ಶಬರಿಮಲೆಗೆ ಹೊರಟಿದ್ದ ಪೇದೆ ನೀರಿನಲ್ಲಿ ಮುಳುಗಿ ಸಾವು
ಚಿಕ್ಕಮಗಳೂರು, ಡಿಸೆಂಬರ್ 16: ಶಬರಿಮಲೆಗೆ ಹೊರಟಿದ್ದ ಚಿಕ್ಕಮಗಳೂರಿನ ಪೊಲೀಸ್ ಪೇದೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಡಿಸೆಂಬರ್ 15ರ ಭಾನುವಾರ ನಡೆದಿದೆ.
ಚಿದಾನಂದ (30) ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿದ ಪೇದೆ. ಇವರು ಕಡೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಅಯ್ಯಪ್ಪ ಸ್ವಾಮಿ ಮಾಲಾಧಾರಣೆ ಮಾಡಿ ನಿನ್ನೆ ಶಬರಿಮಲೆಗೆ ಹೊರಟಿದ್ದ ಚಿದಾನಂದ ಅವರು ಮೈಸೂರಿನ ನಂಜನಗೂಡು ಸಮೀಪದ ಕಳಲೆ ನಾಲೆಯಲ್ಲಿ ಈಜಲು ತೆರಳಿದ್ದಾರೆ. ಈ ಸಮಯದಲ್ಲಿ ಸಾವನ್ನಪ್ಪಿದ್ದಾರೆ.

ಚಿದಾನಂದ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಜೋಡಿ ಲಿಂಗದಹಳ್ಳಿ ನಿವಾಸಿ. ಇಂದು ಅವರ ಮೃತದೇಹ ಪತ್ತೆಯಾಗಿದೆ. ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications