ಚಿತ್ರದುರ್ಗ: ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
ಚಿತ್ರದುರ್ಗ, ಜನವರಿ 13: ಚಿತ್ರದುರ್ಗದಲ್ಲಿ 10 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಕೃತ್ಯ ಎಸಗಿದ ಯುವಕನಿಗೆ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಚಿತ್ರದುರ್ಗ ನಗರದ ಬಡಾಮಕಾನ್ ಬಳಿಯ ನಿವಾಸಿ ಶೋಯೆಬ್ (22) ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಈತನು ತರಕಾರಿ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಮಾಡಿಕೊಂಡಿದ್ದನು.
ಜನವರಿ 10, 2019ರಂದು ಚಿತ್ರದುರ್ಗ ನಗರ ವಾಸಿಯಾದ 10 ವರ್ಷದ ಬಾಲಕಿಗೆ ಹುಷಾರಿಲ್ಲದಿದ್ದರಿಂದ ಅವಳ ತಾಯಿ ಮನೆಯಲ್ಲಿ ಬಿಟ್ಟು, ಮಲಗಿಸಿ ಕೆಲಸಕ್ಕೆ ಹೋಗಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬಂದಾಗ ಮಗಳು ಸುಸ್ತಾಗಿದ್ದಳು. ಮಗಳಿಗೆ ಜ್ವರ ಬಂದಿರಬಹುದೆಂದು ಮಾತ್ರೆ ಕೊಟ್ಟು ಮಲಗಿಸಿದ್ದಾರೆ.
ನಂತರದ ದಿನವೂ ಕೂಡ ಬಾಲಕಿ ಮಲಗಿರುವುದನ್ನು ಕೇಳಿದ್ದಕ್ಕೆ, ನಾನು ಒಬ್ಬಳೇ ಮನೆಯಲ್ಲಿ ಮಲಗಿದ್ದಾಗ ಕೆಳಗಿನ ಮನೆಯ ಶೋಯೆಬ್ ಮನೆಗೆ ಬಂದು ನನ್ನನ್ನು ಮಾತನಾಡಿಸಿ ನನಗೆ ಬಲಾತ್ಕಾರ ಮಾಡಿದ್ದಾನೆಂದು ತಿಳಿಸಿದ್ದಾಳೆ. ಬಳಿಕ ಈ ವಿಚಾರವನ್ನು ನಿನ್ನ ತಾಯಿ ಮತ್ತು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಹೆದರಿಸಿದ್ದನು ಎಂದು ಬಾಲಕಿ ಹೇಳಿದ್ದಳು.

ಈ ಬಗ್ಗೆ ಆರೋಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಅಪ್ರಾಪ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂ: 06/2019 ಕಲಂ: 376, 506 ಐಪಿಸಿ ಮತ್ತು 4 ಮತ್ತು 6ರಡಿಯಲ್ಲಿ ಪೋಕ್ಸೋ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.
ಸದರಿ ಪ್ರಕರಣದಲ್ಲಿ ಪ್ರಕರಣದ ತನಿಖಾಧಿಕಾರಿಯಾದ ಈ ಹಿಂದೆ ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಪೈಜುಲ್ಲಾ ತನಿಖೆಯನ್ನು ಪೂರೈಸಿ ಆರೋಪಿ ಶೋಯೆಬ್ ವಿರುದ್ಧ ಚಿತ್ರದುರ್ಗ ಘನ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವಿವರವಾದ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲಕಣಿ, ಆರೋಪಿಯ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ದೋಷಾರೋಪಣಾ ಪಟ್ಟಿಯಲ್ಲಿ ನಮೂದಿಸಿರುವ ಸೆಕ್ಷನ್‍ಗಳ ಅನ್ವಯ ಈ ಕೆಳಕಂಡಂತೆ ಶಿಕ್ಷೆಯನ್ನು ವಿಧಿಸಿದ್ದಾರೆ.

ಸೆಕ್ಷನ್, ಶಿಕ್ಷೆಯ ವಿವರ
1. ಕಲಂ: 376(ಎಬಿ) ಐಪಿಸಿ ಪ್ರಕಾರ ಕಠಿಣ ಕಾರಾಗೃಹ ಜೀವಿತಾವಧಿ ಶಿಕ್ಷೆ ಮತ್ತು 1,00,000 ರೂ. ದಂಡ
2. ಕಲಂ: 376(2)(ಎನ್) ಐಪಿಸಿ ಪ್ರಕಾರ 10 ವರ್ಷ ಜೈಲುವಾಸ ಮತ್ತು 25,000 ರೂ. ದಂಡ
3. ಕಲಂ: 506 ಐಪಿಸಿ ಪ್ರಕಾರ 1 ವರ್ಷ ಜೈಲು ವಾಸ
4. ಕಲಂ: 4 ಪೋಕ್ಸೋ ಆಕ್ಟ್ ಪ್ರಕಾರ 7 ವರ್ಷ ಜೈಲು ಮತ್ತು 25,000 ರೂ. ದಂಡ ಅಥವಾ 1 ವರ್ಷ ಜೈಲು
5 ಕಲಂ: 6 ಪೋಕ್ಸೋ ಆಕ್ಟ್ ಪ್ರಕಾರ 10 ವರ್ಷ ಜೈಲು ಮತ್ತು 5,000 ರೂ. ದಂಡ ಅಥವಾ 1 ವರ್ಷ ಜೈಲು
ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರಾದ ಜಯರಾಮ್ ವಾದ ಮಂಡಿಸಿದ್ದರು.
ಅಪರಾಧಿಯ ಹಿನ್ನೆಲೆ:
ಶೋಯೆಬ್ (22 ವರ್ಷ) ತಂದೆ ಮಹಮದ್ ಜಾಫರ್. ತರಕಾರಿ ಮಾರ್ಕೆಟ್‍ನಲ್ಲಿ ಹಮಾಲಿ ಕೆಲಸ ಮಾಡಿಕೊಂಡಿದ್ದು, ಚಿತ್ರದುರ್ಗ ನಗರದ ಬಡಾಮಕಾನ್ ಬಳಿ ವಾಸವಾಗಿದ್ದನು.
Recommended Video
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications