ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಡಿಗೆರೆ; ಕುಂದೂರಿನ ಕೆಂಜಿಗೆ ಬಳಿ ಮೊದಲ ದಿನವೇ ಒಂದು ಕಾಡಾನೆ ಸೆರೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ನವೆಂಬರ್‌, 29: ಮೂಡಿಗೆರೆ ತಾಲೂಕಿನ ಕುಂದೂರು ಕೆಂಜಿಗೆ ಭಾಗದಲ್ಲಿ ಮೂರು ಕಾಡಾನೆಗಳನ್ನು ಸೆರೆಹಿಡಿಯಲು ಕಾರ್ಯಾಚರಣೆ ಪ್ರಾರಂಭಿಸಿದ್ದು, ಸದ್ಯ ಕಾರ್ಯಾಚರಣೆಯಲ್ಲಿ ಒಂದು ಆನೆ ಸೆರೆಯಾಗಿದೆ.

ಕಾಫಿ ಎಸ್ಟೇಟ್ ಕುಂದೂರು ಬಳಿ ಕಾಡಾನೆಯೊಂದಕ್ಕೆ ಅರವಳಿಕೆ ಹಾಕಲಾಗಿತ್ತು. ಆ ಕಾಡಾನೆ ಸುಮಾರು 2 ಕಿಲೋ ಮೀಟರ್‌ ದೂರದ ಕುಂಡ್ರಾ ಎಂಬಲ್ಲಿ ನೆಲಕುರುಳಿದ ನಂತರ ಅದನ್ನು ಸೆರೆಹಿಡಿಯಲಾಗಿದೆ. ಕಾರ್ಯಾಚರಣೆ ಪ್ರಾರಂಭಿಸಿದ ಕೆಲವೇ ಗಂಟೆಗಳಲ್ಲಿ ಒಂದು ಕಾಡಾನೆ ಸೆರೆಯಾಗಿದೆ. ಸೆರೆಯಾಗಿರುವ ಕಾಡಾನೆ ಗಾತ್ರದಲ್ಲಿ ಚಿಕ್ಕದಿದೆ. ಈಗ ಸೆರೆಯಾಗಿರುವ ಕಾಡಾನೆಯನ್ನು ಎರಡು ಸಾಕಾನೆಗಳ ಸುಪರ್ದಿಯಲ್ಲಿ ನಾಗರಹೊಳೆಯ ದುಬಾರೆ ಆನೆ ಕ್ಯಾಂಪ್‌ಗೆ ಸ್ಥಳಾಂತರಿಸಲಾಗುವುದು. ಎರಡು ದಿನಗಳ ಬಿಡುವಿನ ಬಳಿಕ ಇನ್ನೊಂದು ಕಾಡಾನೆಯನ್ನು ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಮೂರು ಕಾಡಾನೆಗಳ ಸೆರೆಗೆ ಅಭಿಮನ್ಯು, ಮಹಾರಾಷ್ಟ್ರದ ಭೀಮ, ಕರ್ನಾಟಕದ ಭೀಮ, ಮಹೇಂದ್ರ, ಪ್ರಶಾಂತ್, ಅರ್ಜುನ್ ಎಂಬ ಸಾಕಾನೆಗಳು ಬಂದಿದ್ದು, ಉಳಿದ ಎರಡು ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಮುಂದುವರೆದಿದೆ.

Mudigere; One Elephant caught first day near Kenjige of Kunduru

ಬೆಂಬಳೂರು ಬಳಿ ಕಾಡಾನೆ ಸೆರೆ
ಇತ್ತೀಚೆಗಷ್ಟೇ ಇಬ್ಬರು ಕೂಲಿ ಕಾರ್ಮಿಕರನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಆಪರೇಷನ್ ಮತ್ತೂರು ಕಾರ್ಯಾಚರಣೆಯಿಂದ, ಇಡೀ ದಿನ ಕಾಡಾನೆ ಹಿಂದೆ ಬಿದ್ದಿದ್ದು, ಇಂಜೆಕ್ಷನ್ ಡಾಟ್ ಮಾಡಲು ವೈದ್ಯರು ಹರಸಾಹಸ ಸಾಧವಾಗಿರಲಿಲ್ಲ. ಭೀಮ, ಭೀಮ್, ಮಹೇಂದ್ರ, ಪ್ರಶಾಂತ, ಹರ್ಷ, ಅಜೇಯ ಸೇರಿ ಒಟ್ಟು ಎಂಟು ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು‌. ನಂತದ ದ್ರೋಣ್ ಮೂಲಕ ಕಾಡಾನೆ ಇರುವ ಲೋಕೇಷನ್ ಪತ್ತೆ ಹಚ್ಚಿ ಇಂಜೆಕ್ಷನ್ ಡಾಟ್ ಮಾಡಲು ಮುಂದಾಗಿದ್ದರು.

ಕುಂದೂರಿನಲ್ಲಿ ಅರಣ್ಯ ಇಲಾಖೆಯ ಕಳ್ಳಬೇಟೆ ನಿಗ್ರಹ ಶಿಬಿರ ಧ್ವಂಸ, ಜನಾಕ್ರೋಶಕುಂದೂರಿನಲ್ಲಿ ಅರಣ್ಯ ಇಲಾಖೆಯ ಕಳ್ಳಬೇಟೆ ನಿಗ್ರಹ ಶಿಬಿರ ಧ್ವಂಸ, ಜನಾಕ್ರೋಶ

ಸೆರೆ ಹಿಡಿದ ಈ ಕಾಡಾನೆ ಮೂರ್ನಾಲ್ಕು ಭಾರಿ ತಪ್ಪಿಸಿಕೊಂಡಿತ್ತು. ನಂತರ ಈ ಕಾಡಾನೆ ಬೆಂಬಳೂರು ಬಳಿ ಕಾರ್ಯಾಚರಣೆಗೆ ಬಂದಿದ್ದ ಸಾಕಾನೆಗಳ ಮೇಲೆ ದಾಲಿ ಮಾಡಲು ಮುಂದಾಗಿತ್ತು. ಈ ವೇಳೆ ವೈದ್ಯರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದರು. ಆದರೆ ಈ ಆನೆ ಒಂದು ಇಂಜೆಕ್ಷನ್‌ಗೆ ಕುಸಿದು ಬೀಳಲಿಲ್ಲ. ನಂತರ ಮತ್ತೊಂದು ಇಂಜೆಕ್ಷನ್ ಡಾಟ್ ಮಾಡಲಾಯಿತು. ಸ್ವಲ್ಪ ದೂರು ಸಾಗಿ ಪ್ರಜ್ಞೆ ಕಳೆದುಕೊಂಡಿತ್ತು. ಆಗ ತಕ್ಷಣವೇ ಆರೈಕೆ ಮಾಡಿ, ರೇಡಿಯೋ ಕಾಲರ್ ಅಳವಡಿಸಲಾಯುತು. ಕಾಡಾನೆ ಕಾಲು, ಕುತ್ತಿಗಿಗೆ ಹಗ್ಗ, ಚೈನ್ ಹಾಕಲಾಯಿತು.‌ ನಂತರ ಮೇಲೆದ್ದ ಆನೆ ಕಾಡಿಗೆ ನುಸುಳಲು ಹರಸಾಹಸಪಟ್ಟಿತ್ತು. ಆದರೆ ಸಾಕಾನೆಗಳು ಬಲವಾಗಿ ಪ್ರತಿರೋಧ ತೋರಿದ್ದರಿಂದ ಸಾಧವಾಗಲಿಲ್ಲ. ಸುಮಾರು ಅರ್ಧ ಕಿಲೋ ಮೀಟರ್ ದೂರ ಕಾಡಾನೆಯನ್ನು ಸಾಕಾನೆಗಳು ಎಳೆದು ತಂದ ರಸ್ತೆಯಲ್ಲಿ ನಿಂತವು.‌ ಬಂತರ ಕಾಡಾನೆಗೆ ಬೆಲ್ಟ್ ಹಾಕಿ ಕ್ರೇನ್ ಮೂಲಕ ಲಾರಿಗೆ ಶಿಫ್ಟ್ ಮಾಡಲಾಯಿತು.

Mudigere; One Elephant caught first day near Kenjige of Kunduru

ಅರಣ್ಯ ಇಲಾಖೆಯ ಕಟ್ಟಡ ಧ್ವಂಸ
ಹಾಗೆಯೇ ಇತ್ತೀಚೆಗಷ್ಟೇ ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರ ಗುಂಪೊಂದು ಕುಂದೂರು ಗ್ರಾಮದ ಬಳಿ ಇರುವ ಅರಣ್ಯ ಇಲಾಖೆಯ ಕಳ್ಳಬೇಟೆ ನಿಗ್ರಹದಳದ ಶಿಬಿರವನ್ನು ಧ್ವಂಸ ಮಾಡಿದ್ದರು. ಗ್ರಾಮಸ್ಥರು ಅರಣ್ಯ ಇಲಾಖೆಯ ಕಳ್ಳಬೇಟೆ ನಿಗ್ರಹದಳದ ಶಿಬಿರವನ್ನು ಧ್ವಂಸ ಮಾಡಿರುವ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕಳೆದ ಭಾನುವಾರ ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ಶೋಭಾ ಎಂಬ ರೈತ ಮಹಿಳೆಯ ಮೇಲೆ ಕಾಡಾನೆ ದಾಳಿ ಮಾಡಿ ಕೊಂದು ಹಾಕಿತ್ತು. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ಸರ್ಕಾರ, ಜನಪ್ರತನಿಧಿಗಳ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.

English summary
An operation started to capture three Elephants in Kunduru area of Mudigere taluk, one elephant captured by forest department operation. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X