ಶನಿವಾರವೇ ಮಲೆನಾಡಲ್ಲಿ ಮಂಗಗಳ ಮಾರಣ ಹೋಮ: ಅಸಲಿಗೆ ಆಗಿದ್ದೇನು..?
ಚಿಕ್ಕಮಗಳೂರು, ಜೂನ್ 08: ಬಾಳೆ ಹಣ್ಣಿಗೆ ಜ್ಞಾನ ತಪ್ಪುವ ಔಷಧ ಹಾಕಿ ಮಂಗಗಳನ್ನು ದಾರುಣವಾಗಿ ಸಾಯಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರ ತಾಲೂಕಿನ ದ್ಯಾವಣ ಗ್ರಾಮದಲ್ಲಿ ನಡೆದಿದೆ.
ದ್ಯಾವಣ ಗ್ರಾಮದಲ್ಲಿ ಸುಮಾರು 30 ಮಂಗಗಳನ್ನು ಸಾಯಿಸಿ ಎಸೆಯಲಾಗಿದೆ. ಮೂವತ್ತು ಮಂಗಗಳ ತಲೆಯಲ್ಲೂ ಒಂದೇ ರೀತಿ ಗಾಯ, ರಕ್ತ ಸುರಿದು ಮೃತಪಟ್ಟಿವೆ. ಮೂವತ್ತು ಮಂಗಗಳಿಗೆ ತಲೆಗೆ ಒಡೆಯಲಾಗಿದೆ. ಹತ್ಯೆಯಾದ ಮಂಗಗಳ ಪೈಕಿ 16 ಗಂಡು, 14 ಹೆಣ್ಣು, 4 ಮರಿ ಮಂಗಗಳು ಸೇರಿವೆ. ಮೊದಲಿಗೆ ತೋಟದ ಬಾಳೆಹಣ್ಣಿಗೆ ಪ್ರಜ್ಞೆ ತಪ್ಪುವ ಔಷಧ ಬೆರೆಸಿರುವ ಪಾಪಿಗಳು, ಬಾಳೆಹಣ್ಣು ತಿಂದ ಬಳಿಕ ಪ್ರಜ್ಞೆ ತಪ್ಪಿ ಬಿದ್ದ ಮಂಗಗಳ ತಲೆಗೆ ಬಲವಾಗಿ ಹೊಡೆದು ಕೊಂದು ರಸ್ತೆಗೆ ಎಸೆದು ಹೋಗಿದ್ದಾರೆ.

ತೋಟದ ಬೆಳೆ ನಾಶ ಮಾಡುತ್ತವೆ ಎಂದು ಹೀಗೆ ಕೊಂದಿರಬಹುದು ಎಂದು ಶಂಕಿಸಲಾಗಿದ್ದು, ಮನುಷ್ಯತ್ವ ಇಲ್ಲದೇ ಮಂಗಗಳ ಮಾರಣಹೋಮ ನಡೆಸಿದವರ ವಿರುದ್ಧ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್‌ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆ ಬಳಿಕ ಸ್ಥಳಕ್ಕೆ ಡಿಎಫ್‌ಓ, ಆರ್‌ಎಫ್‌ಓ, ಪಿಎಸ್‌ಐ, ಪಶುಸಂಗೋಪನೆ, ಪಶುವೈದ್ಯರು, ಪಂಚಾಯತ್‌ನ, ಆಶಾ ಕಾರ್ಯಕರ್ತೆಯರು ಸೇರಿ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಮೂವರಿಗೆ ಗಂಭೀರ ಗಾಯ
ಚಿಕ್ಕಮಗಳೂರ: ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ನಲ್ಲಿ ನಡೆದಿದೆ. ಕೊಟ್ಟಿಗೆ ಹಾರದಿಂದ ಬರುತ್ತಿದ್ದ ಕಾರು ಹಾಗೂ ಮೂಡಿಗೆರೆ ಕಡೆಯಿಂದ ಬಂದ ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿದೆ. ಇನ್ನು ಗಾಯಾಳುಗಳನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications