗ್ ಅನ್ನು ಡಿಆರ್‌ಡಿಒ ಮತ್ತು ಭಾರತೀಯ ವಾಯುಪಡೆಯೊಂದಿಗೆ ಜಂಟಿಯಾಗಿ ಪರೀಕ್ಷಿಸಿದೆ ಎಂದು ಇಸ್ರೋ ಹೇಳಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ರೆಕ್ಕೆಯ ಉಡಾವಣಾ ವಾಹನವನ್ನು ಹೆಲಿಕಾಪ್ಟರ್ ಮೂಲಕ 4.5 ಕಿ.ಮೀ ಎತ್ತರಕ್ಕೆ ಕೊಂಡೊಯ್ಯಲಾಯಿತು. ಆ ಬಳಿಕ ಆಕಾಶದಿಂದ ರನ್ ವೇ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ ಎಂದು ಇಸ್ರೋ ತಿಳಿಸಿದೆ.
ಇಂದು ಬೆಳಗ್ಗೆ 7.10 ಕ್ಕೆ ಅದು ಚಿತ್ರದುರ್ಗ ಜಿಲ್ಲೆಯ ಕುದಾಪುರ ಗ್ರಾಮದಲ್ಲಿರುವ ಎಟಿಆರ್ ನಲ್ಲಿ (Kudapur ATR) ಮರಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ (ಆರ್ ಎಲ್ ವಿ) ಎಲ್ ಈ ಎಕ್ಸ್ ನ (ELX RLV) ಮೂರನೇ ಮತ್ತು ಅಂತಿಮ ಹಂತದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವೀಯಾಗಿ ಪೂರ್ಣಗೊಳಿಸಿದೆ.
ಭಾರತೀಯ ವಾಯುಪಡೆ (IAF), ಮಿಲಿಟರಿ ಏರ್‌ವರ್ತಿನೆಸ್ ಅಂಡ್ ಸರ್ಟಿಫಿಕೇಷನ್ (CEMILAC), ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ADRDE) ಸಂಸ್ಥೆಗಳು ಪರೀಕ್ಷೆಗೆ ಸಹಕಾರ ನೀಡಿವೆ. ಪರೀಕ್ಷೆ ಯಶಸ್ವಿಯಾಗಿರುವ ವಿಡಿಯೋವನ್ನು ಇಸ್ರೋ ಟ್ವಿಟರ್ನಲ್ಲಿ ಶೇರ್ ಮಾಡಿದೆ.
ಪ್ರಯೋಗ ಯಶಸ್ವಿಯಾಗಿರುವ ಕುರಿತು ಇಸ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ. 'ಜೂನ್ 23ರಂದು ಮುಂಜಾನೆ ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಡಿಆರ್‌ಡಿಒ ಜೊತೆಗೂಡಿ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಸ್ವಾಯತ್ತ ಲ್ಯಾಂಡಿಂಗ್ ಮಿಷನ್ ಅನ್ನು ಯಶಸ್ವಿಯಾಗಿ ನಡೆಸಲಾಗಿದೆ' ಎಂದು ಇಸ್ರೋ ಟ್ವೀಟ್‌ನಲ್ಲಿ ಹೇಳಿದೆ. ಇದರ ಚಿತ್ರಗಳನ್ನು ಸಹ ಬಿಡುಗಡೆ ಮಾಡಿದೆ.
ರಾಕೆಟ್‌ಗಳ ಉಡಾವಣೆ ಬಳಿಕ ಪುನರ್ ಬಳಕೆ ಮಾಡಬಹುದಾದ ಉಡಾವಣಾ ವಾಹನ ಭೂಮಿಗೆ ಮರು ಪ್ರವೇಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚಿನ ವೇಗದಲ್ಲಿ ಮಾನವ ರಹಿತವಾಗಿ ಸಾಗುವ ಇದು ನಿಖರವಾಗಿ ಬಾಹ್ಯಾಕಾಶದಿಂದ ವಾಪಸ್ ಆಗಿ ಸುರಕ್ಷಿತವಾಗಿ ಲ್ಯಾಂಡ್ ಆಗುವಂತಹ ಸಾಮರ್ಥ್ಯವನ್ನು ಪಡೆದಿರುವುದು ವಿಶೇಷವಾಗಿದೆ.
ಇಸ್ರೋ 2019ರಲ್ಲಿ ಆರ್‌ಎಲ್‌ವಿ-ಎಲ್‌ಇಎಕ್ಸ್ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಗಾಗಿ ದೇಶಿಯ ನ್ಯಾವಿಗೇಷನ್ ವ್ಯವಸ್ಥೆ, ಇನ್‌ಸ್ಟ್ರುಮೆಂಟೇಷನ್, ಸೆನ್ಸಾರ್ ಇತ್ಯಾದಿಗಳನ್ನು ಬಳಕೆ ಮಾಡಲಾಗಿದೆ. ಈ ಯೋಜನೆಗೆ ಭಾರತೀಯ ವಾಯುಪಡೆ, ಎಡಿಇ, ಎಡಿಆರ್‌ಡಿಇ ಸೇರಿದಂತೆ ವಿವಿಧ ಸಂಸ್ಥೆಗಳು ಸಹ ಕೊಡುಗೆ ನೀಡಿವೆ. ಡಾ. ಉನ್ನಿಕೃಷ್ಣನ್ ನಾಯರ್, ಎಟಿಎಸ್ ಪಿ ಪ್ರೋಗಾಂ ನಿರ್ದೇಶಕ ಶ್ಯಾಮ್ ಮೋಹನ್ ಎನ್. ಈ ತಂಡಗಳಿಗೆ ಮಾರ್ಗದರ್ಶನವನ್ನು ನೀಡಿದ್ದಾರೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications