ಹೊಸದುರ್ಗದ ಕುಂಚಿಟಿಗ ಮಠದಲ್ಲಿ ಕರಡಿ ಪ್ರತ್ಯಕ್ಷ-ಸ್ವಾಮೀಜಿ ಹೇಳಿದ್ದೇನು ಗೊತ್ತಾ?
ಚಿತ್ರದುರ್ಗ, ಅಕ್ಟೋಬರ್, 18: ಇಷ್ಟು ದಿನ ರಾಜ್ಯದ ಹಲವು ಭಾಗಗಳಲ್ಲಿ ಚಿರತೆಗಳ ಕಾಟ ಹೆಚ್ಚಾಗಿತ್ತು. ಇದೀಗ ಚಿತ್ತದುರ್ಗ ಜಿಲ್ಲೆಯ ಹೊಸದುರ್ಗದ ಕುಂಚಿಟಿಗ ಮಠದ ಆವರಣದ ಬಳಿ ಕರಡಿ ಪ್ರತ್ಯೇಕ್ಷಗೊಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಹಾಗಾದರೆ ಕರಡಿ ಕಂಡಿದ್ದು ಎಷ್ಟು ಗಂಟೆಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಗುರುವಾರ (ಅಕ್ಟೋಬರ್ 17) ರಾತ್ರಿ 8 ಗಂಟೆಗೆ ಕರಡಿ ಪ್ರತ್ಯಕ್ಷವಾಗಿದ್ದು, ಹಲವು ದಿನಗಳಿಂದ ಕರಡಿ ಹೀಗೆ ಓಡಾಟ ಮಾಡುತ್ತಿದ್ದು, ಸ್ಥಳೀಯರ ನಿದ್ದೆಗೆಡಿಸಿದೆ. ಅರಣ್ಯ ಇಲಾಖೆಯವರು ಬೋನ್ ಇಟ್ಟಾಗ ಜಾಣ ಕರಡಿಗಳು ಬೀಳುತ್ತಿಲ್ಲ. ಇದರಿಂದ ಮಠಕ್ಕೆ ಬರುವ ಭಕ್ತರು, ಸುತ್ತಮುತ್ತಲಿನ ನಿವಾಸಿಗಳು, ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಇಲ್ಲಿಗೆ ವಾಯು ವಿಹಾರಕ್ಕಾಗಿ ಬರುವವರಿಗೂ ಪೀಕಲಾಟ ಶುರುವಾಗಿದೆ.

ಇದೀಗ ಮಠದಲ್ಲಿ ಕರಡಿ ಓಡಾಟ ನಡೆಸಿದ್ದು, ಕರಡಿಗಳು ಮಠದ ಸುತ್ತಲೂ ಓಡಾಡುವ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇನ್ನೂ ಮಠಕ್ಕೆ ಹೋಗುವ ಸಿಸಿ ರಸ್ತೆ ಮೇಲೆ ಕರಡಿ ನಡೆದು ಬಂದಿದೆ. ಏಕಾಏಕಿ ಕರಡಿ ರಸ್ತೆಗೆ ಬಂದಿದ್ದನ್ನು ಕಂಡು ಸ್ಥಳದಲ್ಲಿ ವಾಯುವಿಹಾರ ಮಾಡುತ್ತಿದ್ದವರು ಎದ್ನೋ.. ಬಿದ್ನೋ ಎನ್ನುವ ರೀತಿಯಲ್ಲಿ ಓಡಿ ಹೋಗಿದ್ದಾರೆ.
ಮಠದ ಆವರಣ ಹಾಗೂ ಸುತ್ತಮುತ್ತಲಿನ ವಾತಾವರಣ ಪ್ರಶಾಂತವಾಗಿರುವುದರಿಂದ ಸಾಕಷ್ಟು ಜನ ಬೆಳಗ್ಗೆ ಮತ್ತು ಸಂಜೆ ಇಲ್ಲಿ ವಾಯು ವಿಹಾರಕ್ಕೆ ಬರುತ್ತಾರೆ. ಅನೇಕ ಸಲ ತಾಯಂದಿರು, ಮಕ್ಕಳನ್ನು ಕರೆತರುತ್ತಾರೆ. ವಯಸ್ಕರು ವಾಕಿಂಗ್ ಮಾಡುತ್ತಿದ್ದು, ಕರಡಿ ಸೆರೆಗೆ ಅರಣ್ಯ ಇಲಾಖೆ ಮುಂದಾಗಬೇಕಿದೆ.
ಮಠದಲ್ಲಿ ಪದೇ ಪದೇ ಕರಿಡಿಗಳು ಪ್ರತ್ಯಕ್ಷ ಆಗುತ್ತಿವೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕರಡಿ ಹಿಡಿಯುವಲ್ಲಿ ನಿರ್ಲಕ್ಷ್ಯ ತೋರುತ್ತಾರೆ. ಕರಡಿಗಳು ಸಾರ್ವಜನಿಕರ ಮೇಲೆ ದಾಳಿ ನಡೆಸಿದರೆ, ಹೊಣೆ ಯಾರು ಎಂದು ಮಠದ ಶ್ರೀ ಶಾಂತವೀರ ಶ್ರೀಗಳು ಪ್ರಶ್ನೆ ಮಾಡಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಲಾರಿ ಪಲ್ಟಿ: ಇಷ್ಟು ದಿನ ತಗ್ಗಿದ್ದ ಅಪಘಾತ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಇನ್ನು ಇದೀಗ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾದ ಘಟನೆ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ಟೋಬರ್ 05ರಂದು ನಡೆದಿತ್ತು.
ಕೇರಳದಿಂದ ಪ್ಲೇವುಡ್‌ಗಳನ್ನು ಹೊತ್ತು ಬರುತ್ತಿದ್ದ ಲಾರಿ ಇದಾಗಿದ್ದು, ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಲಾರಿ ಸಂಪೂರ್ಣ ಜಖಂ ಆಗಿದ್ದು, ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಲಾರಿ ಪಲ್ಟಿ: ಇನ್ನು ಇಂದು ಬೆಳಗ್ಗೆಯಷ್ಟೇ ಇದೇ ಸ್ಥಳದಲ್ಲೇ ರಬ್ಬರ್ ತುಂಬಿಕೊಂಡು ಬಂದಿದ್ದ ಲಾರಿ ಪಲ್ಟಿಯಾಗಿ ಚಾಲಕ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿತ್ತು. ತಮಿಳುನಾಡಿನಿಂದ ರಬ್ಬರ್ ತುಂಬಿಕೊಂಡು ಬರುತ್ತಿದ್ದ ಲಾರಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿಯಂತ್ರಣ ತಪ್ಪಿ ಉರುಳಿರುವ ಘಟನೆ ನಡೆದಿದೆ.
ಇನ್ನು ಲಾರಿಯಡಿಯಲ್ಲಿ ಸಿಲುಕಿದ್ದ ಚಾಲಕನನ್ನು ಹೊರಕ್ಕೆ ತಂದಿದ್ದು, ಚಾಲಕನಿಗೆ ಗಂಭೀರ ಗಾಯಗಳಾಗಿ ಚಾಮರಾಜನಗರ ಆಸ್ಪತ್ರೆಗೆ ರವಾನಿಸಿದ್ದಾರೆ. ಬಂಡೀಪುರದಿಂದ ಮೇಲುಕಾಮನಹಳ್ಳಿ ಕಡೆಗೆ ಬರುವ ಎಸ್ ಆಕಾರದ ತಿರುವಿದ್ದು, ಭಾರಿ ಲಾರಿಗಳು ನಿಯಂತ್ರಣ ತಪ್ಪಿ ಆಗಾಗ್ಗೆ ಅವಘಡಗಳು ಉಂಟಾಗುತ್ತಿರುತ್ತವೆ.












Click it and Unblock the Notifications