ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಫಿನಾಡಿನ ಮುಳ್ಳಯ್ಯನಗಿರಿಗೆ 10 ಸಾವಿರ ಪ್ರವಾಸಿಗರ ಭೇಟಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಅಕ್ಟೋಬರ್‌, 05: ವಾರಾಂತ್ಯ, ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಲುವಾಗಿ ಸಾಲು ಸಾಲು ರಜೆ ಇದ್ದವು. ಈ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಿಗರ ದಂಡೇ ನೆರೆದಿತ್ತು. ಅದರಲ್ಲೂ ಪ್ರಮುಖವಾಗಿ ನಾಡಿನ ಸುಪ್ರಸಿದ್ಧ ಪ್ರವಾಸಿ ತಾಣವಾದ ಬಾಬಾ ಬುಡನ್ ಗಿರಿ, ಮುಳ್ಳಯ್ಯನಗಿರಿಗೆ ಹೋಗುವ ಮಾರ್ಗದಲ್ಲಿ ಭಾರಿ ಪ್ರವಾಸಿಗರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.

ಒಂದೆಡೆ ಮಕ್ಕಳಿಗೆ ದಸರಾ ರಜೆ ಸಂಭ್ರಮ. ಮತ್ತೊಂದೆಡೆ ವೀಕೆಂಡ್ ಹಾಗೂ ಹಬ್ಬದ ಸಾಲು-ಸಾಲು ರಜೆ ಆಗಿದ್ದರಿಂದ ಪ್ರವಾಸಿಗರು ಮುಳ್ಳಯ್ಯನ ಗಿರಿ ಸೌಂದರ್ಯವನ್ನು ಸವಿಯಲು ಕಿಕ್ಕಿರಿದು ಬಂದಿದ್ದರು. ಅದರಲ್ಲೂ ಇದೆ ವೇಳೆ ಮುಳ್ಳಯ್ಯನಗಿರಿಯಲ್ಲಿ 12 ವರ್ಷಗಳಿಗೊಮ್ಮೆ ಅರಳುವ ನೀಲಿ ಕುರಂಜಿ ಹೂವು ಸುತ್ತಮುತ್ತಲಿನ ಬೆಟ್ಟ ಗುಡ್ಡಗಳಲ್ಲಿ ಹುಲಸಾಗಿ ಅರಳಿ ನಿಂತಿದೆ.

ಹಸಿರು ಬೆಟ್ಟ, ಗುಡ್ಡಗಳು ಸಂಪೂರ್ಣವಾಗಿ ನೀಲಿ ಆಗಿದ್ದು, ಪ್ರಕೃತಿಯ ಮಡಿಲಲ್ಲಿ ಹೊಸದೊಂದು ಲೋಕವೇ ಸೃಷ್ಟಿ ಆದಂತಿದೆ. ಈ ಸುಮಧುರ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಗ್ಗಿಲ್ಲದೆ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದು, ಇದೀಗ ಕಾಫಿನಾಡು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ.

ನಮ್ಮ ಕಷ್ಟವನ್ನು ಆಲಿಸಲ್ಲ, ಬರೀ ವೋಟ್‌ ಕೇಳ್ತಾರೆ, ಹರೇಬಿಳಲು ಗ್ರಾಮದಲ್ಲಿ ಜನಾಕ್ರೋಶನಮ್ಮ ಕಷ್ಟವನ್ನು ಆಲಿಸಲ್ಲ, ಬರೀ ವೋಟ್‌ ಕೇಳ್ತಾರೆ, ಹರೇಬಿಳಲು ಗ್ರಾಮದಲ್ಲಿ ಜನಾಕ್ರೋಶ

More than 10 thousand tourists visited Mullayanagiri of Chikkamagaluru district

ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್

ಇಂದು ಕೂಡ ಮುಳ್ಳಯ್ಯನಗಿರಿಯಲ್ಲಿ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಕೈಮರ ಚೆಕ್ ಪೋಸ್ಟ್‌ನಿಂದ ಸುಮಾರು ಐದು ಕಿಲೋ ಮೀಟರ್‌ವರೆಗೂ ವಾಹನಗಳು ನಿಂತಲ್ಲಿ ನಿಂತಿದ್ದು, ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿತ್ತು. ಇಂದು ಒಂದೇ ದಿನ ಮುಳ್ಳಯ್ಯನಗಿರಿ ಭಾಗಕ್ಕೆ ಸುಮಾರು 3,000ಕ್ಕೂ ಅಧಿಕ ವಾಹನಗಳು ಭೇಟಿ ನೀಡಿವೆ. ಅಂದಾಜು 10,000ಕ್ಕೂ ಅಧಿಕ ಪ್ರವಾಸಿಗರು ಮುಳ್ಳಯ್ಯನಗಿರಿಯಲ್ಲಿ ಜಮಾಯಿಸಿದ್ದಾರೆ.

ಪ್ರವಾಸಿಗರನ್ನು ನಿಯಂತ್ರಿಸಲು ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಹಾಗೂ ಚೆಕ್ ಪೋಸ್ಟ್ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ. ಪ್ರವಾಸಿಗರನ್ನು ನಿಯಂತ್ರಿಸಲು ಸಾಧ್ಯವಾಗದೆ ಚೆಕ್ ಪೋಸ್ಟ್‌ನಲ್ಲಿ ಪ್ರವಾಸಿಗರಿಂದ ಹಣವನ್ನು ಕೂಡ ಸಂಗ್ರಹ ಮಾಡದೆ, ಬಂದಂತಹ ಪ್ರವಾಸಿಗರನ್ನು ಹಾಗೆಯೇ ಬಿಟ್ಟಿದ್ದಾರೆ. ಅಷ್ಟು ದೊಡ್ಡ ಮಟ್ಟದಲ್ಲಿ ಪ್ರವಾಸಿಗರು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ.

English summary
More than ten thousand tourists come to see mullayanagiri tourist spot in Chikkamagaluru district today, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X