ಹಿರಿಯೂರು ಪೊಲೀಸರ ಕಾರ್ಯಾಚರಣೆ: ಅಂತರಾಜ್ಯ ಕಳ್ಳರ ಬಂಧನ

ಚಿತ್ರದುರ್ಗ, ಮಾರ್ಚ್ 01: ಮನೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ರಾಜ್ಯ ಮತ್ತು ಅಂತರಾಜ್ಯ ಮೂವರು ಕಳ್ಳರನ್ನು ಬಂಧಿಸುವಲ್ಲಿ ಹಿರಿಯೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ವರದಿಯಾಗಿದ್ದ ಕಲಂ 457/380 ಐ.ಪಿ.ಸಿ ಮತ್ತು ರೆ.ವಿ.41 (ಡಿ) ಸಿ.ಆರ್.ಪಿ.ಸಿ. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ೧) ಜಗನ್ನಾಥ ಅಲಿಯಾಸ್ ಜಗ್ಗ (27) ವರ್ಷ ಪಾವಗಡ ತಾಲೂಕು, ೨) ರಮೇಶ ಅಲಿಯಾಸ್ ಬಿಲ್ಲಾ (32) ಬಾಗೆಪಲ್ಲಿ ತಾಲೂಕು ೩) ಉಮಾಶಂಕರ ಅಲಿಯಸ್ ಶಂಕರ (31) ಬಾಗೆಪಲ್ಲಿ ತಾಲ್ಲೂಕು ಈ ಮೂವರನ್ನು ಬಂದಿಧಿಸಲಾಗಿದೆ.

ಆರೋಪಿಗಳು ಚಿತ್ರದುರ್ಗ ನಗರ ಮಧುಗಿರಿ, ಕೋಲಾರ, ಶಿರಾ ನಗರ ಮತ್ತಿತರ ಕಡೆಗಳಲ್ಲಿ ಹಾಗೂ ಈ ಹಿಂದೆ ತಿರುಪತಿ, ಹೈದರಾಬಾದ್, ಅನಂತಪುರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮನೆಗಳ್ಳತನ ಮಾಡಿರುವ ಬಗ್ಗೆ ಆರೋಪಿಗಳು ‌ಸ್ವ ಹೇಳಿಕೆಯನ್ನು ನೀಡಿದ್ದಾರೆ.

Hiriyuru Police Arrested Interstate Thieves

ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ 01, ‌ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಚಿತ್ರದುರ್ಗ ನಗರ ಪೋಲಿಸ್ ಠಾಣೆಯಲ್ಲಿ 01 ಪ್ರಕರಣ, ಮಧುಗಿರಿ ಪೋಲಿಸ್ ಠಾಣೆಯಲ್ಲಿ 02 ಪ್ರಕರಣ, ಕೋಲಾರ ಪೋಲಿಸ್ ಠಾಣೆಯಲ್ಲಿ 01 ಪ್ರಕರಣ, ಶಿರಾ ಪೋಲಿಸ್ ಠಾಣೆಯಲ್ಲಿ 01 ಪ್ರಕರಣದಲ್ಲಿ ಭಾಗಿಯಾಗಿದ್ದು ಸದರಿ ಆರೋಪಿಗಳಿಂದ ಸುಮಾರು 10 ಲಕ್ಷ ಮೌಲ್ಯದ ಸುಮಾರು 230 ಗ್ರಾಂ ಚಿನ್ನ ಮತ್ತು 01 ಕೆಜಿ ಬೆಳ್ಳಿ, ಒಂದು ಕೃಷ್ಣನ ವಿಗ್ರಹ, ಹಾಗೂ ಒಂದು ಟಿವಿಯನ್ನು ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಜಿ.ರಾಧಿಕಾ, ಪಿಎಸ್ಐ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಂ.ಬಿ. ನಂದಗಾವಿ, ಹಾಗೂ ಹಿರಿಯೂರು ಉಪವಿಭಾಗದ ಪೊಲೀಸ್ ಉಪಧೀಕ್ಷಕರಾದ ರಮೇಶ್ ಮಾರ್ಗದರ್ಶನದಲ್ಲಿ ಹಿರಿಯೂರು ಸಿಪಿಐ ಚನ್ನೇಗೌಡ ನೇತೃತ್ವದಲ್ಲಿ ಹಿರಿಯೂರು ಗ್ರಾಮಾಂತರ ಠಾಣೆಯ ಪಿಎಸ್ಐ ಪರಮೇಶ ಮತ್ತು ಸಿಬ್ಬಂದಿಯವರನ್ನು ಒಳಗೊಂಡ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Hiriyuru Police Arrested Interstate Thieves

ಕಾರ್ಯಾಚರಣೆಯ ಸದರಿ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಚಿತ್ರದುರ್ಗ ಪೋಲಿಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+