ಭರ್ಜರಿ ಡ್ಯಾನ್ಸ್ ಮಾಡಿದ ತರೀಕೆರೆ ಶಾಸಕರ ವಿಡಿಯೋ ವೈರಲ್
Recommended Video
ಲಗಾ ಲಗಾ ಲಗಾಯ್ಸು ಹಾಡಿಗೆ ಕುಣಿದು ಕುಪ್ಪಳಿಸಿದ ಶಾಸಕ | Oneindia Kannada
ಚಿಕ್ಕಮಗಳೂರು, ಜನವರಿ 14: ಚಿಕ್ಕಮಗಳೂರಿನ ಸೊಲ್ಲಾಪುರದ ಗುರು ಸಿದ್ಧರಾಮ ಶಿವಯೋಗಿ ಜಯಂತಿ ಮಹೋತ್ಸವದ ಮೆರವಣಿಗೆಯಲ್ಲಿ ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಅವರು ಕುಣಿದು ಕುಪ್ಪಳಿಸಿದ್ದಾರೆ.
ಶಿವರಾಜ್ ಕುಮಾರ್ ಅಭಿನಯದ ಗಡಿಬಿಡಿ ಕೃಷ್ಣ ಚಿತ್ರದ "ಟಕಾಟಕ ಟಕಾಯ್ಸು.. ಲಗಾಲಗಾ ಲಗಾಯ್ಸು..' ಹಾಡಿಗೆ ಶಾಸಕರು ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಚಿಕ್ಕಮಗಳೂರಿನ ಸೊಲ್ಲಾಪುರದ ಗುರು ಸಿದ್ಧರಾಮ ಶಿವಯೋಗಿ ಜಯಂತಿ ಮಹೋತ್ಸವದಲ್ಲಿ ಡಿಜೆ ಹಾಡಿಗೆ ಶಾಸಕರು ಕುಣಿದು, ಸ್ಥಳೀಯ ಯುವಕರಿಗೆ ಸಾಥ್ ನೀಡಿದ್ದಾರೆ.

ಅಜ್ಜಂಪುರ ತಾಲೂಕಿನ ತಮಟದಹಳ್ಳಿ ಗೇಟ್ ಬಳಿ ಡ್ಯಾನ್ಸ್ ಮಾಡಿದ ತರೀಕೆರೆ ಶಾಸಕ ಡಿ.ಎಸ್.ಸುರೇಶ್ ರ ಜೊತೆ ಯುವಕರು ಕುಣಿದು ಕುಪ್ಪಳಿಸಿದ್ದಾರೆ. ತಮಟಹಳ್ಳಿ ಗೇಟ್ ನಿಂದ ಸೊಲ್ಲಾಪುರದವರೆಗೆ ಮೆರವಣಿಗೆಯಲ್ಲಿ ಡಾನ್ಸ್ ಮಾಡಿದ್ದಾರೆ.
ಇಂದು ಈ ಗುರು ಸಿದ್ಧರಾಮ ಶಿವಯೋಗಿ ಜಯಂತಿಯಲ್ಲಿ ಮುಖ್ಯಂಮತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.












Click it and Unblock the Notifications