Karnataka Election 2023 : ರಾಜಕೀಯ ಅಂದರೆ ಸುಳ್ಳು, ವಂಚನೆ: ಜನಾರ್ದನರೆಡ್ಡಿ ಹೀಗೆ ಹೇಳಿದ್ದೇಕೆ?
ರಾಜಕೀಯ ಎಂದರೆ ಒಬ್ಬರ ಬೆನ್ನು ಮೇಲೆ ಒಂದು ಕಾಲಿಟ್ಟು, ಮತ್ತೊಬ್ಬರ ತಲೆಯ ಮೇಲೆ ಮಗದೊಂದು ಕಾಲಿಟ್ಟು, ಅವರಿವರನ್ನು ತುಳಿಯುತ್ತಾ ಮುಂದಕ್ಕೆ ಹೋಗುವುದನ್ನು ರಾಜಕಾರಣಿಗಳು ರೂಢಿ ಮಾಡಿಕೊಂಡಿದ್ದಾರೆ ಎಂದು ಗಾಲಿ ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ, ಮಾರ್ಚ್, 13: ರಾಜಕೀಯ ಎಂದರೆ ತಂತ್ರ, ಕುತಂತ್ರವಾಗಿದೆ. ಒಬ್ಬರ ಬೆನ್ನು ಮೇಲೆ ಒಂದು ಕಾಲಿಟ್ಟು, ಮತ್ತೊಬ್ಬರ ತಲೆಯ ಮೇಲೆ ಮಗದೊಂದು ಕಾಲಿಟ್ಟು, ಅವರಿವರನ್ನು ತುಳಿಯುತ್ತಾ ಮುಂದಕ್ಕೆ ಹೋಗುವುದನ್ನು ರಾಜಕಾರಣಿಗಳು ರೂಢಿ ಮಾಡಿಕೊಂಡಿದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಬಾಗೇಪಲ್ಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ ಬಾಗೇಪಲ್ಲಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ತಾಲೂಕು ಶಾಖೆ ಆಶ್ರಯದಲ್ಲಿ ಪಟ್ಟಣದ ಕೆಹೆಚ್‌ಬಿ ಲೇಔಟ್ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿತ್ತು. ನಂತರ ಮಾತನಾಡಿದ ಅವರು, ಈ ಹಿಂದೆ ಅರಿಕೆರೆ ಕೃಷ್ಣಾರೆಡ್ಡಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಂದಿನ ಪರಿಸ್ಥಿತಿಯಲ್ಲಿ ಚಿತ್ರನಟ ಸಾಯಿಕುಮಾರ್ ಅವರಿಗೆ ಟಿಕೆಟ್ ನೀಡಲಾಯಿತು. ನಾನು ಕೂಡ ಪ್ರಚಾರ ಮಾಡಿದ್ದೆ. ಈ ಸಂದರ್ಭದಲ್ಲಿ ಸಾಯಿಕುಮಾರ್ ಕೇವಲ 3 ಸಾವಿರ ಮತಗಳ ಅಂತರದಿಂದ ಸೋತಿದ್ದರು ಎಂದರು.

15 ವರ್ಷಗಳ ಬಳಿಕ ರಾಜಕೀಯಕ್ಕೆ
ಈ ಹಿಂದೆ ನಾನು ಬೇರೆ ರಾಜಕೀಯ ಪಕ್ಷವನ್ನು ನಂಬಿ ಮೋಸ ಹೋಗಿದ್ದೆ. ನದಿಯಲ್ಲಿ ಈಜುವ ಮೀನನ್ನು ಬಂಧಿಸಿದ ಹಾಗೆ ನನ್ನನ್ನು ಬಲೆಯಲ್ಲಿ ಬಂಧಿಸಿದ್ದರು. ಮೂವತ್ತಕ್ಕೂ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಳ್ಳುವ ತಾಕತ್ತು ನನಗಿದೆ. ಬದುಕಿದರೆ ಆಂಧ್ರ ಪ್ರದೇಶದ ದಿ.ವೈ ಎಸ್. ರಾಜಶೇಖರ ರೆಡ್ಡಿ, ತಮಿಳುನಾಡಿನ ಮಾಜಿ ಸಿಎಂ. ದಿ.ಜಯಲಲಿತ ಹಾದಿಯಲ್ಲಿ ಸಾರ್ವಜನಿಕ ಸೇವೆ ಮಾಡುವ ಮೂಲಕ ಬದುಕಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.
ಹದಿನೈದು ವರ್ಷಗಳ ಬಳಿಕ ನಾನು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇನೆ. ಆಂಧ್ರ ಪ್ರದೇಶದಲ್ಲಿ ಒಂದು ಅವಧಿಗೆ ಸಿಎಂ ಆಗಿದ್ದ ಡಾ.ವೈ.ಎಸ್.ರಾಜಶೇಖರರೆಡ್ಡಿಯವರ ಅಗಲಿಕೆಯ ನಂತರವೂ ಎಲ್ಲಾ ವರ್ಗದ ಜನರು ಅವರನ್ನು ಆರಾಧಿಸುತ್ತಿದ್ದಾರೆ. ಪ್ರತಿ ಊರಿನಲ್ಲಿಯೂ ಅವರ ಫೋಟೋ ಇಟ್ಟು ಪೂಜೆ ಮಾಡುತ್ತಿದ್ದಾರೆ. ಕೊನೆಯವರೆಗೂ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಬೇಕು ಎಂಬುದು ನನ್ನ ಆಸೆಯಾಗಿದ್ದು, ಆ ನಿಟ್ಟಿನಲ್ಲಿಯೇ ಸಾಗುತ್ತೇನೆಂದು ಪ್ರಮಾಣ ಮಾಡಿದರು.

ಬಿಜೆಪಿಯಿಂದ ಮೋಸ ಹೋದೆ
ಬಿಜೆಪಿ ಪಕ್ಷದ ಜೊತೆಗಿದ್ದ ಸಂಬಂಧ ಕುರಿತು ಪ್ರತಿಕ್ರಯಿಸಿದ ಅವರು, ಬಿಳಿಯಾಗಿರುವುದೆಲ್ಲವೂ ಹಾಲೇ ಎಂಬುವಂತೆ ನಂಬಿ ಮೋಸಹೋದೆ ಎಂದು ಬಿಜೆಪಿ ಪಕ್ಷದ ಕಾರ್ಯವೈಖರಿ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಇದೇ ವೇಳೆ ಮುಂಬರುವ ವಿಧಾನಸಭಾ ಚುನಾವಣೆಗೆ ಬಾಗೇಪಲ್ಲಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಅರಿಕೆರೆ ಸಿ.ಕೃಷ್ಣರೆಡ್ಡಿಯವರನ್ನು ಘೋಷಿಸಿದರು.
ಸ್ಥಳಿಯ ಮುಖಂಡರಾದ ಅರಿಕೆರೆ ಕೃಷ್ಣಾರೆಡ್ಡಿ ಇತ್ತೀಚೆಗೆ ಬೆಂಗಳೂರಿನ ನನ್ನ ಮನೆಗೆ ಬಂದು ನೀವು ಹೊಸ ಪಕ್ಷ ಸ್ಥಾಪನೆ ಮಾಡಿದ್ದೀರಿ. ಪಕ್ಷದಲ್ಲಿ ನನಗೆ ಒಂದು ಅವಕಾಶ ಕೊಡಿ. ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾರ್ಯಕರ್ತರ ಸಂಘಟನೆ ಮಾಡುತ್ತೇನೆ. ಈ ಮೂಲಕ ಪಕ್ಷವನ್ನು ಬಲಪಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದ್ದರಿಂದ ನಾನು ಬಾಗೇಪಲ್ಲಿಯ ಬೃಹತ್ ಕಾರ್ಯಕರ್ತರ ಸಮಾವೇಶಕ್ಕೆ ಬಂದಿದ್ದೇನೆ ಎಂದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications