Get Updates
Get notified of breaking news, exclusive insights, and must-see stories!

"ಇದು ಮನುಷ್ಯತ್ವ ಇರುವ ಸರ್ಕಾರವಾ?"; ವೈಎಸ್ ವಿ ದತ್ತ

ಚಿಕ್ಕಮಗಳೂರು, ಅಕ್ಟೋಬರ್ 2: ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂಥದ್ದು. ಆರೋಪಿಗಳಿಗೆ ಶಿಕ್ಷೆ ತಪ್ಪಿಸಲು ರಾತ್ರೋರಾತ್ರಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಮಾಜಿ ಶಾಸಕ ವೈಎಸ್ ‍ವಿ ದತ್ತ ಪ್ರತಿಕ್ರಿಯೆ ನೀಡಿದ್ದಾರೆ.

ಕಡೂರಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ದಲಿತ ಕೇರಿಯಲ್ಲಿ ಸಹಪಂಕ್ತಿ ಭೋಜನ ಮಾಡಿದ ಬಳಿಕ ಮಾತನಾಡಿದ ಅವರು, ಆರೋಪಿಗಳಿಗೆ ಶಿಕ್ಷೆ ತಪ್ಪಿಸಲು ಸರ್ಕಾರವೇ ಬೆಂಗಾವಲಾಗಿ ನಿಂತು ಅಂತ್ಯಸಂಸ್ಕಾರವನ್ನು ತರಾತುರಿಯಲ್ಲಿ ಮಾಡಿದ್ದು ಮೃಗೀಯ ವರ್ತನೆ. ಇದು ಮನುಷ್ಯತ್ವ ಇರುವ ಸರ್ಕಾರವಾ ಎಂದು ಪ್ರಶ್ನಿಸಿದರು.

ರಾಮ ರಾಜ್ಯ ರಾಮ ರಾಜ್ಯ ಅಂತಾ ಹೇಳ್ತಾರೆ. ರಾಮನಿಗೆ ದೇವಸ್ಥಾನ ಕಟ್ಟಿಸಿ ಸಂಭ್ರಮಿಸ್ತಾರೆ. ರಾಮ ಮಂದಿರ ವಿಚಾರವಾಗಿ ನ್ಯಾಯಾಲಯ ನಿನ್ನೆ ತೀರ್ಪು ಕೊಟ್ಟಾಗ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಆದರೆ ಒಬ್ಬಳು ದಲಿತ ಹೆಣ್ಣು ಮಗಳನ್ನು ರಾತ್ರೋರಾತ್ರಿ ಅತ್ಯಾಚಾರ ಮಾಡಿ ಕೊಂದಿದ್ದರು. ಕುಟುಂಬಸ್ಥರಿಗೆ ತಿಳಿಸದೇ ಸರ್ಕಾರವೇ ಅಂತ್ಯ ಸಂಸ್ಕಾರ ಮಾಡಿದೆ. ಇದು ಮನುಷ್ಯತ್ವ ಇರುವ ಸರ್ಕಾರವೇ ಅಂದು ಆಕ್ರೋಶ ವ್ಯಕ್ತಪಡಿಸಿದರು.

Chikkamagaluru: YSV Datta Condemns Hatras Gang Rape Incident At UP

ನಮ್ಮ ಯುವಕರು ತಪ್ಪು ಕಲ್ಪನೆಯಲ್ಲಿ ರಾಮ, ಹಿಂದೂತ್ವ, ಅಯೋಧ್ಯೆ ಎಂದರೆ ದೇಶ ಪ್ರಪಂಚ ನೆಟ್ಟಗಾಗುತ್ತೆ ಅಂದುಕೊಂಡಿದ್ದಾರೆ. ಇದರಿಂದ ದೇಶಕ್ಕೆ ಪ್ರಯೋಜನವಿಲ್ಲ. ಬರೀ ರಾಜಕಾರಣಿಗಳು ಲಾಭ ಪಡೆದುಕೊಳ್ಳುತ್ತಾರೆ. ಇದು ಹೀಗೇ ಮುಂದುವರೆದರೆ ನಮ್ಮ ಅಕ್ಕತಂಗಿಯರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+