ಚಿತ್ರದುರ್ಗ; ಪಂಚಾಯಿತಿ ಚುನಾವಣೆ 2ನೇ ಹಂತದ ಮತದಾನ ಆರಂಭ
ಚಿತ್ರದುರ್ಗ, ಡಿಸೆಂಬರ್ 27: ಚಿತ್ರದುರ್ಗ ಜಿಲ್ಲೆಯಲ್ಲಿ 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ಆರಂಭವಾಗಿದೆ. ಸಂಜೆ 5 ಗಂಟೆಯ ತನಕ ಜನರು ಮತದಾನ ಮಾಡಲು ಅವಕಾಶವಿದೆ. ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಕೋವಿಡ್ ಸೋಂಕಿತರು ಸಹ ಮತದಾನ ಮಾಡಬಹುದು.
ಭಾನುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಮತಗಟ್ಟೆಯಲ್ಲಿ ಮತಪೆಟ್ಟಿಗೆಗೆ ಅಭ್ಯರ್ಥಿಗಳು ಪೂಜೆ ಸಲ್ಲಿಸಿದರು. ಜನರು ಮುಂಜಾನೆಯೇ ಸರತಿ ಸಾಲಿನಲ್ಲಿ ನಿಂತು ಮತದಾನವನ್ನು ಮಾಡುತ್ತಿದ್ದಾರೆ. ಮತದಾನದ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿದೆ.
ಪಂಚಾಯಿತಿ ಚುನಾವಣೆ; ಮೋದಿ ಫೋಟೋ, ಬಿಜೆಪಿ ಚಿಹ್ನೆ ಬಳಕೆ
ಚಿತ್ರದುರ್ಗ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಎರಡನೇ ಹಂತದಲ್ಲಿ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ಚುನಾವಣೆ ನಡೆಯುತ್ತಿದೆ. ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶ ನೀಡಲಾಗಿದೆ.
Gram Panchayat polls 2020 Voting Live: ಪಂಚಾಯಿತಿ ಫೈಟ್; 2ನೇ ಹಂತದ ಮತದಾನ
ಹಿರಿಯೂರು ತಾಲೂಕಿನ 499, ಚಳ್ಳಕೆರೆ ತಾಲೂಕಿನ 675 ಮತ್ತು ಮೊಳಕಾಲ್ಮೂರು ತಾಲೂಕಿನ 291 ಸ್ಥಾನಗಳಿಗೆ ಭಾನುವಾರ ಮತದಾನ ನಡೆಯುತ್ತಿದೆ. ಸರತಿ ಸಾಲಿನಲ್ಲಿ ನಿಂತು ಜನರು ಮತದಾನ ಮಾಡುತ್ತಿದ್ದಾರೆ. ಕೋವಿಡ್ ನಿಯಮಗಳನ್ನು ಮತದಾನದ ವೇಳೆ ಪಾಲನೆ ಮಾಡಲಾಗುತ್ತಿದೆ.
ಗ್ರಾ. ಪಂ ಚುನಾವಣೆ; ವೈರಲ್ ಆದ ಗಂಗಮ್ಮ ನೀಡಿದ ಭರವಸೆಗಳು!