ಚಿಕ್ಕಮಗಳೂರಲ್ಲಿ ಮತ್ತೆ ಮೂವರಿಗೆ ಕೊರೊನಾ ವೈರಸ್ ಸೋಂಕು
ಚಿಕ್ಕಮಗಳೂರು, ಮೇ 27: ಕಳೆದ ಐದು ದಿನಗಳಿಂದ ಯಾವುದೇ ಕೊರೊನಾ ವೈರಸ್ ಪ್ರಕರಣ ಇಲ್ಲದೆ ನೆಮ್ಮದಿಯಾಗಿದ್ದ ಮಲೆನಾಡು ಚಿಕ್ಕಮಗಳೂರು ಜನತೆಗೆ ಇಂದು ಕೊರೊನಾ ವೈರಸ್ ಆಘಾತ ಎದುರಾಗಿದೆ.
Recommended Video
ಮೂಡಿಗೆರೆಯಲ್ಲಿ ಕಂಟೇನ್ಮೆಂಟ್ ಝೋನ್,ಸ್ಥಳೀಯರಲ್ಲಿ ಆತಂಕ | Mudigere Chickmagalur
ಚಿಕ್ಕಮಗಳೂರು ಜಿಲ್ಲೆಯ ಮೂರು ಜನರಲ್ಲಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಬಂದಿರುವುದು ಮತ್ತೆ ಕಾಫಿನಾಡಿನ ಜನರಲ್ಲಿ ಆತಂಕ ಮನೆಮಾಡಿದೆ.
ಈ ಮೂವರು ಮುಂಬೈನಿಂದ ಬಂದು ಕೊಪ್ಪದಲ್ಲಿ ಕ್ವಾರಂಟೈನ್ ಇದ್ದರು. ಓರ್ವ ಕೊಪ್ಪ ಮೂಲದವನಾಗಿದ್ದು, ಮತ್ತಿಬ್ಬರು ಎನ್.ಆರ್ ಪುರ ಮೂಲದವರು. ಇವರಲ್ಲಿ ರೋಗಿ ನಂಬರ್-2402, 35 ವರ್ಷದವರಾಗಿದ್ದರೆ, ರೋಗಿ ನಂಬರ್-2404, 32 ವರ್ಷದವರಾಗಿದ್ದಾರೆ.

ಇನ್ನು ರೋಗಿ ನಂಬರ್-2405, 31 ವರ್ಷದವರಾಗಿದ್ದು ಮೂರು ಜನರೂ ಪುರುಷರಾಗಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 12 ಕೊರೊನಾ ವೈರಸ್ ಪ್ರಕರಣ ಪತ್ತೆಯಾದಂತಾಗಿದ್ದು, ಸೋಂಕಿತರಲ್ಲಿ 11 ಜನರೂ ಮುಂಬೈನಿಂದ ಬಂದವರಾಗಿದ್ದು, ಚಿಕ್ಕಮಗಳೂರು ಜಿಲ್ಲೆಗೆ ಮುಂಬೈ ಕಂಟಕವಾಗಿ ಪರಿಣಮಿಸುತ್ತಿದೆ.












Click it and Unblock the Notifications