ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಯಾವ ಗೂಂಡಾಗಿರಿನೂ ಮಾಡಿಲ್ಲ: ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಆಕ್ರೋಶ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್‌, 05: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ರಾಜಕೀಯ ಕೆಸೆರೆರಚಾಟಗಳು ಹೆಚ್ಚಾಗುತ್ತಲೇ ಇವೆ. ಇತ್ತೀಚೆಷ್ಟೇ ಬಿಜೆಪಿ ಸರ್ಕಾರ ರೌಡಿಗಳನ್ನು ಹುಟ್ಟುಹಾಕುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪ ಮಾಡಿದ್ದರು. ಇದೀಗ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಸಿ.ಟಿ ರವಿ, ಕೊತ್ವಾಲ್‌ ರಾಮಚಂದ್ರನ ಶಿಷ್ಯ ನಾನು ಎಂದು ಹೇಳಿಕೊಂಡು ಹೆಮ್ಮೆ ಪಡುವ ರಾಜಕೀಯ ನೇತಾರರ ಸಾಲಿಗೆ ಸೇರಿದವನೂ ನಾನಲ್ಲ. ಯಾವ ಗೂಂಡಾಗಿರಿನೂ ಮಾಡಿಲ್ಲ ಎಂದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ವೈಯಕ್ತಿಕವಾಗಿ ಒಂದು ಕೇಸ್ ಕೂಡ ಇಲ್ಲ. "ನನ್ನ ಮೇಲಿರುವುದು ಸಾರ್ವಜನಿಕ ಹೋರಾಟಗಳ ಕೇಸ್, ಅದಕ್ಕೆ ರೌಡಿ ಸಾಲಿಗೆ ಸೇರಿಸಿದ್ದರು. ಅದಕ್ಕಾಗಿ ನನ್ನನ್ನು ನಾನು ಉದಾಹರಣೆ ಕೊಟ್ಟಿದ್ದೆ. ಕೊತ್ವಾಲ್‌ ರಾಮಚಂದ್ರನ ಶಿಷ್ಯ ನಾನು ಎಂದು ಹೇಳಿಕೊಂಡು ಹೆಮ್ಮೆ ಪಡುವ ರಾಜಕೀಯ ನೇತಾರರ ಸಾಲಿಗೆ ಸೇರಿದವನೂ ನಾನಲ್ಲ." ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕನಾಗಿದ್ದೇನೆ. ನಾನು ಯಾವ ಗುಂಡಾಗಿರಿನೂ ಮಾಡಿಲ್ಲ. ಕಾಂಗ್ರೆಸ್‌ನವರು ನನ್ನನ್ನು ಟೀಕೆ ಮಾಡುವಾಗ ಕುಡುಕ ಎಂದು ಹೇಳಿದ್ದರು. ನಾನು ಸಾರ್ವಜನಿಕವಾಗಿ ಕುಡಿದು ಅಸಭ್ಯವಾಗಿ ವರ್ತಿಸಿದ ಒಂದು ಉದಾಹರಣೆ ಕೊಡಲಿ. ಬೆಳಗ್ಗೆ 5ರಿಂದ ರಾತ್ರಿ 11ರವರೆಗೂ ಸಕ್ರೀಯವಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ನನ್ನ ಮೇಲೆ ಅವರು ಆರೋಪ ಹೊರಿಸಿದ್ದಾರೆ. ಇದು ಕಾಂಗ್ರೆಸ್‌ನವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ಸಿದ್ರಾಮುಲ್ಲಾಖಾನ್ ಎಂದಿದ್ದಕ್ಕೆ ಕಾಂಗ್ರೆಸ್‌ನವರಿಗೆ ಉರಿ ಹತ್ತಿಕೊಂಡಿದೆ: ಸಿ.ಟಿ.ರವಿಸಿದ್ರಾಮುಲ್ಲಾಖಾನ್ ಎಂದಿದ್ದಕ್ಕೆ ಕಾಂಗ್ರೆಸ್‌ನವರಿಗೆ ಉರಿ ಹತ್ತಿಕೊಂಡಿದೆ: ಸಿ.ಟಿ.ರವಿ

ಎಲ್ಲಾ ರೌಡಿ ಶೀಟರ್‌ಗಳೂ ರೌಡಿಗಳಲ್ಲ

ರೌಡಿ ಶೀಟರ್‌ಗಳ ಪಕ್ಷ ಸೇರ್ಪಡೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಎಲ್ಲಾ ರೌಡಿ ಶೀಟರ್‌ಗಳು ರೌಡಿಗಳು ಅಲ್ಲ ಅಂತ ಹೇಳಿದ್ದೆ. ಆದರೆ ಎಲ್ಲಾ ಅನ್ನುವುದನ್ನು ಮರೆತು ಬಿಟ್ಟಿದ್ದಾರೆ. ರೌಡಿಶೀಟರ್‌ನಲ್ಲಿರುವ ಎಲ್ಲರಿಗೂ ಕ್ಲೀನ್‌ಚೀಟ್ ಅನ್ನು ನಾನು ಕೊಟ್ಟಿಲ್ಲ. ಆರ್.ವಿ.ದೇವರಾಜ್, ಬಿ.ಕೆ.ಹರಿಪ್ರಸಾದ್ ಅವರ ಬಗ್ಗೆ ಕಾಂಗ್ರೆಸ್‌ನವರು ಅವಲೋಕನ ಮಾಡಬೇಕು. ಕೆಲವರನ್ನು ರಾಜಕೀಯ ಕಾರಣಕ್ಕೆ ರೌಡಿಶೀಟರ್ ಸಾಲಿಗೆ ಸೇರಿಸುತ್ತಾರೆ. ಆದರೆ ಅವರು ಯಾರೂ ರೌಡಿಗಳು ಆಗಿರಲ್ಲ. ಅಂತಹವರ ಬಗ್ಗೆ ಮಾತ್ರ ಹೇಳಿದ್ದೇನೆ. ನಾನು ನಿಜವಾದ ರೌಡಿಗಳ ಬಗ್ಗೆ ಕ್ಲೀನ್‌ ಚೀಟ್ ಕೊಟ್ಟಿಲ್ಲ, ಕೊಡೋದು ಇಲ್ಲ. ಕಾಂಗ್ರೆಸ್‌ನವರು ತಮ್ಮ ಸ್ವಭಾವಕ್ಕೆ ತಕ್ಕಂತೆ ಆರೋಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

City Ravi said I did not do rowdyism: C T Ravi

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ

ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ವರ್ಚ್ಯುಯಲ್ ಮೀಟಿಂಗ್ ಮಾಡಿ ನನ್ನ ಕಾರ್ಯಕ್ಷೇತ್ರದ ಎಲ್ಲಾ ಕಾರ್ಯಕರ್ತರಿಗೆ ಅಂತಿಮವಾಗಿ ಗಮನಿಸಬೇಕಾದ ಎಲ್ಲಾ ವಿಚಾರಗಳನ್ನು ಹೇಳಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಿಂದಿನ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನ ಪಡೆದುಕೊಳ್ಳಲಿದೆ. ಬಿಜೆಪಿ ಸರ್ಕಾರ ಗುಜರಾತ್‌ನಲ್ಲಿ ಭಾರೀ ಅಭಿವೃದ್ಧಿ ಕೆಲಸವನ್ನು ಮಾಡಿದೆ. ಅಲ್ಲದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಲೆ ಅಲ್ಲಿ ವ್ಯಾಪಕವಾಗಿದೆ.

ಬಿಜೆಪಿ ಸರ್ಕಾರದ ನಾಮ್ ಮತ್ತು ಕಾಮ್ ಇವೆರಡರ ಆಧಾರದಲ್ಲಿ ಜನರು ಬಿಜೆಪಿಗೆ ಮತ ನೀಡುತ್ತಾರೆ. ಒಡೆದು ಆಳುವ ರಾಜಕಾರಣ ಮಾಡುವವರನ್ನು ಜನರು ಸಹಿಸುವುದಿಲ್ಲ ಎಂದು ಗುಡುಗಿದರು. ರಾವಣ ಯಾರು, ರಾಮ ಯಾರು ಎಂಬುದು ಗುಜರಾತ್ ಫಲಿತಾಂಶ ನಿರ್ಣಯಿಸುತ್ತದೆ. ರಾಮ ಮತ್ತೆ ಗೆದ್ದು ಬರುತ್ತಾನೆ. ರಾವಣ ಶಕ್ತಿಗಳು ನಾಶವಾಗುತ್ತವೆ.

ಅಭಿವೃದ್ಧಿಗೆ ಅಡ್ಡಗಾಲು:ಡಿ.ಎನ್‌ ಜೀವರಾಜ್‌ ವಿರುದ್ಧ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಗರಂಅಭಿವೃದ್ಧಿಗೆ ಅಡ್ಡಗಾಲು:ಡಿ.ಎನ್‌ ಜೀವರಾಜ್‌ ವಿರುದ್ಧ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಗರಂ

English summary
BJP National General Secretary and MLA C T Ravi Said in Chikkamagaluru,City Ravi said I did not do rowdyism, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X