ಚಿಕ್ಕಬಳ್ಳಾಪುರ ಬೆಂಗಳೂರು ನಡುವೆ ಹೊಸ ರೈಲು: ಇಂದಿನಿಂದ ಸಂಚಾರ ಆರಂಭ!
ಚಿಕ್ಕಬಳ್ಳಾಪುರ ಡಿಸೆಂಬರ್ 11: ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಡುವೆ ಇಂದಿನಿಂದ ಬರೋಬ್ಬರಿ ಆರು ರೈಲುಗಳ ಸಂಚಾರ ಆರಂಭವಾಗಲಿದ್ದು, ಇದರಿಂದ ದಿನಪೂರ್ತಿ ರೈಲು ಸೇವೆ ಲಭ್ಯವಾದಂತಾಗಿದೆ. ಇದರಿಂದ ಬೆಂಗಳೂರಿಗೆ ನಿತ್ಯ ಹೋಗಿ ಬರುವ ಸ್ಥಳೀಯರು, ವ್ಯಾಪಾರಸ್ಥರು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲುಗಳ ಸೇವೆ ಆರಂಭಿಸಲಾಗಿತ್ತು. ಈ ರೈಲುಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಗೆ ಬಂದು ನಿಲ್ಲುತ್ತಿದ್ದವು. ಅಷ್ಟೂ ರೈಲುಗಳನ್ನು ಈಗ ಚಿಕ್ಕಬಳ್ಳಾ ಪುರದವರೆಗೂ ಸಂಚರಿಸಲು ಹಸಿರು ನಿಶಾನೆ ತೋರಲಾಗಿದೆ. ಬೆಂಗಳೂರಿ ನಿಂದ ದೇವನಹಳ್ಳಿವರೆಗೂ ಇದ್ದ ರೈಲು ಸಂಚಾರವನ್ನು ಕಂಟೋನ್ವೆಂಟ್ ನಿಂದ ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸಲಾಗಿದೆ.

ದೇವನಹಳ್ಳಿಯಿಂದ ಬೆಂಗಳೂರುವರೆಗೂ ಇದ್ದ ರೈಲು ಸಂಚಾರ ಚಿಕ್ಕಬಳ್ಳಾಪುರದಿಂದಕಂಟೋನ್ವೆಂಟ್‌ವರೆಗೂ ವಿಸ್ತರಿಸಲಾಗಿದೆ. ಪ್ರಯಾಣಿಕರು ಬೇಕಾಗಿದ್ದಾರೆ: ಸಧ್ಯ ಭಾನುವಾರ ಹೊರತುಪಡಿಸಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ ಮತ್ತು ಕೋಲಾ ರದ ನಡುವೆ ಎರಡು ರೈಲುಗಳು ಸಂಚರಿಸುತ್ತಿವೆ. ಬೆಳಗ್ಗೆ ಮತ್ತು ಸಂಜೆ ರೈಲು ಸೇವೆ ಇದೆ.
ಆದರೆ ಈಗ ಮತ್ತೆ ಆರು ರೈಲು ಸೇವೆಗಳು ಆರಂಭವಾಗಲಿದ್ದು, ಬೆಳ್ಳಂಬೆಳಗ್ಗೆಯಿಂದ ರಾತ್ರಿ ವರೆಗೂ ರೈಲು ಸಂಚರಿಸಲಿವೆ. ಇದರಿಂದ ಚಿಕ್ಕಬಳ್ಳಾಪುಠದಿಂದ ಬೆಂಗಳೂರಿಗೆ ಹೋಗುವ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಹೆಚ್ಚಿನ ಜನ ಬಂದರೆ ರೈಲುಗಳ ಸೇವೆ ಮತ್ತಷ್ಟು ವಿಸ್ತ ರಣೆಯಾಗಲಿದೆ. ಇಲ್ಲವಾದಲ್ಲಿ ಕಷ್ಟವಾಗಲಿದೆ. ಕೇವಲ 20 ರೂ. ಕೊಟ್ಟು ಬೆಂಗಳೂರಿಗೆ ಹೋಗುವ ಅವಕಾಶ ರೈಲ್ವೆ ಸೇವೆಯಿಂದ ಲಭ್ಯವಾಗಲಿದೆ. ದುಬಾರಿ ಟಿಕೆಟ್ ದರ ಕೊಟ್ಟು ಬೆಂಗಳೂರಿಗೆ ಹೋಗುವ ಬದಲು ಕಡಿಮೆ ವೆಚ್ಚದಲ್ಲಿ ಬೆಂಗಳೂರಿಗೆ ಹೋಗಲು ಇದರಿಂದ ಅನುಕೂಲವಾಗಲಿದೆ. ಅಲ್ಲದೇ ಬೆಳಗ್ಗೆ ಮಧ್ಯಾಹ್ನ, ಸಂಜೆ ಕೂಡಾ ರೈಲು ಸೇವೆ ಇರುವುದರಿಂದ ಪಾಸ್ ಮಾಡಿಸಿದರೆ ಇನ್ನಷ್ಟು ಅಗ್ಗವಾಗಲಿದೆ. ಹೀಗಾಗಿ ಹೆಚ್ಚುವರಿ ರೈಲು ಸೇವೆ ಜನರಿಗೆ ಹೆಚ್ಚಿನ ಅನುಕೂಲವಾಗಬಹು ದೆಂಬ ನಿರೀಕ್ಷೆ ಇದೆ.

ಇನ್ನಷ್ಟು ಅಭಿವೃದ್ಧಿ ಆಗಬೇಕು: ಚಿಕ್ಕಬಳ್ಳಾ ಪುರಿ ಜಿಲ್ಲಾ ಕೇಂದ್ರಕ್ಕಿಂತ ಗೌರಿಬಿದನೂರಿಗೆ ಸಾಕಷ್ಟು ರೈಲು ಸಂಚಾರವಿದೆ. ಚಿಕ್ಕಬಳ್ಳಾಪುರ ದಿಂದ ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ನಿರ್ಮಾಣದ ಸರ್ವೆ ಕಾರ್ಯ ನಡೆದಿದ್ದು, ನಿರ್ಮಾಣ ಕಾರ್ಯ ಯಾವಾಗ ನಡೆಯುತ್ತದೆಯೋ ಗೊತ್ತಿಲ್ಲ.
ಇನ್ನೊಂದೆಡೆ ಚಿಕ್ಕಬಳ್ಳಾಪುರ ಬಾಗೇಪಲ್ಲಿ ಮಾರ್ಗವಾಗಿ ಪುಟ್ಟಪರ್ತಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗದ ಬಗ್ಗೆಯೂ ಚರ್ಚೆ ನಡೆದಿದೆಯಾದರೂ ಅನುಷ್ಠಾನ ಯಾವಾಗ ಆಗುತ್ತೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಎರಡೂ ಮಾರ್ಗಗಳ ಜತೆ ಕೋಲಾರಕ್ಕೂ ಹೆಚ್ಚಿನ ರೈಲು ಸಂಚಾರ ಆರಂಭಿಸಿದರೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಎಲ್ಲಡೆಯಿಂದ ರೈಲ್ವೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ.
ಸೌಲಭ್ಯಗಳು ಮರೀಚಿಕೆ:
ಇತ್ತೀಚೆಗಷ್ಟೇ ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಣ ಮಾಡುವ ಕಾರ್ಯ ಪೂರ್ಣಗೊಂಡಿದೆ. ಈಗ ಹೊಸದಾಗಿ ಆರು ರೈಲುಗಳ ಸಂಚಾರ ಆರಂಭವಾಗುತ್ತಿದೆ. ಆದರೆ ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಲಭ್ಯ ಮರೀಚಿಕೆಯಾಗಿವೆ.
ಶೌಚಾಲಯವಿದೆಯಾದರೂ ತೆರೆದಿದ್ದೇ ಕಡಿಮೆ. ಇನ್ನೊಂದೆಡೆ ರೈಲ್ವೆ ನಿಲ್ದಾಣದಲ್ಲಿ ಸರಿಯಾದ ವಿದ್ಯುತ್ ದೀಪಗಳು ಇಲ್ಲದೆ ಸಂಜೆಯಾದರೆ ಬಿಕೋ ಎನ್ನುತ್ತದೆ. ಇನ್ನು ರೈಲ್ವೆ ನಿಲ್ದಾಣದ ಮೂಲಕವೇ ರೈಲ್ವೆ ಹಳಿಗಳ ಮೇಲೆ ದ್ವಿಚಕ್ರವಾಹನಗಳಲ್ಲಿ ಪಕ್ಕದ ವಾರ್ಡ್‌ಗಳಿಗೆ ಹೋಗುವವರ ಸಂಖ್ಯೆಯೂ ಹೆಚ್ಚಿದೆ. ಸದ್ಯಕ್ಕೆ ಚಿಕ್ಕಬಳ್ಳಾಮರಕ್ಕೆ ಹೆಚ್ಚಿನ ರೈಲು ಸಂಪರ್ಕ ಕಲ್ಪಿಸಿರುವುದು ಉದ್ಯೋಗ ಬಯಸಿ ಹೋಗುವ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದರೆ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಇರುವುದರಿಂದ ಮಹಿಳೆಯರು ರೈಲು ಅವಲಂಭಿಸುವುದು ಅನುಮಾನ. ಹೀಗಾಗಿ ಸದ್ಯಕ್ಕೆ ಹೊಸದಾಗಿ ಆರಂಭವಾಗುತ್ತಿರುವ ರೈಲುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದರೆ ಅನುಕೂಲವಾಗಲಿದೆ. ಆದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರಾ ಎಂಬುದೇ ಈಗ ಪ್ರಶ್ನೆ.
ರೈಲುಗಳ ಸಂಚಾರ ಸಮಯ :-
06531 ಸಂಖ್ಯೆಯ ರೈಲು ಬೆಂಗಳೂರು ವಲಯದಿಂದ ಬೆಳಗ್ಗೆ 5.10ಕ್ಕೆ ಹೊರಟು 6.55 ಕ್ಕೆ ಚಿಕ್ಕಬಳ್ಳಾಪುರ ತಲುಪಲಿದೆ, ಇದೇ ರೈಲು ಸಂಖ್ಯೆ (06535) ಬೆಳಿಗ್ಗೆ 8.20 ಕ್ಕೆ ಚಿಕ್ಕಬಳ್ಳಾಪುರ ಬಿಟ್ಟು ಬೆಂಗಳೂರು ವಲಯಕ್ಕೆ ಬೆಳಿಗ್ಗೆ 10.40ಕ್ಕೆ ತಲುಪಲಿದೆ.
ನಂತರ 06536 ಸಂಖ್ಯೆಯ ರೈಲು ಮಧ್ಯಾಹ್ನ 12.20ಕ್ಕೆ ಬೆಂಗಳೂರು ವಲಯ ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಮಧ್ಯಾಹ್ನ 1.40 ಕ್ಕೆ ತಲುಪಲಿದೆ, 06537 ಸಂಖ್ಯೆಯ ರೈಲು ಚಿಕ್ಕಬಳ್ಳಾಪುರದಿಂದ ಮಧ್ಯಾಹ್ನ 2 ಗಂಟೆಗೆ ಬಿಟ್ಟು
ಬೆಂಗಳೂರು ವಲಯಕ್ಕೆ ಮಧ್ಯಾಹ್ನ 3.15ಕ್ಕೆ ತಲುಪಲಿದೆ.
ತದನಂತರ 06538 ಸಂಖ್ಯೆಯ ರೈಲು ಸಂಜೆ 4ಕ್ಕೆ ಬೆಂಗಳೂರು ವಲಯ ಬಿಟ್ಟು ಚಿಕ್ಕಬಳ್ಳಾಪುರ ನಿಲ್ದಾಣಕ್ಕೆ ಸಂಜೆ 6.ಕ್ಕೆ ತಲುಪಲಿದೆ. 06532 ಸಂಖ್ಯೆಯ ರೈಲು ರಾತ್ರಿ 6.30ಕ್ಕೆ ಬಿಟ್ಟು ಬೆಂಗಳೂರು ವಲಯವನ್ನು
ರಾತ್ರಿ 9 ಕ್ಕೆ ಸೇರಲಿದೆ. ಹಾಗೆಯೇ 06593 ಸಂಖ್ಯೆಯ ರೈಲು ಬೆಳಿಗ್ಗೆ 10.10ಕ್ಕೆ ಯಶವಂತಪುರ ನಿಲ್ದಾಣ ಬಿಟ್ಟು ಚಿಕ್ಕಬಳ್ಳಾಪುರಕ್ಕೆ 11.40ಕ್ಕೆ ತಲುಪಲಿದೆ. 06594 ಸಂಖ್ಯೆಯ ರೈಲು ಮಧ್ಯಾಹ್ನ 1ಕ್ಕೆ ಚಿಕ್ಕಬಳ್ಳಾಪುರ ಬಿಟ್ಟು
ಮಧ್ಯಾಹ್ನ 2.50ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.
ಚಿಕ್ಕಬಳ್ಳಾಪುರದಿಂದ ಹೆಚ್ಚು ರೈಲುಗಳ ಸಂಚಾರವಿಲ್ಲದ ಕಾರಣ ಯಾರೂ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆದರೆ ಈಗ ರೈಲುಗಳ ಸಂಖ್ಯೆ ಹೆಚ್ಚಾಗಿದ್ದು ಇನ್ನು ಮುಂದೆ ಹೆಚ್ಚಿನ ಪ್ರಯಾಣಿಕರು ಬರಬಹುದು. ಕಡಿಮೆ ದರ ಇರುವುದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಇದರ ಬಗ್ಗೆ ಇನ್ನಷ್ಟು ಪ್ರಚಾರ ಮಾಡಬೇಕಿದೆ ಎಂದು ರೈಲು ಪ್ರಯಾಣಿಕ ರವಿಕುಮಾರ್ ಹೇಳಿತ್ತಾರೆ.
ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಹೋಗಲು ಈಗ ಸಾಕಷ್ಟು ರೈಲುಗಳ ಸಂಚಾರ ಆರಂಭವಾಗಿದೆ. ಹೀಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ರೈಲು ಸೇವೆಯನ್ನು ಬಳಸಿಕೊಳ್ಳಬೇಕು. ಇದರಿಂದ ಇನ್ನಷ್ಟು ರೈಲು ಸಂಚಾರ ಆರಂಭಕ್ಕೆ ನೆರವಾಗಲಿದೆ ಎಂದು ಕೇಂದ್ರ ರೈಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿ ಸದಸ್ಯರಾದ ಡಾ.ಜಿ.ವಿ.ಮಂಜುನಾಥ್ ಹೇಳಿದ್ದಾರೆ.
NEW TRAIN TIME TABLE ::-- CHIKKABALLAPUR TO BANGALORE ONLY 20 RS
1) 06531 05:10AM BNG CNT TO CHIKKABALLAPUR 06.55 AM
2) CHIKKABALLAPUR 08:20AM TO BNG CNT 10:40AM
3) 06538 BNG CNT 04:00 PM TO CHIKKABALLAPUR 06 :00 PM
4)06593 YASHWANTPUR 11:10 AM TO CHIKKABALLAPUR 11: 40 AM
5)06594 CHIKKABALLAPUR 01:00 PM TO YASHWANTPUR O2:50 PM
6)06532 CHIKKABALLAPUR 06:30 PM TO BNG CNT 09:00 PM












Click it and Unblock the Notifications