ನಟಿ ರಮ್ಯಾ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೆನ್ನಲ್ಲೇ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೂ ಅಶ್ಲೀಲ ಕಮೆಂಟ್
Nayana Motamma: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗಷ್ಟೇ ನಟಿ ರಮ್ಯಾಗೆ ಕಿಡಿಗೇಡಿಗಳು ಅಶ್ಲೀಲವಾಗಿ ಕಮೆಂಟ್ ಹಾಕಿದ್ದರು. ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಇದೇ ಸಮಸ್ಯೆ ಎದುರಿಸಿ ಪ್ರಕರಣ ಕೂಡ ದಾಖಲಿಸಿದ್ದು, ಆರೋಪಿಗಳನ್ನು ಪೊಲೀಸರು ಬಂದಿಸಿದ್ದರು.
ಇದರ ಬೆನ್ನಲ್ಲೇ ಇದೀಗ ಮೂಡಿಗೆರೆ ಕಾಂಗ್ರೆಸ್ ಶಾಸಕಿ ನಯನಾ ಶಾಸಕಿ ನಯನಾ ಮೋಟಮ್ಮ ಅವರಿಗೂ ಕೂಡ ಕಿಡಿಗೇಡಿಗಳು ಅಶ್ಲೀಲವಾಗಿ ಕಮೆಂಟ್ ಹಾಕಿದ್ದಾರೆ. ನಯನ ಮೋಟಮ್ಮ ಅವರ ಬಟ್ಟೆಯ ಬಗ್ಗೆ ವೈಯಕ್ತಿಕ ಇನ್ಸ್ಟಾಗ್ರಾಮ್ ಖಾತೆಯಲ್ಲಿನ ಪೋಸ್ಟ್‌ಗಳಿಗೆ ಅಶ್ಲೀಲವಾಗಿ ಕಿಡಿಗೇಡಿಗಳು ಕಮೆಂಟ್ ಹಾಕಿದ್ದಾರೆ. ವೇಶ್ಯೆ ಎಂದು ಕಮೆಂಟ್ ಮಾಡಿದ್ದಾರೆ ಎಂದು ಶಾಸಕಿ ಆರೋಪಿಸಿದ್ದಾರೆ.

ನಯಮಾ ಮೊಟಮ್ಮಗೆ ಅಶ್ಲೀಲ ಕಮೆಂಟ್: ಇನ್ಸ್ಟಾಗ್ರಾಮ್‌ನಲ್ಲಿ ಎರಡು ಅಧಿಕೃತ ಖಾತೆ ಹೊಂದಿರುವ ನಯನಾ ಮೊಟಮ್ಮ ರಾಜಕೀಯ ವಿಚಾರದ ಬಗ್ಗೆ ಮಾಹಿತಿ ಕೊಳ್ಳಲು ಪ್ರತ್ಯೇಕ ಖಾತೆ ಹೊಂದಿದ್ದು, ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಮತ್ತೊಂದು ಖಾತೆ ಹೊಂದಿದ್ದಾರೆ. ಖಾಸಗಿ ಪ್ರವಾಸ ಮತ್ತು ವೈಯಕ್ತಿಕ ವಿಚಾರ ಹಂಚಿಕೊಳ್ಳುವ ಖಾತೆಯಲ್ಲಿ ಕಿಡಿಗೇಡಿಗಳು ಅಶ್ಲೀಲವಾಗಿ ಕಮೆಂಟ್ ಹಾಕಿದ್ದಾರೆ ಎಂದು ಶಾಸಕಿ ನಯಮಾ ಮೊಟಮ್ಮ ಅವರು ಗಂಭೀರ ಆರೋಪ ಮಾಡಿದ್ದಾರೆ.
ಶಾಸಕಿ ನಯಮಾ ಮೊಟಮ್ಮ ಅವರ ವೈಯಕ್ತಿಕ ಇನ್ಸ್ಟಾಗ್ರಾಮ್ ಖಾತೆಯಲ್ಲಿನ ಪೋಸ್ಟ್‌ಗೆ ವೇಶ್ಯೆ ಎಂದು ಕಾಮೆಂಟ್ ಮಾಡಿದ್ದಾರೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ. ಖಾಸಗಿ ಪ್ರವಾಸ, ವೈಯಕ್ತಿಕ ವಿಚಾರ ಹಂಚಿಕೊಳ್ಳುವ ಖಾತೆಯಲ್ಲಿ ಬಟ್ಟೆ ಬಗ್ಗೆ ಕಿಡಿಗೇಡಿಗಳು ಅಶ್ಲೀಲ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಶ್ಲೀಲ ಕಾಮೆಂಟ್ ಮಾಡಿರುವವರ ಮನಸ್ಥಿತಿ ಬಗ್ಗೆ ಶಾಸಕಿ ನಯನಾ ಮೋಟಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅವರು, ಮಹಿಳಾ ವಿರೋಧಿ ಮನೋಭಾವವನ್ನು ನಾನು ವಿರೋಧಿಸುತ್ತಿದ್ದೇನೆ. ಸ್ಲೀವ್ ಲೆಸ್ ಬಟ್ಟೆ ಹಾಕಿದರೆ ಕೆಲಸ ಮಾಡದ ರಾಜಕಾರಣಿ ಎನ್ನುತ್ತಾರೆ. ವೇಶ್ಯೆ ಎನ್ನುವ ಮಟ್ಟಕ್ಕೂ ಇಳಿಯುತ್ತಾರೆ. ಡಿಪಿ ಇಲ್ಲದ ಪ್ರೊಫೈಲ್ ಇಟ್ಟುಕೊಂಡು ಕಾಮೆಂಟ್ ಮಾಡುತ್ತಾರೆ. ಬಹುಶಃ ಒಂದು ದಿನ ನಾನು ಅವರನ್ನು ಎದುರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
"ಮಹಿಳಾ ರಾಜಕಾರಣಿಯಾಗಿ ಮಹಿಳಾ ವಿರೋಧಿ ಮನೋಭಾವಗಳನ್ನು ಎದುರಿಸುತ್ತಿದ್ದೇನೆ. ನಾ ಈ ರೀತಿ ಡ್ರೆಸ್, ಪ್ಯಾಂಟ್, ಜೀನ್ಸ್ ಅಥವಾ ಸ್ಲೀವ್‌ಲೆಸ್ ಬಟ್ಟೆ ಹಾಕಿಕೊಂಡರೆ, "ಕೆಲಸ ಮಾಡದ ರಾಜಕಾರಣಿ", "ರಸ್ತೆಗಳ ಗುಂಡಿ ಮುಚ್ಚದ ಶಾಸಕರು" "ತೆರಿಗೆದಾರರ ಹಣದಲ್ಲಿ ಬದುಕುವವರು" ಎಂದು ಹೇಳುತ್ತಾರೆ. ಇಷ್ಟಕ್ಕೇ ಮುಗಿಸದೇ ನನ್ನನ್ನು ವೇಶ್ಯೆ ಅಂತಲೂ ಕರೆಯುವ ಮಟ್ಟಕ್ಕೂ ಇಳಿಯುತ್ತಾರೆ.
ಈ ರೀತಿಯ ಕಾಮೆಂಟ್ ಮಾಡುವವರನ್ನು ನೇರವಾಗಿ ಪ್ರಶ್ನೆ ಮಾಡಬೇಕು ಅನ್ನಿಸುತ್ತದೆ. ಆದರೆ, ಹೆಚ್ಚಿನವರು ಡಿಪಿ ಇಲ್ಲದ ಪ್ರೊಫೈಲ್ ಇಟ್ಟುಕೊಂಡಿದ್ದಾರೆ. ಇನ್ನೂ ಕೆಲವರ ಇನ್‌ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಕೂಡಾ ಇಲ್ಲದವರಿದ್ದಾರೆ. ಬಹುಶಃ ಒಂದು ದಿನ ನಾನು ಅವರನ್ನು ನೇರವಾಗಿ ಎದುರಿಸುತ್ತೇನೆ. ಆದರೆ, ಸದ್ಯಕ್ಕೆ ಈ ಮಹಿಳಾ ವಿರೋಧಿ ಮನೋಭಾವವನ್ನಷ್ಟೇ ಪ್ರಶ್ನಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಓರ್ವನ ಬಂಧನ: ಇನ್ನೂ ಇದೀಗ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಹಾಗೂ ಅವಮಾನಕಾರಿ ಕಮೆಂಟ್‌ಗಳನ್ನು ಮಾಡಿದ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬ ಯುವಕನನ್ನು ಮೂಡಿಗೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications