ಚಿಕ್ಕಮಗಳೂರಿನಲ್ಲಿ ಆನೆ ಅನುಮಾನಾಸ್ಪದ ಸಾವು
ಚಿಕ್ಕಮಗಳೂರು, ಜುಲೈ 13: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕುಂದೂರು ಸಮೀಪ ಆನೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ.
ಕುಂದೂರು ಎಸ್ಟೇಟ್ ಚಂದ್ರೇಗೌಡ ಎಂಬುವರ ಕಾಫಿ ತೋಟದಲ್ಲಿ ಗಂಡಾನೆಯೊಂದು ಸಾವನ್ನಪ್ಪಿದ್ದು, ಎಂಟು ವರ್ಷವಿರಬಹುದೆಂದು ಅಂದಾಜಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಕಾಡಿನಿಂದ ಎಸ್ಟೇಟ್, ಜಮೀನುಗಳಿಗೆ ಲಗ್ಗೆ ಇಡುವ ಕಾಡಾನೆಗಳು ಬೆಳೆಗಳನ್ನು ನಾಶಪಡಿಸುತ್ತಿವೆ. ಆಗೊಮ್ಮೆ ಈಗೊಮ್ಮೆ ಗ್ರಾಮಸ್ಥರ ಕಣ್ಣಿಗೆ ಬೀಳುತ್ತಲೂ ಇವೆ. ದಾಳಿ ನಡೆಸಿರುವ ಉದಾಹರಣೆಗಳೂ ಸಿಗುತ್ತಿವೆ.

ಈ ಆನೆಯೂ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿದ್ದು, ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications