ಹೊಳೆಮಕ್ಕಿಯ ತೋಟವೊಂದರಲ್ಲಿ ಅತ್ಯದ್ಭುತವಾಗಿ ಕಾಣಿಸಿಕೊಂಡ ನಾಗರಾಜ
Recommended Video

Chikkamagaluru : ಇಂಥಾ ನಾಗರಹಾವನ್ನ ನೀವು ನೋಡಿರಲೂ ಸಾಧ್ಯವೇ ಇಲ್ಲ | ಈ ಅದ್ಭುತ ವಿಡಿಯೋ ನೋಡಿ |Oneindia kannada
ಚಿಕ್ಕಮಗಳೂರು, ಅಕ್ಟೋಬರ್.24: ಕೊಪ್ಪ ತಾಲೂಕಿನ ಹೊಳೆಮಕ್ಕಿ ಗ್ರಾಮದ ತೋಟವೊಂದರಲ್ಲಿ ನಾಗರಹಾವಿನ ಹೆಡೆ ವಿಭಿನ್ನವಾಗಿ ಗೋಚರವಾಗಿರುವುದು ಸೋಜಿಗ ತಂದಿದೆ. ಅವಿನಾಶ್ ಎಂಬುವವರ ತೋಟದಲ್ಲಿ ಮಂಗಳವಾರ (ಅ.24) ಈ ಹಾವು ಕಾಣಿಸಿಕೊಂಡಿದೆ.
ನಾಗರಹಾವಿನ ಹೆಡೆ ವಿಭಿನ್ನವಾಗಿ ಗೋಚರಿಸುತ್ತಿದ್ದು, ಸೂರ್ಯನ ಕಿರಣಕ್ಕೆ ಕೆಂಪಾಗಿ ಹೊಳೆಯುತ್ತಿರುವುದನ್ನು ಚಿತ್ರದಲ್ಲಿ ನೀವು ಗಮನಿಸಬಹುದು. ಹೆಡೆಯಲ್ಲಿ ಬೆಂಕಿಯಿರುವಂತೆ ಭಾಸವಾಗಿದ್ದು, ನೋಡಲು ನಾಗರಾಜ ಅತ್ಯದ್ಭುತವಾಗಿ ಕಾಣಿಸುತ್ತಾನೆ.

ತೋಟಕ್ಕೆ ನುಗ್ಗಿದ ಹಾವನ್ನು ಕಂಡು ಅವಿನಾಶ್ ಅವರ ಸಾಕು ನಾಯಿ ಜೋರಾಗಿ ಬೊಗಳಲು ಶುರುವಿಟ್ಟುಕೊಂಡಿದೆ. ಆಗ ತಕ್ಷಣ ಎಚ್ಚೆತ್ತ ಮನೆಯವರು ತೋಟದ ಬಳಿ ಬಂದು ನೋಡಿದಾಗ ಹಾವು ಕಾಣಿಸಿಕೊಂಡಿದೆ.

ಇದೀಗ ಹಾವು ಹೆಡೆ ಎತ್ತಿರುವ ಚಿತ್ರ, ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಅದೇನೇ ಇರಲಿ ಈ ವಿಭಿನ್ನ ಹೆಡೆಯ ಹಾವು ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾಗಿರುವುದಂತು ನಿಜ.












Click it and Unblock the Notifications