ವೈದ್ಯರ ನಿರ್ಲಕ್ಷ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಚಿತ್ರದುರ್ಗ, ಜನವರಿ 09: ವೈದ್ಯ ಹಾಗೂ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷದಿಂದಾಗಿ ಚಿತ್ರದುರ್ಗದ ಗ್ರಾಮೀಣ ಮಹಿಳೆಯೊಬ್ಬರು ಹಳ್ಳಿಯ ಜನನಿಬಿಡ ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ.

ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೆರಿಗೆನೋವಿನಿಂದ ಮಹಿಳೆ ಗಂಗಮಾಲಮ್ಮ ಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪತಿಯೊಂದಿಗೆ ಬಂದಿದ್ದಾರೆ, ಆದರೆ ವೈದ್ಯರು ಮತ್ತು ಸಿಬ್ಬಂಬಿ ಈಗ ಊಟದ ಸಮಯ ಆಮೇಲೆ ಬರುವಂತೆ ಹೇಳಿದ್ದಾರೆ.

ಆಕೆ ಮರಳಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ರಸ್ತೆಯಲ್ಲಿಯೇ ಮಗು ಜನನವಾಗಿದೆ. ಸ್ಥಳೀಯ ಮಹಿಳೆಯರು ಒಟ್ಟುಗೂಡಿ ರಸ್ತೆಯಲ್ಲಿಯೇ ಬಟ್ಟೆಗಳನ್ನು ಅಡ್ಡ ಇಟ್ಟು ಹೆರಿಗೆ ಮಾಡಿಸಿದ್ದಾರೆ. ಗಂಗಮಾಲಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Doctor out on lunch, woman delivers baby on road in Chitradurga

ನಾವು ಬೆಳಿಗ್ಗೆ 11 ಗಂಟೆಗೆ ಆರೋಗ್ಯ ಕೇಂದ್ರಕ್ಕೆ ಹೋಗಿದ್ದೆವು, ನಮ್ಮನ್ನು ಮಧ್ಯಾಹ್ನದ ವರೆಗೆ ಕಾಯಿಸಿದ ನಂತರ ಕರ್ತವ್ಯದಲ್ಲಿದ್ದ ವೈದ್ಯ ಮತ್ತು ಶುಶ್ರೂಶಕಿ ಇದು ಭೋಜನದ ಸಮಯ ಈಗ ಮನೆಗೆ ಹೋಗಿ ಆ ನಂತರ ಬನ್ನಿ ಎಂದು ಹೇಳಿ ಕಳುಹಿಸಿದರು ಎಂದು ಗಂಗಮಾಲಮ್ಮ ಪತಿ ಚೌಡಪ್ಪ ಹೇಳಿದ್ದಾರೆ.

ಘಟನೆ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ನೀರಜ್ ಪಟೇಲ್ ಅವರು ವಿಚಾರಣೆಗೆ ಆದೇಶ ನೀಡಿದ್ದಾರೆ. ಘಟನೆಯಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿಯ ಹಾಗೂ ವೈದ್ಯರ ನಿರ್ಲಕ್ಷತನ ಕಂಡುಬಂದಲ್ಲಿ ಅವಶ್ಯಕ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+