ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಲವೆಡೆ ಭಾರೀ ಮಳೆ, ಎಲ್ಲೆಲ್ಲಿ ಎಷ್ಟು?, ಇಲ್ಲಿವೆ ಅಂಕಿಅಂಶ
ಚಿತ್ರದುರ್ಗ, ನವೆಂಬರ್, 07: ಬರದ ಬೇಗೆಯಿಂದ ಕಂಗಾಲಾಗಿದ್ದ ದುರ್ಗದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಅಲ್ಲಿಲ್ಲಿ ಸಣ್ಣಪುಟ್ಟ ಗುಂಡಿಗಳಲ್ಲಿ ನೀರು ತುಂಬಿದೆ. ಇದರಿಂದ ರೈತರ ಮೊಗದಲಿ ಕೊಂಚ ಮಂದಹಾಸ ಮೂಡಿಸಿದೆ.
ಈಗಾಗಲೇ ಬಹುತೇಕ ಬೆಳೆಗಳು ಕೊಯ್ಲಿಯಿಂದ ಮುಗಿದಿವೆ. ಒಂದೆರಡು ದಿನಗಳಲ್ಲಿ ಮತ್ತೊಷ್ಟು ಮಳೆ ಬಂದರೆ ಎರೆ (ಕಪ್ಪು ) ನೆಲದಲ್ಲಿ ಕಡಲೆ ಬಿತ್ತನೆಗೆ ಸಿದ್ದತೆ ನಡೆಯಲಿದೆ.
ಹಿರಿಯೂರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು,ಇಕ್ಕನೂರಿನಲಗಲಿ ಅತೀ ಹೆಚ್ಚು 88.8 ಮಿಲಿ ಮೀಟರ್ ಮಳೆಯಾಗಿದೆ. ಈಶ್ವರಗೆಯಲ್ಲಿ 66.2 ಮಿ.ಮೀ, ಹಿರಿಯೂರು-38.6 ಮಿ.ಮೀ, ಬಬ್ಬೂರು -30.8 ಮಿ.ಮೀ, ಈಶ್ವರಗೆರೆ-66.2 ಮಿ.ಮೀ, ಸೂಗೂರು-64.3 ಮಿ.ಮೀ ಹಾಗೂ ಜವನಗೊಂಡನಹಳ್ಳಿಯಲ್ಲಿ ಸುಸ್ಥಿತಿಯಲ್ಲಿಲ್ಲ ಎಂದು ವರದಿಯಾಗಿದೆ.

ಹೊಳಲ್ಕೆರೆಯಲ್ಲಿ 11.13 ಮಿ.ಮೀ, ರಾಮಗಿರಿ 4.2, ಚಿಕ್ಕಜಾಜೂರು-4.2, ಬಿ.ದುರ್ಗ 11.0 ಹಾಗೂ ಹೊರಕೆದೇವಪುರ 21.4 ಹಾಗೂ ತಾಳ್ಯದಲ್ಲಿ 12.4 ಮಿಲಿ ಮೀಟರ್ ಮಳೆಯಾಗಿದೆ. ಇನ್ನು ಹೊಸದುರ್ಗ 44.6 ಮಿ.ಮೀ, ಬಾಗೂರು 10.5 ಮಿಲಿ ಮೀಟರ್, ಮತ್ತೋಡು 20.4 ಮಿಲಿ ಮೀಟರ್, ಶ್ರೀರಾಂಪುರ 45.0 ಮಿಲಿ ಮೀಟರ್, ಮಾಡದಕೆರೆ 34.2 ಮಿಲಿ ಮೀಟರ್ ಮಳೆಯಾಗಿದೆ ಎಂದು ತಿಳಿದುಬಂದಿದೆ.
ಚಳ್ಳಕೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಚಳ್ಳಕೆರೆ 29.6 ಮಿಲಿ ಮೀಟರ್, ಪರುಶುರಾಮಪುರ 2.2, ನಾಯಕನಹಟ್ಟಿ 23. 2 , ತಳುಕು 28.4, ದೇವರ ಮರಿಕುಂಟೆ 29.3 ಮಿಲಿ ಮೀಟರ್ ಮಳೆಯಾಗಿದೆ. ತಾಲೂಕಿನಲ್ಲಿ 22.54 ಮಿಲಿ ಮೀಟರ್ ಸರಾಸರಿ ಮಳೆ ಸುರಿದಿದೆ ಎಂದು ತಿಳಿದುಬಂದಿದೆ.












Click it and Unblock the Notifications