ಸತ್ತುಬಿದ್ದ ಮೈನಾ ಹಕ್ಕಿಗಳು; ಚಿಕ್ಕಮಗಳೂರಲ್ಲೂ ಹಕ್ಕಿಜ್ವರ?
ಚಿಕ್ಕಮಗಳೂರು, ಮಾರ್ಚ್ 20: ಮೈಸೂರಿನಲ್ಲಿ ಒಂದು ವಾರದಿಂದ ಹಕ್ಕಿಜ್ವರ ಕಾಣಿಸಿಕೊಂಡಿದೆ. ಈ ನಡುವೆ ಚಿಕ್ಕಮಗಳೂರಿನಲ್ಲೂ ಹಕ್ಕಿ ಜ್ವರದ ಲಕ್ಷಣಗಳು ಕಂಡುಬರುತ್ತಿವೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಆವರಣದ ಎಸ್ ಪಿ ಹರೀಶ್ ಪಾಂಡೆ ನಿವಾಸದ ಎದುರು ಎರಡು ಮೈನಾ ಹಕ್ಕಿಗಳು ಸತ್ತು ಬಿದ್ದಿವೆ. ಈ ಹಕ್ಕಿಗಳು ಸತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ಆರೋಗ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಹಾಗೂ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಎಚ್ ಕೆ ಮಂಜುನಾಥ್ ಪರಿಶೀಲನೆ ನಡೆಸಿದ್ದಾರೆ. ಅರಣ್ಯಾಧಿಕಾರಿಗಳು ಹಕ್ಕಿಗಳನ್ನು ವಶಕ್ಕೆ ಪಡೆದು ಪರೀಕ್ಷೆಗೆ ಕಳಿಸಿದ್ದಾರೆ. ಪರೀಕ್ಷೆಯ ವರದಿ ಬಂದ ಈ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದು ಬರಲಿದೆ.












Click it and Unblock the Notifications