ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು; ಹೆಚ್ಚಾಯ್ತು ಕಾಡ್ಗಿಚ್ಚು, ಜನರು ಆಕ್ರೋಶ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮಾರ್ಚ್ 07; ಬೇಸಿಗೆ ಆರಂಭವಾಗುತ್ತಿದ್ದಂತೆ ಕಾಫಿನಾಡಿನಲ್ಲಿ ಕಾಡ್ಗಿಚ್ಚಿನ ಪ್ರಕರಣ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಸಿಲ ಧಗೆ ಆರಂಭವಾಗುತ್ತಿದ್ದಂತೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅತ್ಯಮೂಲ್ಯ ಪ್ರಕೃತಿ ಸಂಪತ್ತು ಬೆಂಕಿಗಾಹುತಿಯಾಗುತ್ತಿದೆ. ಬೆಂಕಿಯಿಂದ ಕಾಡು ರಕ್ಷಿಸಲು ಅರಣ್ಯ ಇಲಾಖೆ ಫೈರ್ ಲೈವ್ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡರೂ ಬೆಂಕಿಯಿಂದ ಕಾಡು ರಕ್ಷಿಸಲು ಸಾಧ್ಯವಾಗುತ್ತಿಲ್ಲ.

ಚಿಕ್ಕಮಗಳೂರು; ಕಾಡ್ಗಿಚ್ಚು ನಂದಿಸಲು ಮಾಸ್ಟರ್ ಪ್ಲಾನ್ ಚಿಕ್ಕಮಗಳೂರು; ಕಾಡ್ಗಿಚ್ಚು ನಂದಿಸಲು ಮಾಸ್ಟರ್ ಪ್ಲಾನ್

ಕಳಸ- ಚಿಕ್ಕಮಗಳೂರು ಸುತ್ತಮುತ್ತಲೂ ಬೆಂಕಿ ಧಗಧಗಿಸುತ್ತಿದೆ. ನಿರಂತರವಾಗಿ ಅರಣ್ಯ ಬೆಂಕಿಗಾಹುತಿಯಾಗುತ್ತಿದ್ದು ಅಪರೂಪದ ಪ್ರಾಣಿ ಸಂಪತ್ತು, ಸಂಪದ್ಭರಿತವಾದ ಸಸ್ಯ ಸಂಪತ್ತ ನಾಶವಾಗುತ್ತಿದೆ. ಇಷ್ಟಕ್ಕೆಲ್ಲಾ ಕಾರಣ ಕೆಲ ಸ್ಥಳೀಯರೇ ಅನ್ನೋದು ಅಘಾತಕಾರಿ ಬೆಳವಣಿಗೆ.

ನಾಗರಹೊಳೆಯಲ್ಲಿ ಕಾಡ್ಗಿಚ್ಚು ತಡೆಗೆ ಡ್ರೋಣ್, ಸಿಸಿಟಿವಿ ಕ್ಯಾಮೆರಾ ಕಣ್ಣುನಾಗರಹೊಳೆಯಲ್ಲಿ ಕಾಡ್ಗಿಚ್ಚು ತಡೆಗೆ ಡ್ರೋಣ್, ಸಿಸಿಟಿವಿ ಕ್ಯಾಮೆರಾ ಕಣ್ಣು

ಯಾಕಂದರೆ ಒಂದೆಡೆ ಕಾಡನ್ನು ಒತ್ತುವರಿ ಮಾಡೋದಕ್ಕೆ ಕೆಲ ಕಾಡಂಚಿನ ಗ್ರಾಮದ ಸ್ಥಳೀಯರೇ ಬೆಂಕಿ ಕೊಡುತ್ತಾರೆ ಎಂಬುದು ಆರೋಪ. ಮತ್ತೊಂದೆಡೆ ಕಾಡು ಪ್ರಾಣಿಗಳಿಂದ ಬೆಳೆಗಳನ್ನು ಉಳಿಸಿಕೊಳ್ಳೋದಕ್ಕೆ, ಕಾಡು ಪ್ರಾಣಿಗಳು ಉಪಟಳವಿರೋ ಗ್ರಾಮಸ್ಥರು ಪ್ರಾಣಿಗಳನ್ನು ಓಡಿಸುವುದಕ್ಕೆ ಬೆಂಕಿ ಹಾಕುತ್ತಾರೆ ಎಂಬ ದೂರು ಇದೆ.

ಭೀಕರ ಕಾಡ್ಗಿಚ್ಚು: ಸುಟ್ಟು ಹೋದ ಮನೆ, ಬೀದಿಗೆ ಬಿತ್ತು ಬದುಕು..!ಭೀಕರ ಕಾಡ್ಗಿಚ್ಚು: ಸುಟ್ಟು ಹೋದ ಮನೆ, ಬೀದಿಗೆ ಬಿತ್ತು ಬದುಕು..!

ಹೊಸ ಹುಲ್ಲು ಪ್ರಾಣಿಗಳಿಗೆ ಆಹಾರವಾಗುತ್ತದೆ

ಹೊಸ ಹುಲ್ಲು ಪ್ರಾಣಿಗಳಿಗೆ ಆಹಾರವಾಗುತ್ತದೆ

ಅರಣ್ಯ ಸುಟ್ಟು ಕರಕಲಾದರೆ ಬೆಳೆಯುವ ಹೊಸ ಹುಲ್ಲು ಪ್ರಾಣಿಗಳಿಗೆ ಆಹಾರವಾಗುತ್ತೆಂದು ಜೊತೆಗೆ, ಒತ್ತುವರಿ ಮಾಡೋದಕ್ಕೂ ಅರಣ್ಯಕ್ಕೆ ಬೆಂಕಿ ಇಡುತ್ತಿದ್ದಾರೆ ಎಂಬ ದೂರು ಜನರ ಮೇಲಿದೆ. ಹೀಗೆ ಒಂದೊಂದು ರೀತಿಯಲ್ಲಿ ಬೆಂಕಿ ಹಚ್ಚಿ ಸ್ವಾರ್ಥ ಮೆರೆಯುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ನಿಜಕ್ಕೂ ಇದು ಆತಂಕದ ಬೆಳವಣಿಗೆಯಾಗಿದ್ದು, ಕೆಲವರಿಗೆ ಅರಣ್ಯ ಇಲಾಖೆ ಮೇಲಿನ ಕೋಪ ಬೆಂಕಿ ಹಚ್ಚುವ ಕೆಲಸಕ್ಕೆ ಪ್ರಚೋದಿಸುತ್ತದೆ ಎಂದು ಪರಿಸರವಾದಿಗಳು ದೂರಿದರು.

ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ

ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ

ಅರಣ್ಯ ಇಲಾಖೆಯಲ್ಲಿ ಸೂಕ್ತ ಸಿಬ್ಬಂದಿಗಳಿಲ್ಲದಿರೋದು ಕೂಡ ಬೆಂಕಿ ನಂದಿಸುವ ಕಾರ್ಯಾಚರಣೆ ಸವಾಲಾಗಿದೆ ಎಂದು ಪರಿಸರವಾದಿಗಳು ಸರ್ಕಾರ ಹಾಗೂ ಸ್ಥಳೀಯರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ಅರಣ್ಯದಲ್ಲಿ ಮರಗಳ ಎಲೆಗಳು ಸಂಪೂರ್ಣವಾಗಿ ಉದುರಿದ್ದು, ಅರಣ್ಯ ಪ್ರದೇಶದ ಹುಲ್ಲುಗಾವಲು ಒಣಗಿ ನಿಂತಿದೆ. ಇಲ್ಲಿ ಒಂದೇ ಒಂದೇ ಬೆಂಕಿ ಕಿಡಿ ನೆಲಕ್ಕೆ ಬಿದ್ದರೂ ಆ ಪ್ರದೇಶ ಸಂಪೂರ್ಣ ಹೊತ್ತಿ ಉರಿಯುತ್ತದೆ. ಬೆಂಕಿಯನ್ನ ತಡೆಗಟ್ಟಲು ಈಗಾಗಲೇ ಅರಣ್ಯ ಇಲಾಖೆ ಫೈರ್ ಲೈನ್ ನಿರ್ಮಿಸಿದೆ. ಅಲ್ಲದೇ ಅಲ್ಲಲ್ಲಿ ಫೈರ್ ಕ್ಯಾಂಪ್‍ಗಳನ್ನೂ ತೆರೆದಿದೆ.

ಬೆಂಕಿ ಬಿದ್ದಾಗ ಕ್ಯಾಂಪಿನಲ್ಲಿರುವ ನಾಲ್ಕೈದು ಸಿಬ್ಬಂದಿಗಳು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಬೆಂಕಿಯ ಜ್ವಾಲೆ ಹೊತ್ತಿ ಉರಿಯುವಾಗ ಸೂಕ್ತ ಸೌಲಭ್ಯಗಳಿಲ್ಲಿದ ಸಿಬ್ಬಂದಿಗಳು ಖಾಲಿ ಕೈಯಲ್ಲಿ ಬೆಂಕಿ ನಂದಿಸೋದು ಅಸಾಧ್ಯವಾದ ಮಾತು. ಸೂಕ್ತ ಪರಿಕರಗಳನ್ನು ಸಹ ಬೇಕಾಗುತ್ತದೆ. ಸರ್ಕಾರ ಸಿಬ್ಬಂದಿಗಳಿಗೆ ಸೂಕ್ತವಾದ ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಯೂ ಇದೆ.

ಸ್ವಾಭಾವಿಕವಾಗಿ ಬೆಂಕಿ ಬೀಳುವುದಿಲ್ಲ

ಸ್ವಾಭಾವಿಕವಾಗಿ ಬೆಂಕಿ ಬೀಳುವುದಿಲ್ಲ

ಈ ಬಗ್ಗೆ ಪರಿಸರವಾದಿ ವೀರೇಶ್ ಮಾತಾನಾಡಿ, "ಸ್ಥಳೀಯರೇ ಬೆಂಕಿಯನ್ನು ಕಾಡಿಗೆ ಕೊಡುತ್ತಿದ್ದಾರೆ, ಸ್ವಾಭಾವಿಕವಾಗಿ ಬೆಂಕಿ ಕಾಡಿಗೆ ಬೀಳುವುದಿಲ್ಲ, ಮನುಷ್ಯರಿಂದಲೇ ಕಾಡಿಗೆ ಬೆಂಕಿ ಬೀಳುವುದು. ಕೂಡಲೇ ಸರ್ಕಾರ ಮತ್ತು ಅರಣ್ಯ ಇಲಾಖೆ ಎಚ್ಚೆತ್ತು ಆಧುನಿಕ ತಂತ್ರಜ್ಞಾನ ಬಳಸಿ ಬೆಂಕಿ ನಂದಿಸೋಕೆ ಯೋಜನೆ ರೂಪಿಸಿದರೆ ಮಾತ್ರ ಬೆಂಕಿ ತಡೆಯುವುದಕ್ಕೆ ಸಾಧ್ಯ. ಇಲ್ಲದಿದ್ದರೆ ಅಪರೂಪದ ಪ್ರಾಣಿ ಸಂಪತ್ತು, ಸಸ್ಯ ಸಂಪತ್ತು ಕಳೆದುಕೊಳ್ಳಬೇಕಾಗುತ್ತದೆ" ಎಂದರು.

Recommended Video

ಪುಟಿನ್ ಹಾಕೋ ಷರತ್ತುಗಳನ್ನು ಉಕ್ರೇನ್ ಒಪ್ಪಿಕೊಂಡ್ರೆ ಮಾತ್ರ ಯುದ್ಧ ನಿಲ್ಲೋದಂತೆ | Oneindia Kannada
ಕಾಡು ಬೆಳೆಸಿ ಎನ್ನುವ ಅರಣ್ಯ ಇಲಾಖೆ

ಕಾಡು ಬೆಳೆಸಿ ಎನ್ನುವ ಅರಣ್ಯ ಇಲಾಖೆ

ಪ್ರತಿ ವರ್ಷವೂ ನಮ್ಮ ಅಪರೂದ ವನ್ಯ ಜೀವಿ ಹಾಗೂ ಸಸ್ಯಸಂಪತ್ತಿನ ತಾಣ ಬೆಂಕಿಯ ನರ್ತನಕ್ಕೆ ಬಲಿಯಾಗುತ್ತಿದೆ. ಇದೆಲ್ಲಾ ಗೊತ್ತಿದ್ದರೂ ಕೂಡ ಅಧಿಕಾರಿಗಳು ಮಾತ್ರ ಜಾಣ ಕುರುಡರಂತಿದ್ದಾರೆ. ಒಂದೆಡೆ ಕಾಡು ಬೆಳೆಸಿ ನಾಡು ಉಳಿಸಿ ಅಂತಾ ಬೊಬ್ಬೆ ಹೊಡೆಯೋ ಸರ್ಕಾರ ಕಾಡನ್ನು ಉಳಿಸುವುದಕ್ಕೆ ಬೇಕಾದ ಸೌಲಭ್ಯಗಳನ್ನು ಮಾತ್ರ ಕೊಡುತ್ತಿಲ್ಲ. ಕೆಲ ಜಾಗಗಳಲ್ಲಿ ಸೌಲಭ್ಯವಿಲ್ಲದೆ ಅರಣ್ಯ ಸಿಬ್ಬಂದಿಗಳು ಕೂಡ ಕೈಚೆಲ್ಲಿ ಕೂರಬೇಕಾದಂತಹಾ ಪರಿಸ್ಥಿತಿ ಇದೆ.

English summary
People upset with forest department officials after forest fire cases increased in Chikkamagaluru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X