ಮದುವೆ ಮಂಟಪದಿಂದ ವರ ನಾಪತ್ತೆ, ವಧುವಿನ ಕೈಹಿಡಿದ ಬಿಎಂಟಿಸಿ ಕಂಡಕ್ಟರ್

ಚಿಕ್ಕಮಗಳೂರು. ಜನೆವರಿ 4: ರಾತ್ರಿ ರಿಸೆಪ್ಷನ್‍ಗೆ ಇದ್ದ ವರ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆಯಾಗಿ, ಮದುಮಗಳಾಗಿ ನಿಂತಿದ್ದ ಯುವತಿಯನ್ನು ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ಕೈಹಿಡಿದ ಅಪರೂಪದ ಮದುವೆಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಸಾಕ್ಷಿಯಾಗಿದೆ.

ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಅಶೋಕ್ ಹಾಗೂ ನವೀನ್ ಎಂಬ ಅಣ್ಣತಮ್ಮಂದಿರಿಗೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯಿಂದ ಕನ್ಯೆಗಳ ಜೊತೆಗೆ ಮದುವೆ ನಿಶ್ಚಯಗೊಂಡಿತ್ತು. ವರ ಅಶೋಕ್ ಮದುವೆ ದಾವಣಗೆರೆ ಮೂಲದ ಯುವತಿಯೊಂದಿಗೆ ಮುಗಿದಿದೆ.

ಆದರೆ, ನವೀನ್ ಮದುವೆಯಾಗಬೇಕಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸರಪನಹಳ್ಳಿಯ ಯುವತಿ ಸಿಂಧುವನ್ನು ಬೆಂಗಳೂರಿನ ಬಿಎಂಟಿಸಿ ಕಂಡಕ್ಟರ್ ಚಂದ್ರು ಎಂಬುವರು ಮದುವೆಯಾಗಿದ್ದಾರೆ.

Chikkamangaluru: Groom Missing from Wedding, Bride Marries with Another Man in Tarikere

ಯಾಕೆಂದರೆ, ಶನಿವಾರ ರಾತ್ರಿ ಸಿಂಧು ಜೊತೆ ರಿಸೆಪ್ಷನ್‍ನಲ್ಲಿದ್ದ ನವೀನ್ ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ. ನವೀನ್ ಪ್ರೀತಿಸುತ್ತಿದ್ದ ಯುವತಿಯು ನನ್ನನ್ನು ಪ್ರೀತಿಸಿ ಬೇರೆ ಹುಡುಗಿಯನ್ನು ಮದುವೆಯಾಗಲು ಬಿಡಲ್ಲ. ನಾನು ಛತ್ರದಲ್ಲೇ ವಿಷ ಕುಡಿಯುತ್ತೇನೆ, ಮದುವೆ ನಿಲ್ಲಿಸುತ್ತೇನೆ ಎಂದು ಹೆದರಿಸಿದ್ದಕ್ಕೆ ವರ ನವೀನ್ ಮರ್ಯಾದೆಗೆ ಹೆದರಿ ಛತ್ರದಿಂದಲೇ ನಾಪತ್ತೆಯಾಗಿದ್ದಾನೆ.

ವರ ನವೀನ್ ಪ್ರೀತಿಸುತ್ತಿದ್ದ ಯುವತಿಯನ್ನು ತುಮಕೂರಿಗೆ ಬರಲು ಹೇಳಿದ್ದ. ಆ ಹೊತ್ತಿಗೆ ಮದುವೆ ನಿಂತಿತ್ತು. ಆಗ ದೋರನಾಳು ಗ್ರಾಮದ ಪಕ್ಕದ ನಂದಿ ಗ್ರಾಮದ ಯುವಕ ಚಂದ್ರು ಮದುಮಗಳಾಗಿ ನಿಂತಿದ್ದ ಸಿಂಧು ಕೈ ಹಿಡಿದಿದ್ದಾನೆ. ಚಂದ್ರು ಬೆಂಗಳೂರಿನ ಬಿಎಂಟಿಸಿ ಬಸ್ ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ.

Chikkamangaluru: Groom Missing from Wedding, Bride Marries with Another Man in Tarikere

ನಾಪತ್ತೆಯಾದ ಯುವಕನನ್ನ ಪೋಷಕರು ಹುಡುಕಾಟ ನಡೆಸಿದರೂ ಸಿಕ್ಕಿಲ್ಲ. ಪ್ರೀತಿಸಿದ ಯುವತಿಗೆ ನವೀನ್ ತುಮಕೂರಿಗೆ ಬಾ ಎಂದಿದ್ದರಿಂದ ಅಲ್ಲಿಗೆ ಹೋಗಿ ನೋಡಿದರೂ ಆತ ಸಿಕ್ಕಿಲ್ಲ. ಆತನ ಮೊಬೈಲ್ ಟ್ರ್ಯಾಕ್ ಬೆಂಗಳೂರು ತೋರಿಸಿದ್ದರಿಂದ ಆತ ಸಿಕ್ಕಿಲ್ಲ.

ಆದರೆ, ಹಸೆಮಣೆ ಏರಬೇಕಿದ್ದ ಯುವತಿ ಸಿಂಧು ಮದುವೆ ನಿಲ್ಲುವ ಆತಂಕ ಎದುರಾಗಿತ್ತು. ಆದರೆ, ಮದುವೆ ನಿಲ್ಲದೆ ಅದೇ ದಿನ, ಅದೇ ಮುಹೂರ್ತ ಹಾಗೂ ಅದೇ ಛತ್ರದಲ್ಲೇ ಮತ್ತೋರ್ವ ಯುವಕ ಚಂದ್ರು ನಾನೇ ಮದುವೆಯಾಗುತ್ತೇನೆಂದು ವಿವಾಹವಾಗಿದ್ದಾನೆ. ಹೊಸ ಬಾಳಿನ ಹೊಸಿಲಲಿ ಬದುಕಿನ ಆಸೆ ಹೊತ್ತಿದ್ದ ವಧು ಸಿಂಧು, ವರ ನಾಪತ್ತೆಯಾದರೂ ನವ ದಾಂಪತ್ಯದ ಬದುಕಿಗೆ ಕಾಲಿಟ್ಟಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+