ಚಾರ್ಮಾಡಿ ಘಾಟ್‌ನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ: ಮಣ್ಣಿನಡಿ ಹೂತಿಟ್ಟಿದ್ದ ಸ್ನೇಹಿತ
ಚಿಕ್ಕಮಗಳೂರು, ಡಿಸೆಂಬರ್ 1: ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್‌ನಲ್ಲಿ 5 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಮಂಗಳವಾರ ಪತ್ತೆಯಾಗಿದ್ದಾನೆ.
ನಾಪತ್ತೆಯಾಗಿದ್ದ ನಾಗೇಶ್ ಆಚಾರ್ (46) ಅವರನ್ನು ಕೊಲೆ ಮಾಡಿ, ಮಣ್ಣಿನಡಿ ಹೂತಿಡಲಾಗಿತ್ತು. 5 ದಿನಗಳ ಹಿಂದೆ ನಾಗೇಶ್‌ರನ್ನು ಜೀಪ್‌ನಲ್ಲಿ ಕರೆದುಕೊಂಡು ಹೋಗಿದ್ದ ಕೃಷ್ಣೇಗೌಡ ಎಂಬಾತನೇ ಕೊಲೆ ಮಾಡಿ, ಮಣ್ಣಿನಡಿ ಹೂತಿಟ್ಟು ಪೊಲೀಸರು, ಸ್ಥಳೀಯರ ಜೊತೆ ಸೇರಿಕೊಂಡು ಹುಡುಕಾಟದ ನಾಟಕವಾಡಿದ್ದಾನೆ ಎಂದು ತಿಳಿದುಬಂದಿದೆ.
ಬಾಳೂರು ಗ್ರಾಮದ ನಾಗೇಶ್ ಆಚಾರ್ (46) ಮೃತ ದುರ್ದೈವಿಯಾಗಿದ್ದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿದಿರುತಳ ಬಳಿ ಘಟನೆ ನಡೆದಿದೆ. ಪ್ರಕರಣ ಸಂಬಂಧ ಕೃಷ್ಣೇಗೌಡ, ಉದಯ್, ಪ್ರದೀಪ್ ಎಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿದಿರುತಳ ಗ್ರಾಮದ ಚಾರ್ಮಾಡಿ ಘಾಟ್ ಅರಣ್ಯಕ್ಕೆ ಹೋಗಿದ್ದ ಬಾಳೂರು ಗ್ರಾಮದ ನಾಗೇಶ್ ಆಚಾರ್ (46) ಕಣ್ಮರೆಯಾಗಿದ್ದರು. ಐದು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ನಾಗೇಶ್‌ಗಾಗಿ ಚಾರ್ಮಾಡಿ ಘಾಟ್‌ನಲ್ಲಿ ಸ್ಥಳೀಯರಿಂದ ಹುಡುಕಾಟ ನಡೆದಿತ್ತು.

ನಾಗೇಶ್ ಆಚಾರ್ ಕಾಣೆಯಾಗಿದ ಹಿನ್ನೆಲೆಯಲ್ಲಿ ಅವರ ಪತ್ನಿ ಸುಮಾ, ಬಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೋಲೀಸರು ಹಾಗೂ ಸಾರ್ವಜನಿಕರು ಚಾರ್ಮಾಡಿ ಅರಣ್ಯದ ಸುತ್ತಮುತ್ತ ಹುಡುಕಾಟ ನಡೆಸುತ್ತಿರುವ ವೇಳೆ ವೇಳೆ ಮಂಗಳವಾರ ರಾತ್ರಿ ಅವರ ಮೃತದೇಹ ಚಾರ್ಮಾಡಿ ಅರಣ್ಯದಲ್ಲಿ ಪತ್ತೆಯಾಗಿದೆ. ಕಾಣೆಯಾಗಿದ್ದ ವ್ಯಕ್ತಿಯ ಮೇಲೆ ಗಂಭೀರ ಗಾಯಗಳಾಗಿದ್ದು, ಆತನನ್ನು ಟಾರ್ಪಾಲಿನಲ್ಲಿ ಸುತ್ತಿ, ಗುಂಡಿ ತೆಗೆದು ಹೂಳಲಾಗಿತ್ತು.
ತುಮಕೂರು: ಮೃತಪಟ್ಟಿದ್ದ ಎನ್ನಲಾಗಿದ್ದ ವ್ಯಕ್ತಿ 3 ತಿಂಗಳ ನಂತರ ದಿಢೀರ್ ಪ್ರತ್ಯಕ್ಷ
3 ತಿಂಗಳ ಹಿಂದೆ ಮೃತಪಟ್ಟಿದ್ದಾನೆಂದು ಶವಸಂಸ್ಕಾರ ಮಾಡಿ, ತಿಥಿ ಕಾರ್ಯವನ್ನೂ ಮಾಡಲಾಗಿತ್ತು. ಕುಟುಂಬಸ್ಥರು ಬಹುತೇಕ ನೋವಿನಿಂದ ಹೊರ ಬಂದಿದ್ದರು. ಆದರೆ ಅಂದು ಮೃತಪಟ್ಟಿದ್ದ ಎನ್ನಲಾಗಿದ್ದ ವ್ಯಕ್ತಿ 3 ತಿಂಗಳ ನಂತರ ದಿಢೀರ್ ಪ್ರತ್ಯಕ್ಷನಾಗಿದ್ದಾನೆ.
ಮಗಳ ಜೊತೆಯಲ್ಲಿದ್ದ ಅಪ್ಪ ದಿಢೀರ್ ನಾಪತ್ತೆ
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿರೋ ಪ್ರೇಮಲತಾರ ತಂದೆ ನಾಗರಾಜಪ್ಪ 12 ವರ್ಷದ ಹಿಂದೆ ಚಿಕ್ಕಮಾಲೂರನ್ನು ತೊರೆದು ಯಾರಿಗೂ ಹೇಳದೆ ಹೋಗಿದ್ದಾರೆ.
3 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಾಸವಿರುವ ನಾಗರಾಜಪ್ಪನ ಎರಡನೇ ಮಗಳಾದ ನೇತ್ರಾವತಿಯ ಮನೆಯಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಸಹಾಯಕ ನರ್ಸ್ ಆಗಿ ಕೆಲಸ ಮಾಡುತ್ತಿರುವ ನೇತ್ರಾವತಿ ಅಂದಿನಿಂದಲೂ ತಂದೆ ನಾಗರಾಜಪ್ಪನನ್ನು ನೋಡಿಕೊಳ್ಳುತ್ತಿದ್ದರು. ಮಗಳು ಕೆಲಸ ಮಾಡುವ ಆಸ್ಪತ್ರೆಯಲ್ಲಿಯೇ ನಾಗರಾಜಪ್ಪ ಸಹ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿದ್ದರು. ಆದರೆ ಮೂರು ತಿಂಗಳ ಹಿಂದೆ ಇದ್ದಕ್ಕಿದಂತೆ ನಾಗರಾಜಪ್ಪ ಮತ್ತೆ ಕಾಣೆಯಾಗಿದ್ದಾರೆ. ಎಷ್ಟೇ ಹುಡುಕಿದರೂ ಯಾರಿಗೂ ಸಿಕ್ಕಿರಲಿಲ್ಲ.
ಅಪ್ಪನೆಂದು ತಿಳಿದು ಅಪರಿಚಿತ ಶವಕ್ಕೆ ಅಂತ್ಯಸಂಸ್ಕಾರ
ನಾಗರಾಜಪ್ಪ ಕಾಣೆಯಾದ 8 ದಿನದ ಬಳಿಕ ಅಂದ್ರೆ ಸೆಪ್ಟೆಂಬರ್ 8ರಂದು ಸೆಂಟ್ಜಾನ್ಸ್ ಆಸ್ಪತ್ರೆ ಕಾಂಪೌಂಡ್ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ನೇತ್ರಾವತಿಗೆ ವಿಷಯ ತಿಳಿಸಿದ್ದು, ತಂದೆ ನಾಗರಾಜಪ್ಪನೇ ಮೃತಪಟ್ಟಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ಅಪರಿಚಿತ ಶವ ನಾಗರಾಜಪ್ಪನ ಹೋಲಿಕೆ ಇದ್ದಿದ್ದರಿಂದ ಮಗಳು ನೇತ್ರಾವತಿ ಸಹ ಶವ ತನ್ನ ತಂದೆಯದ್ದೇ ಎಂದು ಒಪ್ಪಿಕೊಂಡು ಈ ಬಗ್ಗೆ ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮರಣ್ಣೋತ್ತರ ಪರೀಕ್ಷೆ ನಡೆಸಿ ಬಳಿಕ ಚಿಕ್ಕಮಾಲೂರಿಗೆ ಶವ ತಂದು ಸಂಸ್ಕಾರ ಮಾಡಿದ್ದರು.
ಮೂರು ತಿಂಗಳ ನಂತರ ಪ್ರತ್ಯಕ್ಷ
ಶವಸಂಸ್ಕಾರದ ಬಳಿಕ 11 ದಿನಕ್ಕೆ ನಾಗರಾಜಪ್ಪ ತಿಥಿ ಕೂಡ ಮಾಡಲಾಗಿದೆ. ಇನ್ನು ನಾಗರಾಜಪ್ಪನ ಮಗ ಎಲ್ಲ ಕಾರ್ಯ ಮುಗಿಸಿದ್ದ. ಮನೆಯಲ್ಲಿ ನಾಗರಾಜಪ್ಪನ ಫೋಟೋ ಫ್ರೇಂ ಮಾಡಿಸಿ ಗೋಡೆಗೆ ನೇತುಹಾಕಲಾಗಿದೆ. ಆದರೆ ದಿಢೀರ್ ನಾಗರಾಜಪ್ಪ ಚಿಕ್ಕಮಾಲೂರಿಗೆ ಬಂದು ಎಲ್ಲರನ್ನೂ ಗಾಬರಿಗೊಳಿಸಿದ್ದಾನೆ.
ಕುಡಿತಕ್ಕೆ ದಾಸನಾಗಿದ್ದ ನಾಗರಾಜಪ್ಪ ಹಿಂದಿನಿಂದಲೂ ಮಾನಸಿಕ ಅಸ್ವಸ್ಥನ ರೀತಿ ವರ್ತಿಸುತ್ತಿದ್ದನಂತೆ. ಮಗಳ ಮನೆಯಿಂದ ಯಾರಿಗೂ ಹೇಳದೇ ಹೋಗಿ ಸಿಕ್ಕ ಕಡೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿ 3 ತಿಂಗಳು ಬೇರೆಬೇರೆ ಊರುಗಳಲ್ಲಿ ತಿರುಗಾಡಿದ್ದನಂತೆ. ನಂತರ ತನ್ನ ಊರಿಗೆ ಬರಬೇಕೆಂದುಕೊಂಡು ವಾಪಸ್ ಬಂದಿದ್ದಾನೆ. ಬಸ್‌ನಿಂದ ಇಳಿದ ಕೂಡಲೇ ಆತನನ್ನು ಆಶ್ಚರ್ಯದಿಂದಲೇ ನೋಡಿದ ಗ್ರಾಮಸ್ಥರು ಸತ್ತುಹೋಗಿದ್ದ ವಿಷಯ ತಿಳಿಸಿದ್ದಾರೆ. ಆತನೇ ಎಲ್ಲರನ್ನೂ ಗುರುತಿಸಿ ಮಾತನಾಡಿದ ಬಳಿಕ ಈತನೇ ಅಸಲಿ ನಾಗರಾಜಪ್ಪ ಎಂಬುದು ಗೊತ್ತಾಗಿದೆ.












Click it and Unblock the Notifications